ಸುದ್ದಿಮೂಲ ವಾರ್ತೆ ರಾಯಚೂರು, ನ.28:
ಆಂಧ್ರಪ್ರದೇಶದ ಶ್ರೀಶೈಲದಲ್ಲಿರುವ ಕರ್ನಾಟಕ (ಛತ್ರ) ಭವನ ನಿರ್ಮಾಣಕ್ಕೆೆ ಇರುವ ತಾಂತ್ರಿಿಕ ಸಮಸ್ಯೆೆಗಳ ಪರಿಹಾರಕ್ಕೆೆ ಶೀಘ್ರವೆ ಉಭಯ ರಾಜ್ಯದ ಧಾರ್ಮಿಕ ದತ್ತಿಿ ಇಲಾಖೆ ಉನ್ನತಾಧಿಕಾರಿಗಳ ಜಂಟಿ ಸ್ಥಳ ಪರಿಶೀಲನೆ ಬಳಿಕ ಅಂತಿಮ ತೀರ್ಮಾನ ಮಾಡಲು ಆಂಧ್ರದ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ನಡೆದ ಉಭಯ ರಾಜ್ಯಗಳ ಸಚಿವರ-ಅಧಿಕಾರಿಗಳ ಸಭೆ ನಿರ್ಧರಿಸಿದೆ ಎಂದು ಗೊತ್ತಾಾಗಿದೆ.
ಆಂಧ್ರ ಪ್ರದೇಶದ ರಾಜಧಾನಿಯಲ್ಲಿರುವ ರಾಜಭವನದಲ್ಲಿ ರಾಜ್ಯಪಾಲರಾದ ಎಸ್. ಅಬ್ದುಲ್ ನಜೀರ್ ಅವರ ಅಧ್ಯಕ್ಷತೆಯಲ್ಲಿ ರಾಜ್ಯದ ಪರವಾಗಿ ಸಚಿವರಾದ ರಾಮಲಿಂಗಾರೆಡ್ಡಿಿ, ಎನ್ ಎಸ್ ಬೋಸರಾಜ್ ಆಂಧ್ರಪ್ರದೇಶ ಪರವಾಗಿ ಸಚಿವ ಅನಮ್ ರಾಮನಾರಾಯಣ ರೆಡ್ಡಿಿ ಪಾಲ್ಗೊೊಂಡು ಕರ್ನಾಟಕ ರಾಜ್ಯದಿಂದ ಆಂಧ್ರಪ್ರದೇಶದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲೊೊಂದಾದ ಶ್ರೀಶೈಲದ ಶ್ರೀ ಭ್ರಮರಾಂಭ ಮಲ್ಲಿಕಾರ್ಜುನ ದೇವರ ದರ್ಶನಕ್ಕೆೆ ರಾಜ್ಯದಿಂದ ಭೇಟಿ ನೀಡುವ ಭಕ್ತರ ಅನುಕೂಲಕ್ಕಾಾಗಿ ಕರ್ನಾಟಕ ಛತ್ರ ನಿರ್ಮಾಣ ಮತ್ತು ಅಲ್ಲಿನ ಭೂ ಸಂಬಂಧಿತ ಸಮಸ್ಯೆೆಗಳನ್ನು ಪರಿಹರಿಸುವಂತೆ ಕೋರಲಾಯಿತು.
ಈ ಧಾರ್ಮಿಕ ಕ್ಷೇತ್ರಗಳಲ್ಲಿ ಛತ್ರ ನಿರ್ಮಾಣಕ್ಕೆೆ ಸಂಬಂಧಿಸಿದಂತೆ ದೀರ್ಘ ಕಾಲದಿಂದ ಬಾಕಿ ಇರುವ ಜಾಗದ ಸಮಸ್ಯೆೆ, ಹಸ್ತಾಾಂತರ ಪ್ರಕ್ರಿಿಯೆ ಮತ್ತು ಆಡಳಿತಾತ್ಮಕ ಅಡೆತಡೆಗಳನ್ನು ನಿವಾರಿಸುವ ಕುರಿತು ಸಭೆಯಲ್ಲಿ ಉಭಯ ರಾಜ್ಯಗಳ ನಾಯಕರು ಕೂಲಂಕುಷವಾಗಿ ಚರ್ಚಿಸಿದರು.
ಆಂಧ್ರ ಪ್ರದೇಶದ ಕಂದಾಯ ಹಾಗೂ ಮುಜರಾಯಿ ಇಲಾಖೆ ಉನ್ನತಾಧಿಕಾರಿಗಳು ಈಗಿರುವ ಕರ್ನಾಟಕ ಭವನದ ಖಾಲಿ ಜಾಗದಲ್ಲಿ ಹೊಸದಾಗಿ ಭವನ ನಿರ್ಮಾಣಕ್ಕೆೆ ಇರುವ ಗೊಂದಲ, ತೊಡಕುಗಳ ವಿವರಿಸಿದರೆನ್ನಲಾಗಿದೆ.
ಸದ್ಯ ಜನಸಂದಣಿ ಹೆಚ್ಚಾಾಗಿದ್ದು ಕರ್ನಾಟಕ ಭವನದ ಮುಂಭಾಗದ ರಸ್ತೆೆಗೆ ಮಾಸ್ಟರ್ ಪ್ಲಾಾನ್ ಮಾಡಿದ್ದು ಭವನದ ಅರ್ಧ ಭಾಗ ರಸ್ತೆೆ ಅಗಲೀಕರಣಕ್ಕೆೆ ಅಗತ್ಯವಿದೆ. ಹೀಗಾಗಿ, ಜಾಗ ಸಾಲದು ಮತ್ತೊೊಂದು ಪ್ರದೇಶದಲ್ಲಿ ಕರ್ನಾಟಕ ಭವನದ ಹೊಸ ಕಟ್ಟಡ ನಿರ್ಮಾಣಕ್ಕೆೆ ತಮ್ಮ ಆಕ್ಷೇಪವಿಲ್ಲ. ಅದಕ್ಕೆೆ ಸಂಬಂಧಿಸಿದ ವಿಚಾರಗಳ ಕುರಿತು ಕರ್ನಾಟಕದ ಪರವಾಗಿ ಪ್ರಸ್ತಾಾವನೆ ಸಲ್ಲಿಸಿದರೆ ಪರಿಶೀಲಿಸಿ ಸೂಕ್ತ ಪ್ರದೇಶ ಗುರುತಿಸಿ ನೀಡುವುದಾಗಿ ರಾಜ್ಯಪಾಲರ ಗಮನಕ್ಕೆೆ ತಂದರು ಎಂದು ಮೂಲಗಳು ತಿಳಿಸಿವೆ.
ಆಗ ಕರ್ನಾಟಕದ ಉಭಯ ಸಚಿವರು ಈಗಿರುವ ಜಾಗದಲ್ಲಿಯೇ ಭವನ ನಿರ್ಮಿಸಲು ಅವಕಾಶ ಕೋರಿದರಲ್ಲದೆ, ಅಕಪಕ್ಕದಲ್ಲಿಯೇ ಅಷ್ಟೇ ವಿಸ್ತೀರ್ಣ (2ಎಕರೆ)ದ ಖಾಲಿ ಜಾಗ ನೀಡಲು ಪಟ್ಟು ಹಿಡಿದರು ಎನ್ನಲಾಗಿದೆ.ಅಲ್ಲದೆ, ಅಲ್ಲಿಯೇ ಭವನ ಮತ್ತಿಿತರ ಕಟ್ಟಡ ನಿರ್ಮಿಸಿದರೆ ಒಪ್ಪುುವುದಿಲ್ಲ ಎಂದು ರಾಜ್ಯದ ಸಚಿವರು ನೇರವಾಗಿಯೆ ಆಕ್ಷೇಪಿಸಿದ್ದಾಾರೆ. ಯಾವುದೇ ಕಾರಣಕ್ಕೂ ಅಲ್ಲಿ ಶ್ರೀಶೈಲ ದೇವಸ್ಥಾಾನ ಸಮಿತಿಯಿಂದಾಗಲಿ, ಸರ್ಕಾರದಿಂದಾಗಲಿ ಭವನ ನಿರ್ಮಿಸುವುದಿಲ್ಲ ಎಂಬ ಭರವಸೆ ಆಂಧ್ರದ ಸಚಿವರು ನೀಡಿದರು ಎಂದು ಹೇಳಲಾಗಿದೆ.
ಆಗ ರಾಜ್ಯಪಾಲರು ಈ ಬಗ್ಗೆೆ ಉಭಯ ಸರ್ಕಾರಗಳ ಇಲಾಖೆ ಉನ್ನತ ಅಧಿಕಾರಿಗಳು ಶೀಘ್ರವೇ ಶ್ರೀಶೈಲಕ್ಕೆೆ ಖುದ್ದು ಭೇಟಿ ನೀಡಿ ಖಾಲಿ ಇರುವ ಜಾಗದ ಗುರುತು, ದಾಖಲೆ ಜೊತೆಗೆ ಮಾಸ್ಟರ್ ಪ್ಲಾಾನ್ಗೆ ಭವನ ಅಡ್ಡಿಿಯಾಗುವುದೆ ಎಂಬುದರ ಬಗ್ಗೆೆ ವಿಸ್ತೃತ ಪ್ರಸ್ತಾಾವನೆ ಸಲ್ಲಿಸಲು ಸಲಹೆ ಮಾಡಿದ್ದಾಾರೆ. ಈ ಬಗ್ಗೆೆ ಉಭಯ ರಾಜ್ಯದ ಸಚಿವರು, ಅಧಿಕಾರಿಗಳು ಸಭೆಯಲ್ಲಿ ಸಹಮತ ವ್ಯಕ್ತಪಡಿಸಿದರು.
ಉಭಯ ರಾಜ್ಯಗಳ ಪರಸ್ಪರ ಸಹಕಾರದೊಂದಿಗೆ, ಕರ್ನಾಟಕದ ಲಕ್ಷಾಂತರ ಭಕ್ತರಿಗೆ ತ್ವರಿತವಾಗಿ ಛತ್ರ ಸೌಲಭ್ಯ ಒದಗಿಸಲು ಮತ್ತು ಜಾಗದ ಸಮಸ್ಯೆೆಗಳಿಗೆ ಶೀಘ್ರದಲ್ಲಿಯೇ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿಿನಲ್ಲಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಶ್ರೀಶೈಲದ ಯಾವ ಭಾಗದಲ್ಲಿ ಕರ್ನಾಟಕ ಭವನದ ಹೊಸ ಕಟ್ಟಡ ನಿರ್ಮಾಣಕ್ಕೆೆ ಭೂಮಿ ನೀಡಲಿದ್ದಾಾರೆ ಎಂಬ ಕುತೂಹಲಕ್ಕೆೆ ಮುಂದಿನ ದಿನಗಳಲ್ಲಿ ತೆರೆ ಬೀಳಲಿದೆ.
ಕೋಟ್-1 :
ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಉಭಯ ರಾಜ್ಯಗಳ ಸಚಿವರ, ಇಲಾಖೆಯ ಉನ್ನತಾಧಿಕಾರಿಗಳ ಸಭೆ ಲಪ್ರದವಾಗಿದೆ. ಶ್ರೀಶೈಲದಲ್ಲಿರುವ ಕರ್ನಾಟಕ ಭವನದ ಹೊಸ ಕಟ್ಟಡ ನಿರ್ಮಾಣಕ್ಕೆೆ ಮಾಸ್ಟರ್ ಪ್ಲಾಾನ್ ಕಾರಣದಿಂದ ಸಮಸ್ಯೆೆಯಾಗಿದ್ದು ಶೀಘ್ರವೆ ಉಭಯ ರಾಜ್ಯದ ಅಧಿಕಾರಿಗಳು ಖುದ್ದು ಪರಿಶೀಲನೆಗೆ ಸಭೆ ತೀರ್ಮಾನಿಸಿದೆ. ಅಲ್ಲದೆ, ತಿರುಮಲ ತಿರುಪತಿಯಲ್ಲಿರುವ ಕರ್ನಾಟಕ ಛತ್ರದ ಅಭಿವೃದ್ದಿ, ಭೂಮಿ ಹಸ್ತಾಾಂತರದ ಬಗ್ಗೆೆಯೂ ಚರ್ಚಿಸಲಾಗಿದೆ. ಮೊದಲ ಪ್ರಯತ್ನಕ್ಕೆೆ ಸಕಾರಾತ್ಮಕ ಸ್ಪಂದನೆ ದೊರೆತಿದೆ.
ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಉಭಯ ರಾಜ್ಯ ಸಚಿವರ ಸಭೆ * ಮಾಸ್ಟರ್ ಪ್ಲಾಾನ್ ಜಾರಿ, ಯಾವುದೆ ಭವನ ನಿರ್ಮಿಸಲ್ಲ ಶ್ರೀಶೈಲದ ಕರ್ನಾಟಕ (ಛತ್ರ) ಭವನ ಸ್ಥಳ ಖುದ್ದು ಪರಿಶೀಲನೆಗೆ ನಿರ್ಧಾರ

