ಸುದ್ದಿಮೂಲ ವಾರ್ತೆ ಯಾದಗಿರಿ, ಡಿ.29:
ವಿಜ್ಞಾನ ಮತ್ತು ಶಂತ್ರಜ್ಞಾನದಲ್ಲಿ ಭಾರತ ವಿಶ್ವಮಟ್ಟದಲ್ಲಿ ಮುನ್ನಡೆ ಸಾಧಿಸಿದ್ದರೂ ಸಮಾಜದಲ್ಲಿ ಇನ್ನೂ ಮೂಢನಂಬಿಕೆಗಳು ಆಳವಾಗಿ ಬೇರೂರಿರುವುದು ವಿಷಾದಕರ ಸಂಗತಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಪುರ ಕಳವಳ ವ್ಯಕ್ತಪಡಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಲಾದ ರಾಜ್ಯ ಮಟ್ಟದ 5ನೇ ವೈಜ್ಞಾನಿಕ ಸಮ್ಮೇಳನ ಉದ್ಘಾಾಟಿಸಿ ಅವರು ಮಾತನಾಡಿ ಗುಡಿ, ಗುಂಡಾರಗಳ ಹೆಸರಿನಲ್ಲಿ ಜನರನ್ನು ಭಯಪಡಿಸಿ, ಬಡವರಿಂದ ಅನಗತ್ಯವಾಗಿ ಹಣ ಖರ್ಚು ಮಾಡಿಸುವ ಪ್ರವೃತ್ತಿಿ ಇಂದಿಗೂ ಮುಂದುವರಿದಿದೆ. ಯಾವುದೇ ದೇವರು ಮನುಷ್ಯನಿಗೆ ಕೆಡುಕನ್ನು ಮಾಡುವುದಿಲ್ಲ; ಮನುಷ್ಯನೇ ಮನುಷ್ಯನಿಗೆ ಕೆಡುಕನ್ನು ಮಾಡುತ್ತಾಾನೆ ಎಂಬ ಅರಿವು ಮೂಡಬೇಕಿದೆ ಎಂದು ಹೇಳಿದರು.
ಇಂದಿನ ದಿನಗಳಲ್ಲಿ ವೈಜ್ಞಾನಿಕ ಸಮ್ಮೇಳನಗಳನ್ನು ಆಯೋಜಿಸುವುದು ಸುಲಭದ ಕೆಲಸವಲ್ಲ. ಸರ್ಕಾರದ ನೆರವಿಲ್ಲದೆ ಇಂತಹ ಅದ್ದೂರಿ ಕಾರ್ಯಕ್ರಮ ಯಶಸ್ವಿಿಯಾಗಿ ನಡೆಸಿರುವುದು ಶ್ಲಾಾಘನೀಯ. ಮುಂದಿನ ದಿನಗಳಲ್ಲಿ ಇಂತಹ ಕಾರ್ಯಕ್ರಮಗಳಿಗೆ ಸರ್ಕಾರದಿಂದ ಹೆಚ್ಚಿಿನ ಅನುದಾನ ಒದಗಿಸಲು ಪ್ರಯತ್ನಿಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪರಿಷತ್ತಿಿನ ಸಂಸ್ಥಾಾಪಕ ಅಧ್ಯಕ್ಷ ಹುಲಿಕಲ್ ನಟರಾಜ್ ಪ್ರಾಾಸ್ತಾಾವಿಕವಾಗಿ ಮಾತನಾಡಿ, ಕಳೆದ 30 ವರ್ಷಗಳಿಂದ ರಾಜ್ಯದ ಎಲ್ಲಡೆ ಸಂಚರಿಸಿ ಮೂಡನಂಬಿಕೆ, ಮೌಢ್ಯಗಳನ್ನು ಹೋಗಲಾಡಿಸುವ ಕೆಲಸ ಮಾಡಲಾಗುತ್ತಿಿದೆ. ಈಗ ಐದು ವರ್ಷಗಳಿಂದ ಪರಿಷತ್ತು ಕಟ್ಟಿಿ ಆ ಮೂಲಕ ನಮ್ಮೇಳನಗಳನ್ನು ಆಯೋಜಿಸಿ ಜಾಗೃತಿ ಮೂಡಿಸಲಾಗುತ್ತಿಿದೆ. ಇದಕ್ಕೆೆ ಎಲ್ಲ ರೀತಿಯಿಂದಲ್ಲೂ ಬೆನ್ನೆೆಲುಬಾಗಿ ಸಚಿವ ಜಾರಕಿಹೊಳಿ ಅವರು ಇದ್ದಾರೆಂದರು.
ಚಿಗರಳ್ಳಿಿಯ ಮರುಳಶಂಕರ ಪೀಠದ ಸಿದ್ದಬಸವ ಕಬೀನಾಂದ ಸ್ವಾಾಮಿಗಳು, ಮೈಸೂರಿನ ಜ್ಞಾನಪ್ರಕಾಶ ಸ್ವಾಾಮಿಗಳು ಸಾನಿಧ್ಯ ವಹಿಸಿದ್ದರು.ಶಾಸಕ ಚನ್ನಾಾರೆಡ್ಡಿಿ ಪಾಟೀಲ್ ಅವರು ಕ್ಯಾಾಲೆಂಡರ್ ಮತ್ತು ಶಾಸಕ ಶರಣಗೌಡ ಕಂದಕೂರ ಅವರು ದಿನಚರಿ ಬಿಡುಗಡೆ ಮಾಡಿದರು. ಡಿಡಿಯು ಸಂಸ್ಥೆೆ ಅಧ್ಯಕ್ಷ ಡಾ.ಭೀಮಣ್ಣ ಮೇಟಿ ಸಂವಿಧಾನ ಪೀಠಿಕೆ ವಾಚಿಸಿದರು.
6ನೇ ರಾಜ್ಯ ಮಟ್ಟದ ವೈಜ್ಞಾನಿಕ ಸಮ್ಮೇಳನವು ನಮ್ಮ ತವರು ಜಿಲ್ಲೆ ಬೆಳಗಾವಿಯಲ್ಲಿ ಮಾಡಿ, ಅದಕ್ಕೆೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದೆಂದು ಸಚಿವ ಸತೀಶ ಜಾರಕಿಹೊಳಿ ಪರಿಷತ್ತಿಿನ ಅಧ್ಯಕ್ಷ ಹುಲಿಕಲ್ ಅವರಿಗೆ ಮನವಿ ಮಾಡಿದರು. ಇದಕ್ಕೆೆ ವೇದಿಕೆಯಲ್ಲಿ ಇದ್ದವರೂ ಸೇರಿ ಸಭಿಕರೆಲ್ಲ ಚಪ್ಪಾಾಳೆ ತಟ್ಟುವ ಮೂಲಕ ಒಪ್ಪಿಿಗೆ ನೀಡಿದಾಗ ನಟರಾಜ್ ಅವರು ಆಯಿತು ಎಂದರು. ಸಮ್ಮೇಳನಕ್ಕೆೆ ಅನುದಾನ ಕೊರಣೆ ಇದೆ. ಇದನ್ನೂ ಸರಿ ಮಾಡಲು ಸಿಎಂ ಅವರೊಂದಿಗೆ ಚರ್ಚಿಸಿ ಕೋಟಿ ರೂ. ಬಜೆಟ್ನಲ್ಲಿ ಮಾಡಿಸುವ ವ್ಯವಸ್ಥೆೆ ಮಾಡಲಾಗುವುದೆಂದು ಜಾರಕಿಹೊಳಿ ಭರವಸೆ ನೀಡಿದರು.
ಸಾನಿಧ್ಯ ವಹಿಸಿದ್ದ ಗುರುಮಠಕಲ್ ಖಾನಮಠದ ಶಾಂತವೀರ ಗುರುಮುರುಘಾ ರಾಜೇಂದ್ರ ಸ್ವಾಾಮಿಗಳು ಮಾತನಾಡಿ, ಸಮಾಜದಲ್ಲಿ ಮೂಢನಂಬಿಕೆಗಳು ಮತ್ತು ಅಂಧ ಶ್ರದ್ಧೆೆಗಳು ನಿನ್ನೆೆ ಮೊನ್ನೆೆ ಹುಟ್ಟಿಿಕೊಂಡದ್ದಲ್ಲ. ಸಾವಿರಾರು ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿವೆ.ಅವುಗಳನ್ನು ಒಂದೇ ಬಾರಿ ಸಂಪೂರ್ಣವಾಗಿ ಅಳಿಸುವುದು ಕಷ್ಟವಾದರೂ, ವೈಜ್ಞಾನಿಕ ಚಿಂತನೆ ಮತ್ತು ಜಾಗೃತಿಯ ಮೂಲಕ ಸಮಾಜಕ್ಕೆೆ ಬೆಳಕು ಚೆಲ್ಲುವ ಕೆಲಸ ವೈಜ್ಞಾನಿಕ ಸಮ್ಮೇಳನಗಳು ಮಾಡುತ್ತಿಿವೆ ಎಂದು ಹೇಳಿದರು.ಈ ಹಿನ್ನೆೆಲೆಯಲ್ಲಿ ಇಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನವು ಅರ್ಥಪೂರ್ಣವಾಗಿದ್ದು, ಮೂಢನಂಬಿಕೆ ಮುಕ್ತ ಸಮಾಜ ನಿರ್ಮಾಣಕ್ಕೆೆ ಪೂರಕವಾಗಿದೆ ಎಂದು ಅಭಿಪ್ರಾಾಯಪಟ್ಟರು.
ಇದೇ ವೇಳೆ ರಾಜ್ಯದ ವಿವಿಧ ಸಾಧಕರಿಗೆ ಜೀವಮಾನ ಸಾಧನಾ ಮತ್ತು ವಿಶಿಷ್ಟ ಸೇವಾ ಪ್ರಶಸ್ತಿಿ ನೀಡಿ ಸನ್ಮಾಾನಿಸಲಾಯಿತು. ಶಾಸಕ ರಾಜಾ ವೇಣು ಗೋಪಾಲ ನಾಯಕ್, ಪುಸ್ತಕ ಮನೆಯ ಅಂಕೇಗೌಡ, ಡಾ.ಕೆ.ಎಸ್.ರಾಜಣ್ಣ, ಮುಖಂಡ ಮಹೇಶರೆಡ್ಡಿಿ ಮುದ್ನಾಾಳ್, ಮುಖಂಡರಾದ ಎ.ಸಿ.ಕಾಡ್ಲೂರು, ಹಣುಮೇಗೌಡ ಮರಕಲ್, ಮರಪ್ಪ ಚಟ್ಟರಕಿ, ರವಿ ಪಾಟೀಲ್ ರಾಯಚೂರು, ಡಾ.ಎಸ್.ಎಸ್.ನಾಯಕ್, ಡಾ.ಭೀಮರಾಯ ಲಿಂಗೇರಿ, ಚನ್ನಪ್ಪಗೌಡ ಮೊಸಂಬಿ, ವಿಶ್ವನಾ ಥ ಸಿರವಾರ, ಸುನೀಲ ಮಾನ್ಪಡೆ, ಡಾ.ಶಿವರಂಜನ್ ಸತ್ಯಂಪೇಟೆ, ಡಿಡಿಪಿಐ ಸಿ.ಎನ್.ಮುದೋಳ್, ಪರಿಷತ್ತಿಿನ ರಾಜ್ಯ ಮತ್ತು ಜಿಲ್ಲಾ ಪದಾಧಿಕಾರಿಗಳು ವೇದಿಕೆ ಮೇಲೆ ಇದ್ದರು.
ಜಿಲ್ಲಾ ಅಧ್ಯಕ್ಷ ಗುಂಡಪ್ಪ ಕಲಬುರಗಿ ಸ್ವಾಾಗತಿಸಿದರು.ಗಾಯಕ ಸಿದ್ದಾರ್ಥ ಮತ್ತು ತಂಡದವರಿಂದ ನಾಡಗೀತೆ, ರೈತ ಗೀತೆ ನಡೆಯಿತು. ಸುಧಾ ಹುಚ್ಚಣ್ಣವರ ವಂದಿಸಿದರು. ನಂತರ ವಿವಿಧ ಗೋಷ್ಠಿಿಗಳು, ಪವಾಡ ಬಯಲು ಮತ್ತು ಕಾಲಚಕ್ರ ನಾಟಕ ಪ್ರದರ್ಶನಗೊಂಡಿತ್ತು.
ಅಚ್ಚುಕಟ್ಟಾದ ವ್ಯವಸ್ಥೆೆ, ಊಟ
ಮೂರು ದಿನಗಳ ಸಮ್ಮೇಳನಕ್ಕಾಾಗಿ ಉಪಾಹಾರ, ಊಟ ಮತ್ತು ನೀರಿನ ವ್ಯವಸ್ಥೆೆ ಮಾಡಿಸಿದ್ದು ಸಚಿವ ಜಾರಕಿಹೊಳಿ. ಇದರ ಸಂಪೂರ್ಣ ಉಸ್ತುವಾರಿ ರಾಯಚೂರಿನ ರವಿ ಪಾಟೀಲ್ ಅವರು ವಹಿಸಿಕೊಂಡು ತಮ್ಮ ತಂಡದೊಂದಿಗೆ ಅಚ್ಚುಕಟ್ಟಾಾದ ವ್ಯವಸ್ಥೆೆ ಮಾಡಿದ್ದರು. ಉಪಾಹಾರ, ಊಟಕ್ಕೆೆ ಕೊರತೆ ಇರಲಿಲ್ಲ. ಭಾಗವಹಿಸಿದ್ದ ಹಿರಿಯ. ಕಿರಿಯ ಮತ್ತು ಸಾವಿರಾರು ಶಾಲಾ ಮಕ್ಕಳು ವನಭೋಜನದಂತೆ ಊಟ. ಉಪಾಹಾರ ಸವಿದರು. ದೇಶದ ವಿವಿಧೆಡೆ ಬಂದಿದ್ದ ವಿಜ್ಞಾನ, ತಂತ್ರಜ್ಞಾನದ ಪ್ರಯೋಗಾಲಯಗಳಿಗೆ ಅಪಾರ ಮಕ್ಕಳು ಭೇಟಿ ನೀಡಿ ವೀಕ್ಷಿಸಿ ಮಾಹಿತಿ ಪಡೆದರು.
ಮೌಢ್ಯ ಅಳಿಸಲು ಸಂವಿಧಾನ ಆಚರಣೆಯೇ ಮದ್ದು – ಸಚಿವ ಸತೀಶ ಜಾರಕಿಹೊಳಿ
ಸುಮಾರು ನಾಲ್ಕು ಸಾವಿರ ವರ್ಷಗಳಿಂದ ನಮ್ಮನ್ನು ಅಂಧಕಾರದಲ್ಲಿ ಇಡುವ ಕೆಲಸ ನಡೆಯುತ್ತಿಿದೆ. 12ನೇ ಶಶಮಾನದ ಬಸವಣ್ಣನವರ ಕ್ರಾಾಂತಿಯಿಂದಾಗಿ ಸಾಮಾಜಿಕ ಬದಲಾವಣೆಗಳು ಆರಂಭಗೊಂಡವು. ಈಗ ನಾವು ಸಂವಿಧಾನದ ಮೂಲಕ ಮೌಢ್ಯ ಮತ್ತು ಮೂಢನಂಬಿಕೆಗಳನ್ನು ತೆಗೆದುಹಾಕುವ ಪ್ರಯತ್ನ ಮಾಡಬೇಕಾಗಿದೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ಸಮ್ಮೇಳನದಲ್ಲಿ ಡಾ.ಹುಲಿಕಲ್ಲ ನಟರಾಜ್ ರಚಿಸಿದ ಆರು ವಿವಿಧ ಪುಸ್ತಕಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಅವರು, ನಂಬಿಕೆ, ಮೂಢನಂಬಿಕೆಗೂ ವ್ಯತ್ಯಾಾಸವಿದೆ. ಇದನ್ನೇ ಕೆಲವರು ತಮ್ಮ ಹೊಟ್ಟೆೆಪಾಡಿಗಾಗಿ ಪರಿವರ್ತಿಸಿ ಜನರನ್ನು ಮೋಸ ಮಾಡಿ ಬದುಕುತ್ತಿಿದ್ದಾರೆ. ಇದರ ಅಂತ್ಯಕ್ಕೆೆ ಹುಲಿಕಲ್ ಅವರ ತಂಡ ಮತ್ತು ಮಾನವ ಬಂಧುತ್ವ ವೇದಿಕೆ ಕೆಲಸ ಮಾಡುವ ಮೂಲಕ ಹೊಗಲಾಡಿಸಲು ಮುಂದಾಗಿವೆ ಎಂದರು.
ಬಸವಣ್ಣನವರ ಹೋರಾಟ, ಬುದ್ಧನ ಶಾಸಗಳು. ಡಾ.ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಹೋರಾಟ ಒಂದೇ ಆಗಿವೆ. ಶಾಹು ಮಹಾರಾಜ್, ಸಾವಿತ್ರಿಿಬಾಯಿ ಪುಲೆ ಸೇರಿದಂತೆಯೇ ಶ್ರೇಷ್ಠ ದಾರ್ಶನಿಕರ ತತ್ವಗಳ ಪ್ರಚಾರದ ಅಗತ್ಯ ಈಗ ಅತಿ ಅವಶ್ಯವಾಗಿ ಬೇಕಾಗಿದೆ ಎಂದರು. ತಂತ್ರಜ್ಞಾನ ಇಷ್ಟು ಮುಂದೆ ಹೋದರೂ ಹಳ್ಳಿಿಗರು ಇನ್ನೂ ಅಂಧಕಾರದಲ್ಲಿಯೇ ಇರುವುದು ನೋವಿನ ಸಂಗತಿ ಎಂದ ಅವರು, ನಮ್ಮ ಭವಿಷ್ಯ ನಮ್ಮ ಕೈಯಲ್ಲಿಯೇ ಇದೆ. ಬೇರೆಯವರಿಗೆ ನಮ್ಮ ಕೈ ಸೇರಿಸುವುದರಿಂದ ಭವಿಷ್ಯ ಬದಲಾಗದೆಂದು ಬಹು ಮಾರ್ಮಿಕವಾಗಿ ಹೇಳಿದರು.
ಯಾದಗಿರಿಯಲ್ಲಿ 5 ನೇ ರಾಜ್ಯಮಟ್ಟದ ವೈಜ್ಞಾನಿಕ ಸಮ್ಮೇಳನ ಸಚಿವ ಶರಣಬಸ್ಸಪ್ಪಗೌಡ ದರ್ಶನಾಪುರ ಕಳವಳ ತಂತ್ರಜ್ಞಾನದಲ್ಲಿ ಭಾರತ ವಿಶ್ವಮಟ್ಟದಲ್ಲಿ ಮುನ್ನಡೆದರೂ ಮೂಢನಂಬಿಕೆ ಇನ್ನೂ ಇರುವುದು ವಿಷಾದಕರ ಸಂಗತಿ

