ಸುದ್ದಿಮೂಲ ವಾರ್ತೆ ಸಿರವಾರ, ಜ.05:
ಹಣ ಮೋಸದಿಂದ ಬೇಕಾದರೂ ಗಳಿಸಬಹುದು, ಆದರೆ ವಿದ್ಯೆೆ ಶ್ರಮದಿಂದ ಮಾತ್ರ ಗಳಿಸಲು ಸಾಧ್ಯ ಎಂದು ನಿವೃತ್ತ ಶಿಕ್ಷಕ ಹೆಚ್.ಕೋಟ್ರೇೇಶ ಅಭಿಪ್ರಾಾಯಪಟ್ಟರು.
ಅವರು ರವಿವಾರ ಪಟ್ಟಣದ ಸರಕಾರಿ ಬಾಲಕರ ಪ್ರೌೌಢಶಾಲೆಯ 60 ವರ್ಷದ ಸಂಭ್ರಮ ಹಾಗೂ ಗುರುಗಳಿಗೆ ಗೌರವಿಸುವ ಗುರುವಂದನಾ ಕಾರ್ಯಕ್ರಮದಲ್ಲಿ ಭೂದಾನಿ ದಿ.ನೀಲಮ್ಮ ಗೌಡ್ರ ಹಾಗೂ ವಿದ್ಯಾಾದೇವತೆ ಸರಸ್ವತಿಯ ಭಾವಚಿತ್ರಕ್ಕೆೆ ಪೂಜೆಸಲ್ಲಿಸಿ ನಂತರ ಗೌರವ ಸನ್ಮಾಾನ ಸ್ವೀಕರಿಸಿ ಮಾತನಾಡಿದರು.
ವಿದ್ಯೆೆ ಎಂಬುದು ಸಾಧಕರ ಸ್ವತ್ತುಘಿ. ಅದನ್ನು ವಾಮಮಾರ್ಗದಿಂದ ಗಳಿಸಲು ಸಾಧ್ಯವಿಲ್ಲಘಿ. ನಿರಂತರ ಪ್ರಯತ್ನ ಮತ್ತು ಆಸಕ್ತಿಿ ಹೊಂದಿದವರಿಗೆ ಮಾತ್ರ ವಿದ್ಯಾಾ ಸರಸ್ವತಿ ಒಲಿಯುತ್ತಾಾಳೆ ಎಂದು ಅಭಿಪ್ರಾಾಯಪಟ್ಟರು.
ಸಿರವಾರ ಪಟ್ಟಣದ ಈ ಶಾಲೆಯಲ್ಲಿ ನಾನು ಸ್ಥಳೀಯರ ಹಾಗೂ ವಿದ್ಯಾಾರ್ಥಿಗಳ ಸಹಕಾರದಿಂದ 21ವರ್ಷ ನಿರಂತರ ಸೇವೆ ಸಲ್ಲಿಸಿದ್ದು, ಸಿರವಾರ ಶಾಲೆ ನನ್ನ ಬದುಕನ್ನು ಕಟ್ಟಿಿಕೊಟ್ಟಿಿದೆ, ಶಾಲೆ ರಾಜ್ಯದಲ್ಲಿ ಉತ್ತಮ ಹೆಸರು ಮಾಡಿದೆ, ಭೂ ದಾನಿಗಳ ಹೆಸರು ಅಜರಾಮರವಾಗಿದೆ, ಅವರಿಗೆ ನಾವು ಚಿರರುಣಿಗಳು ಎಂದರು.
ಎಂ.ಬಿ.ಪಾಟೀಲ ಮಾತನಾಡಿ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಲಿ, ಉನ್ನತ ಮಟ್ಟಕ್ಕೆೆ ಬೆಳೆಯಲಿ, ಹಿರಿಯರ ಮಾರ್ಗದಲ್ಲಿ ಸಾಗಬೇಕು ಎಂದರು.
ಸಮಾರಂಭ ಕುರಿತು ಶಿಕ್ಷಕರಾದ ಹಳಕಟ್ಟಿಿ, ಬಾಲಚಂದ್ರ ಗೌಡ, ಚಂದ್ರಕಲಾ ಮಾತನಾಡಿದರು.
ಇದೇ ವೇಳೆ ಶಾಲೆಯ ಭೂ ದಾನಿಗಳ ಕುಟುಂಬದ ಸದಸ್ಯರಿಗೆ ಸನ್ಮಾಾನಿಸಲಾಯಿತು.
ಮಲ್ಲಿಕಾರ್ಜುನ ಹಳ್ಳೂರು ಪ್ರಾಾಸ್ತಾಾವಿಕ ನುಡಿದರು. ಶಾಲೆಯ ಎಸ್ ಡಿಎಂ.ಸಿ ಅಧ್ಯಕ್ಷ ಎಂ.ಡಿ. ರಫಿ, ಮುಖ್ಯ ಗುರುಗಳು, ಶಿಕ್ಷಕರು, ಹಳೆಯ ವಿದ್ಯಾಾರ್ಥಿಗಳು, ಗ್ರಾಾಮಸ್ಥರು, ಶಾಲಾ ವಿದ್ಯಾಾರ್ಥಿಗಳು ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಶಿಕ್ಷಕರಿಗೆ ಭವ್ಯವಾದ ಸ್ವಾಾಗತ, ಭೂ ದಾನಿ ನೀಲಮ್ಮ ಗೌಡ್ರ ಮೂರ್ತಿಗೆ ಮಾಲಾರ್ಪಣೆ ಮಾಡಲಾಯಿತು. 60ಜನ ಶಿಕ್ಷಕರಿಗೆ ಸನ್ಮಾಾನ ಮಾಡಲಾಯಿತು. ಇದೊಂದು ಅದ್ದೂರಿ ಕಾರ್ಯಕ್ರಮವಾಗಿ ಶಾಲೆಯ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುವಂತಹ ಕಾರ್ಯಕ್ರಮ ಎಂದು ಗ್ರಾಾಮಸ್ಥರು ಕೊಂಡಾಡಿದರು.
ಸಿರವಾರ ಸರಕಾರಿ ಪ್ರೌಢ ಶಾಲೆಗೆ 60ರ ಸಂಭ್ರಮ ; ಅದ್ಧೂರಿ ಕಾರ್ಯಕ್ರಮ ವಿದ್ಯೆ ಮೋಸದಿಂದ ಗಳಿಸುವ ಸಾಧನವಲ್ಲ – ಕೋಟ್ರೇಶ

