ಸುದ್ದಿಮೂಲ ವಾರ್ತೆ ರಾಯಚೂರು, ಡಿ.23:
ರಾಯಚೂರು ಮಹಾನಗರ ಪಾಲಿಕೆಯಿಂದ ಲೀಡ್ ಬ್ಯಾಾಂಕ್, ಭಾರತೀಯ ಸ್ಟೇಟ್ ಬ್ಯಾಾಂಕ್ ಸಹಯೋಗದಲ್ಲಿ ಬೀದಿ ಬದಿ ವ್ಯಾಾಪಾರಸ್ಥರಿಗೆ ಪಿಎಂ-ಸ್ವ ನಿಧಿ ಅಡಿ ಸಾಲ ಮಂಜೂರಾತಿ ಪತ್ರ ವಿತರಿಸಲಾಯಿತು.
ಸುಮಾರು 50 ಲಾನುಭವಿಗಳಿಗೆ ಸ್ಥಳದಲ್ಲಿಯೇ ಸಾಲಗಳನ್ನು ಮಂಜೂರು ಮಾಡಿ ದೃಢೀಕರಿಸಲಾಯಿತು. ಇಂದು ಸ್ವೀಕೃತಿಯಾದ ಎಲ್ಲ ಅರ್ಜಿಗಳನ್ನು ನಾಳೆಯೊಳಗೆ ಸಾಲ ಮಂಜೂರು ಮಾಡಲಾಗುವುದು ಎಂದು ಪ್ರಾಾದೇಶಿಕ ವ್ಯವಸ್ಥಾಾಪಕಿ ಸೀತಾಬಾಯಿ ತಿಳಿಸಿದರು.
ಬೀದಿ ವ್ಯಾಾಪಾರಿಗಳು ಹಾಗೂ ಬೀಡಿ ಮಾರಾಟಗಾರರಿಗೆ ಸ್ವಾಾವಲಂಬಿ ಜೀವನೋಪಾಯಕ್ಕೆೆ ಅಗತ್ಯವಾದ ಆರ್ಥಿಕ ಸಹಾಯ ಒದಗಿಸುವುದಾಗಿದ್ದು, ಸರ್ಕಾರದ ಈ ಮಹತ್ವದ ಯೋಜನೆಯ ಬಗ್ಗೆೆ ಅರಿವು ಮೂಡಿಸಲಾಯಿತು.
ಕಾರ್ಯಕ್ರಮಕ್ಕೆೆ ಬೆಳಿಗ್ಗೆೆಯಿಂದಲೇ ಉತ್ತಮ ಸ್ಪಂದನೆ ದೊರೆತಿದ್ದು, ಸುಮಾರು 200 ಲಾನುಭವಿಗಳು ಭಾಗವಹಿಸಿದ್ದರು. ಬ್ಯಾಾಂಕ್ ಅಧಿಕಾರಿಗಳು ಲಾನುಭವಿಗಳಿಗೆ ಯೋಜನೆಯ ವಿವರಗಳು, ಅರ್ಹತೆ, ದಾಖಲೆಗಳು ಹಾಗೂ ಸಾಲ ಪ್ರಕ್ರಿಿಯೆಗಳ ಕುರಿತು ಸ್ಥಳದಲ್ಲಿಯೇ ಮಾಹಿತಿ ನೀಡಿದರು.
50 ಸಾವಿರ ವರೆಗಿನ ಸಾಲ ಸೌಲಭ್ಯವನ್ನು ಬೀದಿ ಬದಿ ವ್ಯಾಾಪಾರಿಗಳು ಪಡೆದು ಪ್ರಯೋಜನ ಪಡೆದುಕೊಳ್ಳಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ. ಪಾಲಿಕೆ, ಲೀಡ್ ಬ್ಯಾಾಂಕ್ ಹಾಗೂ ಬ್ಯಾಾಂಕ್ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿಿತರಿದ್ದರು.
ಈ ಸಂದರ್ಭದಲ್ಲಿ ಲೀಡ್ ಬ್ಯಾಾಂಕ್ ವ್ಯವಸ್ಥಾಾಪಕ ಸುಧೀಂದ್ರ, ಪಾಲಿಕೆ ಅಧಿಕಾರಿಗಳಾದ ಕೃಷ್ಣ ಶಾವಂತಗೇರಿ, ಸಂತೋಷ ರಾಣಿ, ಸುರೇಶ ವಿಭೂತಿಮಠ, ರಸೂಲ್ಸಾಬ್, ಆನಂದ ವಾಲಿ ಹಾಗೂ ಲಾನುಭವಿಗಳಿದ್ದರು.
ಬೀದಿ ಬದಿ ವ್ಯಾಾಪಾರಿಗಳಿಗೆ ಸಾಲ ಮಂಜೂರಾತಿ ಮೇಳ 50 ಸಾವಿರ ಸಾಲ ಸದ್ಬಳಕೆ ಮಾಡಿಕೊಳ್ಳಲು ಸಲಹೆ

