ಸುದ್ದಿಮೂಲ ವಾರ್ತೆ
ಮೈಸೂರು, ಜು.22:ಜಿಲ್ಲೆಯ ಟೀ. ನರಸೀಪುರ ತಾಲೂಕಿನ ಮುತ್ತತ್ತಿ ಗ್ರಾಮದ ಹಮೀದ್ ಉಲ್ಲಾ ಎಂಬುವರ ಜಮೀನಿನಲ್ಲಿ ಅರಣ್ಯ ಇಲಾಖೆಯು ಇಟ್ಟಿದ್ದ ಬೋನಿನಲ್ಲಿ 2 ವರ್ಷದ ಗಂಡು ಚಿರತೆಯೊಂದು ಸೆರೆ ಸಿಕ್ಕಿದೆ. ಇದೇ ಗ್ರಾಮದಲ್ಲಿ 7 ಚಿರತೆಗಳು ಸೆರೆ ಸಿಕ್ಕಿದ್ದು, ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕವನ್ನು ಹೆಚ್ಚಿಸಿದೆ.
ಸುತ್ತಮುತ್ತಲ ಗ್ರಾಮಗಳಲ್ಲಿ ಚಿರತೆಗಳು ಓಡಾಡುತ್ತಿರುವ ಮಾಹಿತಿ ಕಲೆ ಹಾಕಿದ ಅರಣ್ಯ ಇಲಾಖೆ ಉಲ್ಲಾ ಅವರ ಮೀನಿನಲ್ಲಿ ಬೋನು ಇರಿಸಿತ್ತು. ಬೆಳ್ಳಂಬೆಳಗ್ಗೆ ಬೋನಿಗೆ ಬಿದ್ದ ಚಿರತೆಯನ್ನು ಕಂಡ ಪ್ರತ್ಯಕ್ಷದರ್ಶಿಗಳು ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದರು.