ಸುದ್ದಿಮೂಲ ವಾರ್ತೆ ಕಲಬುರಗಿ, ಡಿ.29:
ಕೋಲಿ,ಕಬ್ಬಲಿಗ,ಅಂಬಿಗ,ಬೆಸ್ತ ಹಾಗೂ ಬಾರ್ಕಿ ಎಂಬ ಐದು ಪರ್ಯಾಯ ಪದಗಳು ಒಳಗೊಂಡಂತೆ ಸಮುದಾಯವನ್ನು ಎಸ್ಟಿಿ ಪಟ್ಟಿಿಗೆ ಸೇರಿಸಿ ಕೇಂದ್ರ ಸರ್ಕಾರಕ್ಕೆೆ ಶಿಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆೆ ಒತ್ತಾಾಯಿಸಿ ನಗರದಲ್ಲಿ ಕೋಲಿ ಕಬ್ಬಲಿಗ ಸಮುದಾಯದಿಂದ ಸ್ವಾಾಭಿಮಾನಿಗಳ ಬೃಹತ್ ಪ್ರತಿಭಟನೆ ನಡೆಸಲಾಯಿತು.
ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಸಮುದಾಯದ ಸ್ವಾಾಮೀಜಿಗಳು, ರಾಜಕೀಯ ಜನಪ್ರತಿನಿಧಿಗಳು ಹಾಗೂ ಮುಖಂಡರ ಸಾಮೂಹಿಕ ನೇತೃತ್ವದಲ್ಲಿ ಸಾವಿರಾರು ಜನರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಬೇಕೇ ಬೇಕು ನ್ಯಾಾಯ ಬೇಕು. ನಿಜ ಶರಣ ಅಂಬಿಗರ ಚೌಡಯ್ಯನವರಿಗೆ ಜೈ. ಸ್ವಾಾಭಿಮಾನದ ಸಿಂಹ ವಿಠಲ್ ಹೇರೂರ್ ಅವರಿಗೆ ಜಯವಾಗಲಿ ಎಂದು ಜೈಘೋಷ ಕೂಗಿ, ಎಸ್ಟಿಿ ಸೇರ್ಪಡೆಗೆ ಆಗ್ರಹಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಮಾತನಾಡಿದ ಸಮುದಾಯದ ಮುಖಂಡರು, ಕೋಲಿ, ಕಬ್ಬಲಿಗ,ಅಂಬಿಗ, ಬೆಸ್ತ ಹಾಗೂ ಆದಿವಾಸಿ ಜನಾಂಗ ಶೈಕ್ಷಣಿಕವಾಗಿ,ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿದ್ದು, ಸಮುದಾಯದ ಸರ್ವತೋಮುಖ ಅಭಿವೃದ್ಧಿಿಗೆ ಎಸ್ಟಿಿ ಮೀಸಲಾತಿ ಅನಿವಾರ್ಯವಾಗಿದೆ. ಎಸ್ಟಿಿ ಸೇರ್ಪಡೆಯಿಂದ ಸಮಾಜದ ಮಕ್ಕಳಿಗೆ ಶಿಕ್ಷಣ,ಉದ್ಯೋೋಗ ಹಾಗೂ ರಾಜಕೀಯ ಪ್ರತಿನಿಧಿತ್ವಕ್ಕೆೆ ಅವಕಾಶ ಸಿಗಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರ ಈ ಹಿಂದೆ ಸುಮಾರು ಬಾರಿ ಸಮುದಾಯವನ್ನು ಎಸ್ಟಿಿ ಪಟ್ಟಿಿಗೆ ಸೇರಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆೆ ಪ್ರಸ್ತಾಾವನೆ ಸಲ್ಲಿಸಿದ್ದರೂ, ಕೇಂದ್ರ ಸರ್ಕಾರ ತಾಂತ್ರಿಿಕ ಕಾರಣಗಳನ್ನು ಉಲ್ಲೇಖಿಸಿ ಅದನ್ನು ವಾಪಸ್ ಕಳುಹಿಸಿದೆ.ಅದರಲ್ಲೂ ಕಳೆದ ಎರಡು ವರ್ಷಗಳಿಂದ ರಾಜ್ಯ ಸರ್ಕಾರ ಪರಿಷ್ಕೃತ ಪ್ರಸ್ತಾಾವನೆಯನ್ನು ಕೇಂದ್ರಕ್ಕೆೆ ಸಲ್ಲಿಸದೆ ವಿಳಂಬ ಮಾಡುತ್ತಿಿರುವುದು ಸಮುದಾಯದ ಮೇಲೆ ಅನ್ಯಾಾಯವಾಗಿದೆ ಎಂದು ಆಕ್ರೋೋಶ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ತಕ್ಷಣವೇ ಪರಿಷ್ಕೃತ ಪ್ರಸ್ತಾಾವನೆಯನ್ನು ಕೇಂದ್ರ ಸರ್ಕಾರಕ್ಕೆೆ ಸಲ್ಲಿಸಬೇಕು. ನಮ್ಮ ನ್ಯಾಾಯಸಮ್ಮತ ಬೇಡಿಕೆ ಈಡೇರುವವರೆಗೂ ಹೋರಾಟ ನಿಲ್ಲಿಸುವುದಿಲ್ಲ, ಸರ್ಕಾರಗಳ ನಿರ್ಲಕ್ಷ್ಯ ಮುಂದುವರಿದರೆ ರಾಜ್ಯವ್ಯಾಾಪಿ ಉಗ್ರ ಹೋರಾಟ ನಡೆಸಿ, ವಿಧಾನ ಸೌಧಕ್ಕೆೆ ಹಾಗೂ ರಾಜಭವನಕ್ಕೆೆ ಮುತ್ತಿಿಗೆ ಹಾಕುವ ಯೋಜನೆ ಕೈಗೊಳ್ಳಲಾಗುವುದು ಎಂದು ಘೋಷಿಸಿದರು.
ಜಗದ್ಗುರು ಶಾಂತಭೀಷ್ಮ ಚೌಡಯ್ಯ ಸ್ವಾಾಮೀಜಿ ಮಾತನಾಡಿ, ಕ್ರಾಾಂತಿಕಾರಿ ಹೋರಾಟ ಆರಂಭವಾಗಿದೆ. 2 ವರ್ಷದಿಂದ ರಾಜ್ಯದಲ್ಲಿರುವ ಎಸ್ಟಿಿ ೈಲ್ ಕೇಂದ್ರಕ್ಕೆೆ ಕಳುಹಿಸಿ, ಸಮುದಾಯಕ್ಕೆೆ ನ್ಯಾಾಯ ಒದಗಿಸಬೇಕು. ನಮಗೆ ಮೀಸಲಾತಿ ನೀಡುವವರೆಗೆ ನಮ್ಮ ಸಮಾಜದ ಹೋರಾಟ ನಿಲ್ಲದು ಎಂದರು.
ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ಮಾತನಾಡಿ, ಸಮುದಾಯದ ಮೂರು ದಶಕಗಳ ಬೇಡಿಕೆ ಹಾಗೂ ಸಮಾಜದ ಇಡೀ ಜೀವನ ರೂಪಿಸುವ ಬೇಡಿಕೆಯಾಗಿದೆ. ರಾಜ್ಯ ಸರ್ಕಾರ ಕೋಲಿ ಕಬ್ಬಲಿಗ ಸೇರಿ ಐದು ಪರ್ಯಾಯ ಪದಗಳನ್ನು ಎಸ್ಟಿಿಗೆ ಸೇರ್ಪಡೆ ಮಾಡಬೇಕೆಂಬ ಹೊಸ ೈಲ್ ಸಿದ್ದಪಡಿಸಿ ಕೇಂದ್ರ ಸರ್ಕಾರಕ್ಕೆೆ ಶಿಾರಸ್ಸು ಮಾಡಬೇಕು ಎಂದು ಆಗ್ರಹಿಸಿದರು.
60 ವರ್ಷಗಳ ಕಾಲ ಸಮುದಾಯದ ಮತಗಳನ್ನು ಪಡೆದು, ಆಡಳಿತ ನಡೆಸಿರುವ ಜಿಲ್ಲೆಯ ನಾಯಕರಿಗೆ ಅದರ ಖುಣ ತಿರುಗಿಸಬೇಕು ಎಂಬ ಕನಿಷ್ಠ ಜ್ಞಾನ ಬಂದಿಲ್ಲ. ಸಮಾಜವನ್ನು ಎಸ್ಟಿಿಗೆ ಸೇರಿಸಬಾರದು ಎಂಬ ವಿಚಾರ ಸರ್ಕಾರಕ್ಕಿಿದೆ. ಒಂದು ವೇಳೆ ನಮ್ಮ ದಶಕಗಳ ಬೇಡಿಕೆಗೆ ರಾಜ್ಯ ಸರ್ಕಾರ ನ್ಯಾಾಯ ಕೊಡಿಸದೇ ಹೋದರೆ, ನಮ್ಮ ಸಮುದಾಯದ ಸ್ವಾಾಮೀಜಿಗಳ ನೇತೃತ್ವದಲ್ಲಿ ಮುಂಬರುವ ದಿನಗಳಲ್ಲಿ ಇನ್ನಷ್ಟು ಉಗ್ರವಾಗಿ ಹೋರಾಟ ಕೈಗೆತ್ತಿಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ವಿಧಾನ ಪರಿಷತ್ ಸದಸ್ಯ ಡಾ.ಸಾಬಣ್ಣಾಾ ತಳವಾರ ಮಾತನಾಡಿ, ನಾವೆಲ್ಲ ಆದಿವಾಸಿಗಳು ಕಬ್ಬಲಿಗರಾಗಿದ್ದೇವೆ. ಒಂದೇ ಜಾತಿ, ಒಂದೇ ಗುರಿ. ಆದರೆ, ನಮ್ಮವರೇ ಕಳೆದ 30 ವರ್ಷಗಳಿಂದ ದಾರಿ ತಪ್ಪಿಿಸಿದ್ದರಿಂದ ದಿಕ್ಕಾಾಪಾಲಾಗಿದ್ದೇವೆ. ನಮ್ಮ ಹೆಸರಿನಲ್ಲಿ 52 ವರ್ಷ ರಾಜಕಾರಣ ಮಾಡಿದವರು ಸಮಾಜಕ್ಕೆೆ ನ್ಯಾಾಯ ನೀಡುವ ಕೆಲಸ ಮಾಡಿಲ್ಲ. ಗೆಲ್ಲಿಸಿದವರಿಗೆ ಸೋಲಿನ ರುಚಿ ತೋರಿಸುವ ಶಕ್ತಿಿ ಸಮಾಜಕ್ಕಿಿದೆ. ಈಗಲಾದರೂ ಎಸ್ಟಿಿ ನೀಡಿ,ಇಲ್ಲದಿದ್ದರೆ ಸಮುದಾಯ ಸುಮ್ನೆೆ ಇರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ತೋನಸಳ್ಳಿಿಯ ಮಲ್ಲಪ್ಪಣ್ಣ ಸ್ವಾಾಮೀಜಿ, ಶರಣಪ್ಪ ತಳವಾರ್, ಶಿವಕುಮಾರ್ ನಾಟೀಕರ್, ಶೋಭಾ ಬಾಣಿ, ಸುನೀತಾ ತಳವಾರ, ಶಿವಾಜಿ ಕೋಳಿ ಮಾತನಾಡಿದರು. ಪ್ರೇೇಮ ಕೋಲಿ, ರವಿಕುಮಾರ್ ಕೋರವಿ, ತಿಪ್ಪಣ್ಣ ರೆಡ್ಡಿಿ, ಪಿಡ್ಡಪ್ಪ ಜಾಲಗಾರ್, ಭಗವಂತರಾಯ್ ಬೆಣ್ಣೂರ, ಸಂತೋಷ್ ಬೆಣ್ಣೂರ, ದಿಗಂಬರ ಕರ್ಜಗಿ, ಭೀಮರಾಯ ಜನೀವಾರ್, ಸುರೇಶ್ ಹುಡುಗಿ, ಶಿವಪುತ್ರ ಕೋಣಿನ್, ರಾಕೇಶ್ ಜಮಾದಾರ್, ಭೀಮಣ್ಣ ಶಕಾಪುರ, ಮಲ್ಲಿಕಾರ್ಜುನ ಎಮ್ಮೆೆಗನೂರ, ಶ್ರೀನಿವಾಸ ಮುಕ್ತಂ, ಶಿವಕುಮಾರ್ ಸುಣಗಾರ, ಪ್ರಕಾಶ್ ನಾಗೂರ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.
ಕೋಲಿ, ಕಬ್ಬಲಿಗ ಸ್ವಾಾಭಿಮಾನಿಗಳ ಬೃಹತ್ ಪ್ರತಿಭಟನೆ: ಎಸ್ಟಿ ಸೇರ್ಪಡೆಗೆ ಆಗ್ರಹ

