ಸುದ್ದಿಮೂಲ ವಾರ್ತೆ ಸಿಂಧನೂರು, ಡಿ.30:
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಾಲಯವು 2024 25ರ ವರ್ಷದ ರ್ಯಾಾಂಕ್ ಪಟ್ಟಿಿ ಬಿಡುಗಡೆ ಮಾಡಿದ್ದು, ನಗರದ ಶಾರದಾ ಮಹಿಳಾ ಕಲಾ ಮತ್ತು ವಾಣಿಜ್ಯ ಪದವಿ ಮಹಾವಿದ್ಯಾಾಲಯದ ಬಿಎ ವಿದ್ಯಾಾರ್ಥಿನಿ ಕವಿತಾ ಸಣ್ಣ ಬಸಪ್ಪ ಛಲವಾದಿ ಅವರು 5ನೇ ರ್ಯಾಾಂಕ್ ಪಡೆದಿದ್ದಾಾರೆ ಎಂದು ಸಂಸ್ಥೆೆಯ ಅಧ್ಯಕ್ಷ ಎನ್.ವಿಜಯಕುಮಾರ ತಿಳಿಸಿದ್ದಾಾರೆ.
ಗ್ರಾಾಮೀಣ ಹಾಗೂ ಹಿಂದುಳಿದ ಪ್ರದೇಶದ ವಿದ್ಯಾಾರ್ಥಿನಿಯಾಗಿರುವ ಕವಿತಾ ತಮ್ಮ ಅಚಲ ಪರಿಶ್ರಮ, ಶಿಸ್ತು, ಆತ್ಮವಿಶ್ವಾಾಸ ಹಾಗೂ ನಿರಂತರ ಅಧ್ಯಯನದ ಮೂಲಕ ಈ ಮಹತ್ವದ ಶೈಕ್ಷಣಿಕ ಸಾಧನೆ ಮಾಡಿ ಇತರರ ವಿದ್ಯಾಾರ್ಥಿಗಳಿಗೆ ಪ್ರೇೇರಣೆಯಾಗಿದ್ದಾಾಳೆ. ಮಹಾವಿದ್ಯಾಾಲಯವು ಮಹಿಳಾ ಶಿಕ್ಷಣದ ಉನ್ನತಿಗೆ ಸದಾ ಬದ್ಧವಾಗಿದ್ದು, ಗುಣಮಟ್ಟದ ಬೋಧನೆ, ಶೈಕ್ಷಣಿಕ ಮಾರ್ಗದರ್ಶನ ಹಾಗೂ ವಿದ್ಯಾಾರ್ಥಿ ಕೇಂದ್ರಿಿತ ಅಧ್ಯಯನ ವಾತಾವರಣದ ಮೂಲಕ ನಿರಂತರವಾಗಿ ಉತ್ತಮ ಲಿತಾಂಶಗಳನ್ನು ಸಾಧಿಸುತ್ತಿಿದೆ. ಈ ಸಾಧನೆ ಮಹಾವಿದ್ಯಾಾಲಯದ ಬೋಧಕ ವೃಂದದ ಶ್ರಮ ಹಾಗೂ ಆಡಳಿತದ ಸಮರ್ಥ ಮಾರ್ಗದರ್ಶನದ ಪ್ರತಿಲವಾಗಿದೆ ಎಂದು ತಿಳಿಸಿದ್ದಾಾರೆ.
ವಿದ್ಯಾಾರ್ಥಿನಿಯ ಸಾಧನೆಗೆ ಆಡಳಿತ ಮಂಡಳಿ ಎನ್.ವಿಜಯಕುಮಾರ, ಸದಸ್ಯ ಎನ್.ಅಮರೇಶ, ಕಾರ್ಯದರ್ಶಿ ಎನ್.ಸಚಿತ್ ಆಡಳಿತ ಮಂಡಳಿಯ ಸದಸ್ಯರು, ಜೊತೆಗೆ ಮಹಾವಿದ್ಯಾಾಲಯದ ಪ್ರಾಾಂಶುಪಾಲರು ಮತ್ತು ಎಲ್ಲಾಾ ಉಪನ್ಯಾಾಸಕರು ಅಭಿನಂದಿಸಿದ್ದಾಾರೆ.
ಶಾರದಾ ಮಹಿಳಾ ಕಾಲೇಜಿಗೆ 5ನೇ ರ್ಯಾಾಂಕ್- ಎನ್.ವಿಜಯಕುಮಾರ

