ಸುದ್ದಿಮೂಲ ವಾರ್ತೆ ಕಲಬುರಗಿ, ಜ.05:
ಕಲಬುರಗಿ ಮಹಾನಗರದಲ್ಲಿ ನಿಜಾಮರ ಕಾಲದಿಂದ ಇರುವ 7 ಕೆರೆಗಳಲ್ಲಿ ಆಗಿರುವ ಒತ್ತುವರಿಯನ್ನು ತೆರವುಗೊಳಿಸಿ ಜಮೀನನ್ನು ಮರಳಿ ಸರ್ಕಾರದ ಸ್ವಾಾಧೀನಕ್ಕೆೆ ಪಡೆಯಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಕರ್ನಾಟಕ ಲೋಕಾಯುಕ್ತ ನ್ಯಾಾಯಮೂರ್ತಿ ಬಿ.ಎಸ್.ಪಾಟೀಲ ತಿಳಿಸಿದರು.
ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯ ನಂತರ ಪತ್ರಿಿಕಾಗೋಷ್ಠಿಿ ಉದ್ದೇಶಿಸಿ ಮಾತನಾಡಿದ ಅವರು, ಕಲಬುರಗಿ ನಗರದಲ್ಲಿನ ಕೆರೆ ಒತ್ತುವರಿ ಸಂಬಂಧ ಲೋಕಾಯುಕ್ತದಲ್ಲಿ ದಾಖಲಾದ ಪ್ರಕರಣಕ್ಕೆೆ ಸಂಬಂಧಿಸಿದಂತೆ ಇಂದಿಲ್ಲಿ ವಿಚಾರಣೆ ನಡೆಸಿದ್ದು, ನಿಜಾಮ ಸರ್ಕಾರದಿಂದಲೆ ಜಮೀನು ಹಂಚಿಕೆಯಾಗಿದೆ ಎಂದು ಹೇಳಲಾಗುತ್ತಿಿದೆಯಾದರು ಅಧಿಕಾರಿಗಳ ಬಳಿ ಅಧಿಕೃತ ದಾಖಲೆ ಇಲ್ಲ. ಕಂದಾಯ ದಾಖಲೆಯಲ್ಲಿ ಅದು ಸರ್ಕಾರಿ ಜಮೀನಾಗಿದೆ. ಹೀಗಾಗಿ ಒತ್ತುವರಿ ತೆರವುಗೊಳಿಸುವಂತೆ ಜಿಲ್ಲಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಹಾಗೂ ತಹಶೀಲ್ದಾಾರರಿಗೆ ಸೂಚನೆ ನೀಡಲಾಗಿದೆ ಎಂದ ಅವರು, ಒತ್ತುವರಿಯಾದ ಜಾಗದಲ್ಲಿ ಪ್ರಸ್ತುತ ಇರುವ ಜನವಸತಿ ಬಗ್ಗೆೆಯೂ ಮಾಹಿತಿ ನೀಡುವಂತೆ ತಿಳಿಸಲಾಗಿದೆ ಎಂದರು.
ಕಲಬುರಗಿ ಜಿಲ್ಲೆಯಾದ್ಯಂತ ಲೋಕಾಯುಕ್ತ ಸಂಸ್ಥೆೆಯ 8 ತಂಡಗಳು ಜೇವರ್ಗಿ, ಆಳಂದ, ಕಲಬುರಗಿ ತಹಶೀಲ್ದಾಾರ ಮತ್ತು ಉಪ ನೋಂದಣಾಧಿಕಾರಿಗಳ ಕಚೇರಿ, ಬಿ.ಇ.ಓ ಕಚೇರಿ, ಅಗ್ನಿಿಶಾಮಕ ಠಾಣೆ, ತಾಲೂಕ ಪಂಚಾಯತ್ ಕಚೇರಿ, ಡಿ.ಸಿ. ಕಚೇರಿ, ಆರ್.ಟಿ.ಓ. ಚೆಕ್ ಪ್ಟ್ೋ ಹೀಗೆ ಇಬ್ಬರು ನ್ಯಾಾಯಾಂಗ ಅಧಿಕಾರಿಗಳು ಸೇರಿದಂತೆ ಲೋಕಾಯುಕ್ತ ಎಸ್.ಪಿ., ಡಿ.ವೈ.ಎಸ್.ಪಿ, ಪಿ.ಐ ಸೇರಿದಂತೆ ಸಿಬ್ಬಂದಿ ವರ್ಗ ತಪಾಸಣೆ ಮಾಡಿ ಅನೇಕ ನ್ಯೂನತೆಗಳು, ಅಕ್ರಮಗಳ ಕುರಿತು ಪತ್ತೆೆ ಹಚ್ಚಲಾಗಿದೆ. ಇನ್ನು ತಪಾಸಣೆ ವೇಳೆಯಲ್ಲಿ ಬೀದರ ಜಿಲ್ಲೆಯ ಹುಮನಾಬಾದ ಚೆಕ್ ಪ್ಟ್ೋನಲಿ ಏಜೆಂಟರ ಮೂಲಕ ಹಣ ವಸೂಲಿ ಮಾಡಲಾಗುತ್ತಿಿದೆ. ಆಳಂದ ಚೆಕ್ ಪ್ಟ್ೋನಲ್ಲಿ ಅಕ್ರಮವಾಗಿ ಚೆಕ್ ಪ್ಟ್ೋ ತೆರೆದು ಹಣ ವಸೂಲು ಮಾಡುತ್ತಿಿರುವುದು ಕಂಡುಬಂದಿದೆ. ಈಗಾಗಲೆ ಸಂಬಂಧಪಟ್ಟವರ ಮೇಲೆ ಎ್.ಐ.ಆರ್. ದಾಖಲಿಸಿದ್ದು, ಇದೀಗ ಅಕ್ರಮ ಚೆಕ್ ಪ್ಟ್ೋ ತೆರವುಗೊಳಿಸಿದೆ. ಇಂದಿಲ್ಲಿ ನಡೆದ ಸಭೆಯಲ್ಲಿ ತಪಾಸಣೆಯಲ್ಲಿ ಕಂಡುಬಂದ ನ್ಯೂನತೆಗಳನ್ನ್ಲು ಸರಿಪಡಿಸುವಂತೆ ಜಿಲ್ಲೆಯ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಕಳೆದ ಮೂರು ದಿನದಿಂದ ಬೀದರ, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಸುಮಾರು 80-85 ಅಧಿಕಾರಿ-ಸಿಬ್ಬಂದಿಗಳ ತಂಡ ತಪಾಸಣೆಯಲ್ಲಿ ನಿರತವಾಗಿದೆ ಎಂದರು.
ಆರ್.ಓ. ಪ್ಲ್ಯಾಾಂಟ್ ಸರಿಪಡಿಸಿ:
ಕಲಬುರಗಿ ಜಿಲ್ಲೆಯಾದ್ಯಂತ 2011-12ರಲ್ಲಿ ತಲಾ 10 ಲಕ್ಷ ರೂ. ವೆಚ್ಚದಲ್ಲಿ ಗ್ರಾಾಮೀಣದ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆಗೆ 510 ನೀರು ಶುದ್ಧಿಿಕರಣ ಘಟಕ ಸ್ಥಾಾಪಿಸಲಾಗಿದ್ರು, ಇದರಲ್ಲಿ ಪ್ರಸ್ತುತ ಬಳಕೆಯಲ್ಲಿ 132 ಮಾತ್ರ ಇವೆ. 336 ಕಾರ್ಯಚರಣೆ ಇಲ್ಲದೆ ಸ್ಥಗಿತಗೊಂಡಿವೆ. ಕಲುಷಿತ ನೀರು ಸೇವನೆಯಿಂದಾಗುವ ಅವಘಡ ತಪ್ಪಿಿಸಲೆಂದೆ ಸರ್ಕಾರ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಾಪಿಸಿದೆಯಾದರು, ಅಧಿಕಾರಿಗಳ ಬೇಜವಾಬ್ದಾಾರಿತನ, ನಿಷ್ಕಾಾಳಜಿಯಿಂದ ಸೂಕ್ತ ನಿರ್ವಹಣೆ ಇಲ್ಲದೆ ಸೊರಗಿವೆ. ಇದೆಲ್ಲವನ್ನು ಯುದ್ದೋಪಾದಿಯಲ್ಲಿ ಸರಿಪಡಿಸಿ ಶುದ್ಧ ಕುಡಿಯುವ ನೀರು ಪೂರೈಕೆಗೆ ಸದರಿ ಘಟಕವನ್ನು ಮರು ಚಾಲನೆ ಮಾಡುವಂತೆ ಸೂಚನೆ ನೀಡಲಾಗಿದೆ. ಈ ಬಗ್ಗೆೆ ಲೋಕಾಯುಕ್ತ ಸಂಸ್ಥೆೆ ಸ್ವಯಂ ದೂರು ದಾಖಲಿಸಿಕೊಂಡು ವಿಚಾರಣೆ ಸಹ ಮಾಡಲಿದೆ ಎಂದು ನ್ಯಾಾ.ಬಿ.ಎಸ್.ಪಾಟೀಲ ತಿಳಿಸಿದರು.
7 ಕೆರೆ ಜಾಗ ಒತ್ತುವರಿ ತೆರವುಗೊಳಿಸಿ, ಜಮೀನು ಜಪ್ತಿ ಮಾಡಿ – ನ್ಯಾ.ಬಿ.ಎಸ್.ಪಾಟೀಲ

