ಸುದ್ದಿಮೂಲ ವಾರ್ತೆ ಕೊಪ್ಪಳ, ಅ.15:
ಕುಷ್ಟಗಿ. ಯಲಬುರ್ಗಾ ಹಾಗು ಕುಕನೂರು ತಾಲೂಕಿನಲ್ಲಿ ಸ್ಥಾಾಪನೆಯಾಗಿರುವ ಪವನ ವಿದ್ಯುತ್ ಶಕ್ತಿಿ ಕೇಂದ್ರಗಳಿಂದ ಕೃಷಿ ಭೂಮಿಯನ್ನು ಕಬಳಿಸುತ್ತಿಿದ್ದಾಾರೆ ಎಂಬ ರೈತರ ವಿರೋಧದ ಮಧ್ಯೆೆಯೂ ಇಂದು ಕುಷ್ಟಗಿ ತಾಲೂಕಿನಲ್ಲಿ ಮತ್ತೊೊಂದು ಪವನ ಶಕ್ತಿಿ ಕೇಂದ್ರಕ್ಕೆೆ ರಾಜ್ಯ ಸರಕಾರ ಒಪ್ಪಿಿಗೆ ನೀಡಿದೆ.
ಕುಷ್ಟಗಿಯಲ್ಲಿ ಇನ್ಕ್ಸ ವಿಂಡೋ ಎಂಬ ಕಂಪನಿಯು ಪವನ ಶಕ್ತಿಿ ಕೇಂದ್ರವನ್ನು ಸ್ಥಾಾಪಿಸಲು ರೂ. 400 ಕೋಟಿ ಹೂಡಿಕೆ ಮಾಡಲಿದೆ. ವಿಂಡ್ ಪವರಗಾಗಿ 70 ಎಕರೆ ಬೃಹತ್ ಪ್ರದೇಶದಲ್ಲಿ ವಿಂಡ್ ಬ್ಲೇಡ್ ಉತ್ಪಾಾದನಾ ಘಟಕ ಸ್ಥಾಾಪನೆಯಾಗಿ ನೂರಾರು ಉದ್ಯೋೋಗಗಳ ಸೃಷ್ಟಿಿಯಾಗಲಿವೆ ಎನ್ನಲಾಗಿದೆ.
ಪವನ ವಿದ್ಯುತ್ ಉತ್ಪಾಾದನೆಯಲ್ಲಿ ಅತ್ಯಂತ ಅಗತ್ಯವಾದ ಬೃಹತ್ ಬ್ಲೇಡ್ ಹಾಗೂ ಗಾಳಿಗೋಪುರ (ಜ್ಞಿಿ ಟಡಿಛ್ಟಿಿ) ಗಳನ್ನು ನಿರ್ಮಿಸುವ ಕಾರ್ಯದಲ್ಲಿ ಐ್ಞಟ್ಡ ಜ್ಞಿಿ ಸಂಸ್ಥೆೆಯು ಹೆಸರುವಾಸಿಯಾಗಿದೆ. ಈ ದಿನ ಕಂಪೆನಿಯ ಕಾರ್ಪೊರೇಟ್ ಕಾರ್ಯತಂತ್ರ ವಿಭಾಗದ ಅಧ್ಯಕ್ಷ ಸಂತೋಷ್ ಖೈರ್ನಾರ್ ಅವರು ಬೃಹತ್ ಕೈಗಾರಿಕಾ ಮಂತ್ರಿಿ ಎಂ ಬಿ ಪಾಟೀಲರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕೊಪ್ಪಳ ಜಿಲ್ಲೆೆಯ ಕುಷ್ಟಗಿ ತಾಲ್ಲೂಕಿನ ಕ್ಯಾಾದಿಗುಪ್ಪದ ಕೆಐಎಡಿಬಿಯ ಸುಮಾರು 70 ಎಕರೆ ವಿಸ್ತೀರ್ಣದಲ್ಲಿ ಪವನ ಬ್ಲೇಡ್ ಉತ್ಪಾಾದನಾ ಘಟಕ ನಿರ್ಮಾಣ ಮಾಡಲು ಆಸಕ್ತಿಿ ತೋರಿದ್ದಾಾರೆ ಎಂದು ಎಂ ಬಿ ಪಾಟೀಲ ತಿಳಿಸಿದ್ದಾಾರೆ.
ಆರಂಭದಲ್ಲಿ ಸುಮಾರು ರೂ. 300 ಕೋಟಿ ಹೂಡಿಕೆ ಮಾಡಿ, ನಂತರದಲ್ಲಿ ಹೆಚ್ಚುವರಿಯಾಗಿ ರೂ. 100 ಕೋಟಿ ಹೂಡಿಕೆಯೊಂದಿಗೆ ಗಾಳಿಗೋಪುರಗಳ ನಿರ್ಮಾಣ ಚಟುವಟಿಕೆಗಳನ್ನು ಸಹ ಮುಂದುವರೆಸುವುದಾಗಿ ತಿಳಿಸಿದರು. ಅವರಿಗೆ ನಮ್ಮ ಸರ್ಕಾರದ ಸಂಪೂರ್ಣ ಸಹಕಾರ ಮತ್ತು ಅಗತ್ಯದ ಎಲ್ಲ ನೆರವನ್ನು ನೀಡುವುದಾಗಿ ತಿಳಿಸಿರುವೆ. ಅತಿ ಶೀಘ್ರದಲ್ಲೇ ಐನಾಕ್ಸ್ ಸಂಸ್ಥೆೆಯವರು ತಮ್ಮ ಕಾರ್ಯ ಚಟುವಟಿಕೆ ಆರಂಭಿಸುವ ಭರವಸೆಯಿದೆ. ಇದರೊಂದಿಗೆ ಈ ಭಾಗದಲ್ಲಿ ಹೇರಳ ಉದ್ಯೋೋಗ ಸೃಷ್ಟಿಿಯೂ ಆಗಲಿದೆ ಎಂದು ಸಚಿವರು ಸಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾಾರೆ.