ನವದೆಹಲಿ ಮಾ.31: ಸೊಳ್ಳೆ ಕಾಟದಿಂದ ತಪ್ಪಿಸಿಕೊಳ್ಳಲು ರಾತ್ರಿ ಮಲಗುವ ಕೊಠಡಿಯಲ್ಲಿ ಸೊಳ್ಳೆ ಬತ್ತಿ ಹೆಚ್ಚಿಟ್ಟು ಮಲಗಿರುವುದರ ಎಫೆಕ್ಟ್ ಒಂದೇ ಕುಟುಂಬದ 6 ಜನ ಸದಸ್ಯರು ಸಾವನಪ್ಪಿರುವ ಘಟನೆ ನವದೆಹಲಿಯಲ್ಲಿ ನಡೆದಿದೆ.
ರಾತ್ರಿ ಮಲಗುವ ಮುನ್ನ ಕೊಠಡಿಯಲ್ಲಿ ಸೊಳ್ಳೆ ಬತ್ತಿ ಹಚ್ಚಿಟ್ಟು ಕಿಟಕಿ ಬಾಗಿಲು ಮುಚ್ಚಿದ್ದರ ಪರಿಣಾಮವಾಗಿ ವಿಷಕಾರಿ ಹೊಗೆಯಿಂದ ಉಸಿರುಗಟ್ಟಿ ಸಾವನಪ್ಪಿದ್ದಾರೆ. ಪೊಲೀಸರ ಪ್ರಕಾರ, ಉರಿಯುತ್ತಿದ್ದ ಸೊಳ್ಳೆ ಕಾಯಿಲ್ ರಾತ್ರಿಯ ಸಮಯದಲ್ಲಿ ಹಾಸಿಗೆಯ ಮೇಲೆ ಬಿದ್ದಿದೆ. ಇದರ ವಿಷಕಾರಿ ಹೊಗೆಯ ಪರಿಣಾಮವಾಗಿ ಕುಟುಂಬದ ಸದಸ್ಯರು ಪ್ರಜ್ಞೆ ಕಳೆದುಕೊಂಡರು ಮತ್ತು ಸಾವನ್ನಪ್ಪಿದರು ಎಂದು ತಿಳಿದುಬಂದಿದೆ.
ಸುಡುವ ಸೊಳ್ಳೆ ಬತ್ತಿಯಿಂದ ಬಿಡುಗಾಡೆಯಾದ ಕಾರ್ಬನ್ ಮಾನಾಕ್ಸೈಡ್ ನಿಂದಾಗಿ ಉಸಿರಾಡಲು ತೊಂದರೆ ಆಗಿದ್ದರಿಂದ ಉಸಿರು ಗಟ್ಟಿ ಸಾವನಪ್ಪಿದ್ದಾರೆ ಎಂಬುವುದನ್ನು ಮೃತ ದೇಹವನ್ನು ಪರೀಕ್ಷೆಗೆ ಒಳ ಪಡಿಸಿದ ನಂತರ ತಿಳಿದು ಬಂದಿದೆ.
ಈ ಘಟನೆಯಲ್ಲಿ 4 ಜನ ಪುರುಷರು ಒಬ್ಬ ಮಹಿಳೆ ಹಾಗೂ ಒಂದೂವರೆ ವರ್ಷದ ಮಗು ಸೇರಿ ಆರು ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ, 15 ವರ್ಷದ ಬಾಲಕಿ ಸೇರಿದಂತೆ ಇನ್ನು ಇಬ್ಬರು ಸದಸ್ಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದರಲ್ಲಿ 22 ವರ್ಷದ ಒಬ್ಬ ವ್ಯಕ್ತಿಯನ್ನು ಸುಟ್ಟ ಗಾಯಗಳಿಂದಾಗಿ ಚಿಕಿತ್ಸೆ ನೀಡಲಾಗುತ್ತಿದೆ. ಪ್ರಥಮ ಚಿಕಿತ್ಸೆ ನಂತರ ಡಿಸ್ಚಾರ್ಜ್ ಮಾಡಲಾಗಿದೆ.