ಸುದ್ದಿಮೂಲ ವಾರ್ತೆ ಚೆನ್ನೈ, ೆ.13:
ಮುಖ್ಯಮಂತ್ರಿಿ ಎಂ.ಕೆ.ಸ್ಟಾಾಲಿನ್ ನೇತೃತ್ವದ ಡಿಎಂಕೆ ಸರ್ಕಾರ ಶುಕ್ರವಾರ ಕಲೈನಾರ್ ಮಹಿಳಾ ಹಕ್ಕುಗಳ ಯೋಜನೆ ಅಡಿ ಮಹಿಳಾ ಲಾನುಭವಿಗಳಿಗೆ 5 ಸಾವಿರ ರೂ. ಹಣವನ್ನು ಅವರ ಬ್ಯಾಾಂಕ್ ಖಾತೆಗೆ ಜಮಾ ಮಾಡಿದೆ.
ಈ ಕುರಿತು ಸಿಎಂ ಸ್ಟಾಾಲಿನ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಚುನಾವಣೆ ಗೆಲ್ಲಲ್ಲು ಬಿಹಾರದಲ್ಲಿ ಎನ್ಡಿಿಎ ಮೈತ್ರಿಿಕೂಟ ಮುಖ್ಯಮಂತ್ರಿಿ ಮಹಿಳಾ ರೋಜ್ಗಾರ್ ಅಡಿಯಲ್ಲಿ ಮಹಿಳೆಯರ ಬ್ಯಾಾಂಕ್ ಖಾತೆಗಳಿಗೆ ಹಣ ವರ್ಗಾಯಿಸಿದ ಮಾದರಿಯನ್ನೇ ತಮಿಳುನಾಡಿನಲ್ಲಿ ಡಿಎಂಕೆ ಅನುಸರಿಸಿದೆ.
ರಾಜ್ಯದ 1.31 ಕೋಟಿ ಮಹಿಳೆಯರ ಬ್ಯಾಾಂಕ್ ಖಾತೆಗಳಿಗೆ 5,000 ರೂ. ಜಮಾ ಮಾಡಲಾಗಿದೆ. ಲಾನುಭವಿಗಳಿಗೆ ೆಬ್ರವರಿ, ಮಾರ್ಚ್ ಹಾಗೂ ಏಪ್ರಿಿಲ್ ತಿಂಗಳ ಕಂತು 3000 ರೂ. ಹಾಗೂ 2000 ರೂ.ಗಳನ್ನು ಬೇಸಿಗೆ ವಿಶೇಷ ಪ್ಯಾಾಕೇಜ್ ಅಡಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ ಎಂದು ಮುಖ್ಯಮಂತ್ರಿಿ ಎಂ.ಕೆ.ಸ್ಟಾಾಲಿನ್ ಘೋಷಿಸಿದ್ದಾರೆ.
ಶೀಘ್ರದಲ್ಲೇ ರಾಜ್ಯದಲ್ಲಿ ಎದುರಾಗುವ ವಿಧಾನಸಭಾ ಚುನಾವಣೆ ಹಿನ್ನೆೆಲೆಯಲ್ಲಿ ಬಿಜೆಪಿ, ಎಐಎಡಿಎಂಕೆ ಹಾಗೂ ಇತರ ಪಕ್ಷಗಳು ಮಹಿಳೆಯರಿಗೆ ನೀಡುವ ಹಣ ವರ್ಗಾವಣೆಯನ್ನು ಮೂರು ತಿಂಗಳು ತಡೆಯಲು ಯತ್ನಿಿಸುತ್ತಿಿದ್ದಾರೆ. ಹೀಗಾಗಿ ಮಹಿಳಾ ಹಕ್ಕುಗಳ ಅನುದಾನವನ್ನು ಮುಂಗಡವಾಗಿ ಜಮಾ ಮಾಡಲಾಗಿದೆ ಎಂದು ಸಿಎಂ ಹೇಳಿಕೊಂಡಿದ್ದಾಾರೆ.
ಚುನಾವಣೆಯಲ್ಲಿ ಗೆದ್ದರೆ 2 ಸಾವಿರ ರೂ. : ದ್ರಾಾವಿಡ ಮಾದರಿ 2.0 ಅಡಿಯಲ್ಲಿ ನಮ್ಮ ಪಕ್ಷ ಮತ್ತೆೆ ಅಧಿಕಾರಕ್ಕೆೆ ಬಂದರೆ ಪ್ರಸ್ತುತ ಇರುವ 1,000 ರೂ. ಮಾಸಿಕ ಸಹಾಯ ಧನವನ್ನು 2,000 ರೂ.ಗೆ ದ್ವಿಿಗುಣಗೊಳಿಸಲಾಗುವುದು. ಇದು ಮುತ್ತುವೇಲ್ ಕರುಣಾನಿಧಿ ಸ್ಟಾಾಲಿನ್ ನನ್ನ ಸಹೋದರಿಯರಿಗೆ ನೀಡುವ ಭರವಸೆ ಎಂದು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.

