ಶಿಡ್ಲಘಟ್ಟದಲ್ಲಿ ವಿಜೃಂಭಣೆಯ 514ನೇ ಕೆಂಪೇಗೌಡರ ಜಯಂತೋತ್ಸವ
ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಜೂ 27 : ನಾಡಪ್ರಭು ಕೆಂಪೇಗೌಡರ 514ನೇ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಕೆಂಪೇಗೌಡರ ರಥೋತ್ಸವಕ್ಕೆ ಶಾಸಕ ಬಿ.ಎನ್.ರವಿಕುಮಾರ್ ರವರು ಹಸಿರು ನಿಶಾನೆ ಮೂಲಕ ಚಾಲನೆ ನೀಡಿದರು.
ಶಿಡ್ಲಘಟ್ಟ ಬಸ್ ನಿಲ್ದಾಣ ದಿಂದ ಟಿ.ಬಿ ರಸ್ತೆ ಮೂಲಕ ನ್ಯಾಯಲಯದ ಸಮೀಪ ದಿಬ್ಬೂರಹಳ್ಳಿ ರಸ್ತೆ ವರೆಗೂ ವಿವಿಧ ಕಲಾತಂಡಗಳೊಂದಿಗೆ ಕೆಂಪೇಗೌಡರ ಪಲ್ಲಕ್ಕಿಗಳ ಮೆರವಣಿಗೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನಿವೃತ್ತ ನ್ಯಾಯಮೂರ್ತಿಗಳ ವಿ.ಗೋಪಾಲ ಗೌಡ ರವರು ಕೆಂಪೇಗೌಡರು ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆದಿದೆ ಎಂದರೆ ಇದಕ್ಕೆ ಕಾರಣ ಕೆಂಪೇಗೌಡರ ಶ್ರಮ ಸಾಕಷ್ಟು ಇದೆ. ನಾಡಪ್ರಭು ಕೆಂಪೇಗೌಡರ 514ನೇ ಜಯಂತಿಯನ್ನು ಸರ್ವ ಕುಲಬಂಧು ಜೊತೆಗೂಡಿ ಜಯಂತಿಯನ್ನು ಆಚರಣೆ ಮಾಡುತ್ತಿರುವುದು ಹೆಮ್ಮೆ ಎಂದರು.
ಕೆಂಪೇಗೌಡರು ಬೃಹತ್ ಬೆಂಗಳೂರನ್ನು ನಿರ್ಮಾಣ ಮಾಡಿಕೊಟ್ಟ ಪರಿಣಾಮ ಇಡೀ ವಿಶ್ವವೇ ತಿರುಗಿ ನೋಡುತ್ತಿದೆ. ಕೋಟ್ಯಂತರ ಜನರು ಇಂದು ಇಡೀ ಬೆಂಗಳೂರು ನಗರದಲ್ಲಿ ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದಾರೆ ಎಂದರು .
ಇದೇ ಸಂದರ್ಭದಲ್ಲಿ 2022 -23ನೇ ಸಾಲೀನಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ 101 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಲಕ್ಕಿನಾರಾಯಣ ರೆಡ್ಡಿ 101 ವಿದ್ಯಾರ್ಥಿಗೆ ತಲಾ 5 ಸಾವಿರ ರೂಪಾಯಿ ಚೆಕ್ ವಿತರಿಸಿದರು.
ಈ ಕಾರ್ಯಕ್ರಮದಲ್ಲಿ ಸಮಾಜ ಸೇವಕ ಆಂಜಿನಪ್ಪ, ಕಾಂಗ್ರೆಸ್ ಮುಖಂಡ ರಾಜೀವ್ ಗೌಡ, ಬಿಜೆಪಿ ಮುಖಂಡ ಸೀಕಲ್ ರಾಮಚಂದ್ರಗೌಡ, ಜೆಡಿಎಸ್ ಯುವ ಮುಖಂಡ ತಾದೂರು ರಘು, ಗೋವಿಂದರಾಜ್., ಲಕ್ಕಿನಾರಾಯಣರೆಡ್ಡಿ, ಕೋನಪ್ಪರೆಡ್ಡ, ಸುಬ್ಬಾರೆಡ್ಡಿ, ಆನೂರು ದೇವರಾಜು, ರಮೇಶ್.ಎಂ, ಒಕ್ಕಲಿಗರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ತಾಲ್ಲೂಕು ಸಂಘದ ಅಧ್ಯಕ್ಷ ವೆಂಕಟಸ್ವಾಮಿ, ರಾಯಪ್ಪನಹಳ್ಳಿ ಅಶ್ವತ್ ನಾರಾಯಣ ರೆಡ್ಡಿ ಮುಂತಾದವರು ಹಾಜರಿದ್ದರು .