ಸುದ್ದಿಮೂಲ ವಾರ್ತೆ ತುಮಕೂರು, ಅ.07:
ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿಿ ಜಲಾಶಯ ನೋಡಲು ಹೋಗಿ ಆಕಸ್ಮಿಿಕವಾಗಿ ಒಂದು ವರ್ಷದ ಮಗು ಸೇರಿ ಆರು ಮಂದಿ ಮೃತಪಟ್ಟಿಿರುವ ಹೃದಯವಿದ್ರಾಾವಕ ಘಟನೆ ಜಲಾಶಯದ ಹಿನ್ನೀರಿನಲ್ಲಿ ನಡೆದಿದೆ.
ಜಲಾಶಯದಲ್ಲಿ ಕೊಚ್ಚಿಿ ಹೋಗಿದ್ದ 6 ಮಂದಿ ಮೃತಪಟ್ಟಿಿದ್ದು ಮೂರು ಮಂದಿ ಪ್ರಾಾಣಾಪಾಯದಿಂದ ಪಾರಾಗಿದ್ದಾರೆ. ಮೃತರನ್ನು ತುಮಕೂರು ನಗರದ ಬಿ.ಜಿ.ಪಾಳ್ಯದ ಅರ್ಬಿನ್ (20) ತಬಸುಮ್ (45), ಶಬಾನ (44), ನ್ರಿಾ (4), ಮಹಿಬ್ (1) ಹಾಗೂ ಮಾಗಡಿಪಾಳ್ಯದ ಸಾದಿಯಾ(25) ಎಂದು ಗುರುತಿಸಲಾಗಿದೆ. ಬರ್ಷೀ (18) ನವಾಜ್ (32) ಹಾಗೂ ಮೋಸಿನ್ (35) ಪ್ರಾಾಣಾಪಾಯದಿಂದ ಪಾರಾಗಿದ್ದು ಚುಂಚನಗಿರಿ ಆಸ್ಪತ್ರೆೆಯಲ್ಲಿ ದಾಖಲಿಸಲಾಗಿದೆ.
ಇವರು ತಾಲೂಕಿನ ಯಡೆಯೂರು ಹೋಬಳಿ ಮಾಗಡಿಪಾಳ್ಯದ ಸಂಬಂಧಿಕರ ಮನೆಗೆ ಬಂದಿದ್ದು, ಜಲಾಶಯ ನೋಡಲು ಹೋಗಿದ್ದರು. ಜಲಾಶಯದ ಹೆಚ್ಚುವರಿ ನೀರು ರಭಸವಾಗಿ ಹರಿದ ಪರಿಣಾಮ ನೀರಿನಲ್ಲಿ ಕೊಚ್ಚಿಿಕೊಂಡು ಹೋಗಿದ್ದಾರೆ.
ಅಮೃತೂರು ಪೊಲೀಸರು ಮೃತದೇಹಪತ್ತೆೆ ಹಾಗೂ ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದು, ಈ ಜಾಗ ಯಾರಿಗೆ ಸೇರಬೇಕೆಂದು ಮಂಡ್ಯ ಹಾಗೂ ತುಮಕೂರು ಜಿಲ್ಲಾ ಪೊಲೀಸರ ನಡುವೆ ಗೊಂದಲ ಉಂಟಾಗಿದೆ. ತುಮಕೂರು ಎಸ್ಪಿಿ ಅಶೋಕ್ ಸ್ಥಳಕ್ಕೆೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಕ್ರಮ ಕೈಗೊಳ್ಳುವ ನಿಟ್ಟಿಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕುಣಿಗಲ್ ಡಿವೈಎಸ್ಪಿಿ ಓಂ ಪ್ರಕಾಶ್ ಸಿಪಿಐಗಳಾದ ನವೀನ್ ಗೌಡ ಹಾಗೂ ಮಾಧ್ಯ ನಾಯಕ್ ಸ್ಥಳದಲ್ಲಿ ಮೊಕ್ಕಾಾಂ ಹೂಡಿದ್ದಾರೆ. ರಾತ್ರಿಿಯಾಗಿದ್ದರಿಂದ ಅಗ್ನಿಿಶಾಮಕ ಇಲಾಖೆ ಸಿಬ್ಬಂದಿ ಮೃತದೇಹ ಪತ್ತೆೆ ಕಾರ್ಯಾಚರಣೆ ನಿಲ್ಲಿಸಿದ್ದು, ಬುಧವಾರ ಮತ್ತೆೆ ಶೋಧ ಕಾರ್ಯ ನಡೆಸಲಿದ್ದಾರೆ.

