ಪಟ್ನಾಾ (ಬಿಹಾರ) , ನ.06:
ಬಿಹಾರ ವಿಧಾನಸಭೆಯ 121 ಕ್ಷೇತ್ರಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಶೇ.64.66ರಷ್ಟು ಮತದಾನವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಬಿಹಾರದ ಇತಿಹಾಸಲ್ಲಿ ಅತೀ ಹೆಚ್ಚು ಮತದಾನವಾಗಿದೆ. 3.75 ಕೋಟಿ ಮತದಾರರು ಅಂತಿಮ ಪಟ್ಟಿಿಯಲ್ಲಿದ್ದರು. ಇವರಲ್ಲಿ ಶೇ.64.66ರಷ್ಟು ಮತದಾನವಾಗಿದೆ. 2000ರಲ್ಲಿ ಶೇ. 62. 57ರಷ್ಟು ಮತದಾನವಾಗಿತ್ತು. 2020ರಲ್ಲಿ 57.29 ರಷ್ಟು ಮತದಾನವಾಗಿತ್ತು. ಈ ಬಾರಿ ಮತದಾನ ಅಧಿಕವಾಗಿದ್ದು ಇತಿಹಾಸ ಸೃಷ್ಟಿಿಯಾಗಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹೇಳಿದ್ದಾರೆ.
ಗುರುವಾರ ಬೆಳಗ್ಗೆೆ 7 ರಿಂದ ಸಂಜೆ 6 ರವರೆಗೆ ಮತದಾನ ನಡೆಯಿತು. ಬೇಗುಸರಾಯ್ ಜಿಲ್ಲೆಯಲ್ಲಿ ಅತಿ ಹೆಚ್ಚು ಮತದಾನ ನಡೆದಿರುವುದಾಗಿ ತಿಳಿದು ಬಂದಿದೆ.
ರಾಜ್ಯದ ಒಟ್ಟು 243 ಸ್ಥಾಾನಗಳ ಪೈಕಿ 18 ಜಿಲ್ಲೆಗಳ 121 ಕ್ಷೇತ್ರಗಳಲ್ಲಿ 1,314 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಮತದಾರರು ತಮ್ಮ ಮತ ಚಲಾಯಿಸಲಿದ್ದಾರೆ.
ರಾಷ್ಟ್ರೀಯ ಜನತಾದಳ (ಆರ್ಜೆಡಿ) ನಾಯಕ ತೇಜಸ್ವಿಿ ಯಾದವ್, ಅವರ ಸಹೋದರ ಮತ್ತು ಜನಶಕ್ತಿಿ ಜನತಾದಳ (ಜೆಜೆಡಿ) ಮುಖ್ಯಸ್ಥ ತೇಜ್ ಪ್ರತಾಪ್ ಯಾದವ್, ಉಪ ಮುಖ್ಯಮಂತ್ರಿಿಗಳಾದ ಸಾಮ್ರಾಾಟ್ ಚೌಧರಿ, ವಿಜಯ್ ಕುರ್ಮಾ ಸಿನ್ಹಾಾ ಮತ್ತು ಅನಂತ್ ಸಿಂಗ್ ಅವರು ಸ್ಪರ್ಧಿಸಿರುವ ಕ್ಷೇತ್ರಗಳಿಗೆ ಇಂದು ಮತದನಾ ನಡೆಯಿತು.
ಭದ್ರತಾ ಕಾರಣಗಳಿಂದಾಗಿ, ಸಿಮ್ರಿಿ ಭಕ್ತಿಿಯಾರ್ಪುರ, ಮಹಿಷಿ, ತಾರಾಪುರ, ಮುಂಗೇರ್, ಜಮಾಲ್ಪುರ ಮತ್ತು ಸೂರ್ಯಗಢ ಕ್ಷೇತ್ರದ ವ್ಯಾಾಪ್ತಿಿಯ 56 ಬೂತ್ಗಳಲ್ಲಿ ಮತದಾನದ ಅವಧಿಯನ್ನು ಬೆಳಿಗ್ಗೆೆ 7 ರಿಂದ ಸಂಜೆ 6 ರವರೆಗೆ ಕಡಿಮೆ ಮಾಡಲಾಗಿದೆ.
ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾಾತ್ಮಕ ಒಕ್ಕೂಟ (ಎನ್ಡಿಎ) ಅಧಿಕಾರವನ್ನು ಉಳಿಸಿಕೊಳ್ಳಲು ಮತ್ತು ಮಹಾಘಟಬಂಧನ್ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯಲು ಪೈಪೋಟಿ ನಡೆಸುತ್ತಿಿವೆ.

