ಸುದ್ದಿಮೂಲ ವಾರ್ತೆ ಬೆಂಗಳೂರು, ಅ.07:
ಪರಿಸರ ನಿಯಮಗಳನ್ನು ಉಲ್ಲಂಘಿಸಿದ ಆರೋಪದ ಮೇಲೆ ರಿಯಾಲಿಟಿ ಶೋ ಬಿಗ್ಬಾಸ್ನ ಶೂಟಿಂಗ್ ನಡೆಯುವ ರಾಮನಗರ ಜಿಲ್ಲೆಯಲ್ಲಿರುವ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿಯಲಾಗಿದೆ.
ಬಿಗ್ಬಾಾಸ್ ಕನ್ನಡ ಸೀಸನ್ 12 ರ ಶೂಟಿಂಗ್ ನಡೆಯುತ್ತಿಿರುವ ಬಿಡದಿ ಸಮೀಪದ ಇನೋವೇಟಿವ್ ಫಿಲ್ಮ್ ಸಿಟಿಯ ಜಾಲಿವುಡ್ ಸ್ಟೂಡಿಯೋದಿಂದ ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಡುತ್ತಿಿರುವ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಜಲ ಮಾಲಿನ್ಯ ನಿಯಂತ್ರಣ ಕಾಯ್ದೆೆ ಉಲ್ಲಂಘನೆ ಆರೋಪದ ಮೇಲೆ ಸ್ಟುಡಿಯೋ ಮುಚ್ಚಲು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಬೆಂಗಳೂರು ದಕ್ಷಿಣ ಜಿಲ್ಲಾಡಳಿತದಿಂದ ಮುಖ್ಯ ದ್ವಾಾರಕ್ಕೆೆ ಬೀಗ ಹಾಕಲಾಗಿದೆ.
ಸ್ಟುಡಿಯೋದ ಒಳಗೆ ಇರುವ ಸ್ಪರ್ಧಿಗಳು ಮತ್ತು ಸಿಬ್ಬಂದಿಯನ್ನು ರಾತ್ರಿಿ 8.30ರ ವೇಳೆಗೆ ಅಲ್ಲಿಂದ ಸ್ಥಳ ಖಾಲಿ ಮಾಡುವಂತೆ ಸೂಚನೆ ನೀಡಲಾಗಿತ್ತು. ಬಳಿಕ ಅವರನ್ನು ಸ್ಟುಡಿಯೋದಿಂದ ಸಮೀಪದಲ್ಲಿಯೇ ಇರುವ ಥಿಯೇಟರ್ಗೆ ಸ್ಥಳಾಂತರ ಮಾಡಲಾಯಿತು.
ಜಾಲಿವುಡ್ ಸ್ಟೋೋಡಿಯೋ ಸುತ್ತ ಬಿಗುವಿನ ವಾತಾವರಣ ಸೃಷ್ಟಿಿಯಾಗಿದ್ದು, ಕೆಎಸ್ಆರ್ಪಿ ತುಕಡಿ ನಿಯೋಜಿಸಲಾಗಿದೆ. ಸ್ಥಳದಲ್ಲಿಯೇ ರಾಮನಗರದ ಹಿರಿಯ ಪೊಲೀಸ್ ಅಧಿಕಾರಿಗಳು ಮೊಕ್ಕಾಾಂ ಹೂಡಿದ್ದಾರೆ.
ಎರಡು ಬಾರಿ ನೋಟಿಸ್ ಜಾರಿಯಾಗಿತ್ತು:
ಬೆಂಗಳೂರು ದಕ್ಷಿಣ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಈ ಸ್ಟುಡಿಯೋದಿಂದ ಕೊಳಚೆ ನೀರನ್ನು ಸಂಸ್ಕರಿಸದೆ ನೇರವಾಗಿ ಮೋರಿಗೆ ಹರಿಬಿಡುತ್ತಿಿದೆ. ಇದು ಜಲ ಮಾಲಿನ್ಯ ನಿಯಂತ್ರಣ ಮತ್ತು ಸಂರಕ್ಷಣೆ ಕಾಯ್ದೆೆ 1974ರ ಉಲ್ಲಂಘನೆಯಾಗಿದೆ. ಈ ಹಿನ್ನೆೆಲೆಯಲ್ಲಿ ಸ್ಟುಡಿಯೋವನ್ನು ಮುಚ್ಚಲು ಮತ್ತು ವಿದ್ಯುತ್ ಸಂಪರ್ಕ ಕಡಿತಗೊಳಿಸಬೇಕು ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಈ ಸಂಬಂಧ ಈಗಾಗಲೇ ಎರಡು ಬಾರಿ ನೋಟಿಸ್ ನೀಡಲಾಗಿತ್ತು.
ಹೀಗೆ ನೋಟಿಸ್ ಜಾರಿ ಮಾಡಿದ್ದರೂ ಜಾಲಿವುಡ್ ಸ್ಟುಡಿಯೋದಿಂದ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆೆಲೆಯಲ್ಲಿ ಮಂಗಳವಾರ ಸಂಜೆ ತಹಶೀಲ್ದಾಾರರೇ ಖುದ್ದಾಗಿ ಬಂದು ಸ್ಟುಡಿಯೋದಲ್ಲಿರುವ ಎಲ್ಲರನ್ನು ಹೊರ ಹೋಗುವಂತೆ ಸೂಚಿಸಿ ಮುಖ್ಯದ್ವಾಾರಕ್ಕೆೆ ಬೀಗ ಜಡಿದು ಸೀಲ್ ಮಾಡಿದರು. ಸ್ಟುಡಿಯೋದ ಹಿಂಬಾಗಿಲಿನಿಂದ ಸ್ಪರ್ಧಿಗಳು ಮತ್ತು ತಾಂತ್ರಿಿಕ ಸಿಬ್ಬಂದಿಯನ್ನು ಸ್ಥಳಾಂತರಿಸುವ ಕೆಲಸ ನಡೆಯಿತು.
ಈ ಮಧ್ಯೆೆ ಕನ್ನಡಪರ ಸಂಘಟನೆಗಳು ಸಹ ಸ್ಟುಡಿಯೋ ಬಳಿ ಬಂದು ಪ್ರತಿಭಟನೆ ನಡೆಸಿದರು. ನಾವು ಸಲ್ಲಿಸಿದ ಮನವಿಗೆ ಜಿಲ್ಲಾಡಳಿತ ಎಚ್ಚೆೆತ್ತು ಇಂದು ಕ್ರಮ ಕೈಗೊಂಡಿದೆ. ಕೂಡಲೇ ಬಿಗ್ಬಾಾಸ್ ಸ್ಟುಡಿಯೋವನ್ನು ಇಲ್ಲಿಂದ ಸ್ಥಳಾಂತರ ಮಾಡದಿದ್ದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದರು.
ಬಿಗ್ ಬಾಸ್ ಮನೆಯಲ್ಲಿ 17 ಮಂದಿ ಸ್ಪರ್ಧಿಗಳಿದ್ದು, ಈಗಾಗಲೇ ಒಂದು ವಾರ ಯಶಸ್ವಿಿಯಾಗಿ ಪೂರೈಸಿ ಎರಡನೇ ವಾರಕ್ಕೆೆ ಕಾಲಿಟ್ಟಿಿದ್ದಾರೆ. ಬಿಗ್ಬಾಸ್ ಶೋ ನಡೆಯುವ ಸ್ಟೂಡಿಯೋ ಮುಚ್ಚಿಿದ ಹಿನ್ನೆೆಲೆಯಲ್ಲಿ ಕಲರ್ಸ್ ಕನ್ನಡ ವಾಹಿನಿ ಸಿಬ್ಬಂದಿಯು ಬೆಂಗಳೂರು ದಕ್ಷಿಣ ಜಿಲ್ಲಾಡಳಿತ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದರು. ಆದರೂ ರಾತ್ರಿಿಯವರೆಗೆ ಜಿಲ್ಲಾಡಳಿತ, ನಿಯಂತ್ರಣ ಮಂಡಳಿ ತನ್ನ ಪಟ್ಟು ಸಡಿಲಿಸಲಿಲ್ಲ
ಕಾನೂನಿಗಿಂತ ಯಾರೂ ದೊಡ್ಡವರಲ್ಲ: ಈಶ್ವರ ಖಂಡ್ರೆೆ
ರಾಮನಗರ ಜಿಲ್ಲೆ ಬಿಡದಿ ಬಳಿಯಿರುವ ವೆಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್ ಟೈನ್ಮೆೆಂಟ್ ಪ್ರೈ. ಲಿ. (ಜಾಲಿ ವುಡ್ ಸ್ಟುಡಿಯೋ)ಗೆ ಜಲ ಕಾಯಿದೆ, ವಾಯು ಕಾಯಿದೆಯಡಿ ಅನುಮತಿ ಪಡೆಯದೆ ಕಾರ್ಯಾಚರಣೆ ಮಾಡುತ್ತಿಿರುವ ಹಿನ್ನೆೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ ಎಂದು ಅರಣ್ಯ, ಪರಿಸರ ಸಚಿವ ಈಶ್ವರ ಖಂಡ್ರೆೆ ತಿಳಿಸಿದ್ದಾರೆ.
ವಿಕಾಸಸೌಧದಲ್ಲಿಂದು ಸುದ್ದಿಗಾರರ ಪ್ರಶ್ನೆೆಗೆ ಉತ್ತರಿಸಿದ ಅವರು, ಬಿಗ್ಬಾಸ್ ಕಾರ್ಯಕ್ರಮ ನಡೆಯುತ್ತಿಿರುವ ಸ್ಟುಡಿಯೋಗೆ ನೋಟಿಸ್ ನೀಡಿರುವ ವಿಚಾರ ಮಾಧ್ಯಮದಿಂದ ತಮಗೆ ತಿಳಿಯಿತು. ಈ ಬಗ್ಗೆೆ ಮಾಹಿತಿ ಪಡೆದಾಗ, ರಾಮನಗರ ಪ್ರಾಾದೇಶಿಕ ಕಚೇರಿಯಿಂದ 2024ರಲ್ಲೇ 2 ಬಾರಿ ನೋಟಿಸ್ ನೀಡಿದ್ದರೂ ಅನುಪಾಲನೆ ಮಾಡದ ಕಾರಣ ಈ ನೋಟಿಸ್ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
ಇಲ್ಲಿ ಎಸ್.ಟಿ.ಪಿ. ಕಾರ್ಯನಿರ್ವಹಣೆ ಸೇರಿದಂತೆ ಸಮರ್ಪಕವಾಗಿ ತ್ಯಾಾಜ್ಯ ವಿಲೇವಾರಿ ಆಗುತ್ತಿಿಲ್ಲ, ಜನರೇಟರ್ ಸೆಟ್ಗಳಿದ್ದು ಅದಕ್ಕೂ ಅನುಮತಿ ಪಡೆದಿಲ್ಲ ಎಂದು ತಿಳಿಸಿದ್ದಾರೆ. ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಹೀಗಾಗಿ ಮಂಡಳಿ ಕ್ರಮ ಕೈಗೊಂಡಿದೆ ಎಂದು ತಿಳಿಸಿದರು.

