ಸುದ್ದಿಮೂಲ ವಾರ್ತೆ ಮಾನ್ವಿ, ಡಿ.15
ಅಂಗಡಿಯೊಂದರಿಂದ ಖರೀದಿ ಮಾಡಿದ ಪೀಠೋಪಕರಣಗಳಿಗೆ ಉಟಕನೂರು ಗ್ರಾಾಮ ಪಂಚಾಯಿತಿಯಿಂದ ನಿಗದಿತ ಅವಧಿಯೊಳಗೆ ಹಣ ಪಾವತಿ ಮಾಡಲು ವಿಳಂಬ ಮಾಡಿದ ಹಿನ್ನಲೆಯಲ್ಲಿ ಮಾನ್ವಿಿ ತಾಲೂಕಾ ಪಂಚಾಯಿತಿ ಕಚೇರಿಯಲ್ಲಿನ ಪಿಠೋಪಕರಣಗಳನ್ನು ನ್ಯಾಾಯಾಲಯದ ಅದೇಶದಂತೆ ಸೋಮವಾರ ಜಪ್ತಿಿ ಮಾಡಿದ ಪ್ರಸಂಗ ಜರುಗಿದೆ.
ಮಾನ್ವಿಿ ತಾಲೂಕಿನ ಉಟಕನೂರು ಗ್ರಾಾಮ ಪಂಚಾಯಿತಿಗೆ ಅಂದಾಜು 6 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಅಗತ್ಯವಿರುವ ಸಾಮಾಗ್ರಿಿ ಗಳನ್ನು ಪೋತ್ನಾಾಳ್ ಗ್ರಾಾಮದ ಬಾಲಾಜಿ ಹಾರ್ಡ್ ವೇರ್ ಅಂಗಡಿಯಿದ 2020 ರಲ್ಲಿ ಖರೀದಿಸಲಾಗಿತ್ತು. ಖರೀದಿ ಮಾಡಿದ ಸಾಮಾಗ್ರಿಿ ಗಳಿಗೆ ಹಣ ಪಾವತಿಸುವಂತೆ ಸಾಮಾಗ್ರಿಿ ಗಳನ್ನು ಪೂರೈಸಿದ ಅಂಗಡಿ ಮಾಲಿಕ ರಾಮಕೃಷ್ಣ ಅವರು ಅನೇಕ ಬಾರಿ ಉಟಕನೂರು ಗ್ರಾಾಮ ಪಂಚಾಯಿತಿ ಅಧಿಕಾರಿಗಳಿಗೆ ಮನವಿ ಮಾಡಿಕೊಂಡರೂ ಅವರು ಸ್ಪಂದಿಸದೇ ಇದ್ದುದ್ದರಿಂದ ಅಂಗಡಿ ಮಾಲಿಕ ರಾಮಕೃಷ್ಣ ಅವರು ಮಾನ್ವಿಿ ನ್ಯಾಾಯಾಲಯಕ್ಕೆೆ ತಮ್ಮ ಪರ ವಕೀಲ ವೀರನಗೌಡ ಪೋತ್ನಾಾಳ್ ಇವರ ಮೂಲಕ 2022 ರಲ್ಲಿ ಮೊರೆ ಹೋಗಿದ್ದರು.
ಇವರ ಮನವಿ ಪುರಸ್ಕರಿಸಿದ ನ್ಯಾಾಯಾಲಯವು ಅನೇಕ ಬಾರಿ ಹಣ ಪಾವತಿಸುವಂತೆ ಗ್ರಾಾಮ ಪಂಚಾಯತಿಗೆ ಆದೇಶ ನೀಡಿದರೂ ಹಣ ಪಾವತಿ ಮಾಡದೇ ವಿಳಂಬ ಮಾಡಿದ್ದರಿಂದ ಕಳೆದ ತಿಂಗಳು ಉಟಕನೂರು ಗ್ರಾಾಮ ಪಂಚಾಯಿತಿ ಕಚೇರಿಯ ಪಿಠೋಪಕರಣಗಳನ್ನು ನ್ಯಾಾಯಾಲಯದ ಆದೇಶದ ಮೇರೆಗೆ ಜಪ್ತಿಿ ಮಾಡಿ ಒಂದು ತಿಂಗಳೊಳಗಾಗಿ ಹಣ ಪಾವತಿಸುವಂತೆ ತಾ.ಪಂ ಹಾಗೂ ಗ್ರಾಾ.ಪಂ ಅಧಿಕಾರಿಗಳಿಗೆ ಎಚ್ಚರಿಕೆ ನೋಟಿಸು ನೀಡಲಾಗಿತ್ತು.
ಆದರೆ ಒಂದು ತಿಂಗಳು ಗಡುವು ಅವಧಿ ಮುಗಿದರೂ ಗ್ರಾಾ.ಪಂ. ಯಿಂದ ಹಣ ಪಾವತಿ ಮಾಡದ ಕಾರಣ ತಾಲೂಕಾ ಪಂಚಾಯಿತಿ ಕಚೇರಿಯಲ್ಲಿರುವ ಎಲ್ಲಾ ಪಿಠೋಪಕರಣ, ಗಣಕಯಂತ್ರ, ಇತರ ಸಾಮಾಗ್ರಿಿಗಳನ್ನು ಜಪ್ತಿಿ ಮಾಡುವಂತೆ ನ್ಯಾಾಯಾಲಯ ಅದೇಶ ನೀಡಿದ್ದರಿಂದ ಸೋಮವಾರ ನ್ಯಾಾಯಾಲಯದ ಸಿಬ್ಬಂದಿಗಳು, ವಕೀಲರು ಹಾಗೂ ಅಂಗಡಿ ಮಾಲಿಕರ ಸಮ್ಮುಖದಲ್ಲಿ ಪೀಠೋಪಕರಣಗಳನ್ನು ಜಪ್ತಿಿ ಮಾಡಿಕೊಂಡು ನ್ಯಾಾಯಾಲಯದ ವಶಕ್ಕೆೆ ನೀಡಲಾಯಿತು ಎಂದು ಅಂಗಡಿ ಮಾಲಿಕನ ಪರ ವಕೀಲ ಎಂ.ವೀರನಗೌಡ ತಿಳಿಸಿದರು.
6 ಲಕ್ಷ ರೂ. ಪಾವತಿ ವಿಳಂಬ : ನ್ಯಾಯಾಲಯದ ಆದೇಶದ ಮೇರೆಗೆ ಮಾನ್ವಿ ತಾ.ಪಂ ಕಚೇರಿಯ ಪೀಠೋಪಕರಣಗಳ ಜಪ್ತಿ!!

