ಸುದ್ದಿಮೂಲ ವಾರ್ತೆ ಬೆಂಗಳೂರು, ನ.13:
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತದಿಂದ ಶುಕ್ರವಾರ (ನ.14)ರಂದು ಅರಮನೆ ಮೈದಾನದಲ್ಲಿ 72ನೇ ಅಖಿಲ ಭಾರತ ಸಹಕಾರ ಸಪ್ತಾಾಹ ಹಮ್ಮಿಿಕೊಳ್ಳಲಾಗಿದ್ದು, ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಾಟಿಸಲಿದ್ದಾರೆ ಎಂದು ಮಹಾಮಂಡಳ ಅಧ್ಯಕ್ಷ ಜಿ.ಟಿ. ದೇವೇಗೌಡ ಹೇಳಿದರು.
ಮಹಾಮಂಡಳದ ಕಚೇರಿಯಲ್ಲಿ ಗುರುವಾರ ನಡೆಸಿದ ಪತ್ರಿಿಕಾಗೋಷ್ಠಿಿಯಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಸಹಕಾರ ಕ್ಷೇತ್ರದ ಅಭಿವೃದ್ಧಿಿಗೆ ಪಂಚವಾರ್ಷಿಕ ಯೋಜನೆಗಳ ಮೂಲಕ ವಿಶೇಷ ಪ್ರೋೋತ್ಸಾಾಹ ನೀಡಿದ್ದರು. ಅವರ ಪ್ರೋೋತ್ಸಾಾಹ ಮತ್ತು ನೆರವನ್ನು ಸ್ಮರಿಸಿಕೊಳ್ಳಲು ಅವರ ಹುಟ್ಟುಹಬ್ಬದ ದಿನದಂದೇ ಪ್ರತಿ ವರ್ಷ ನ.14ರಂದು ಸಹಕಾರ ಸಪ್ತಾಾಹ ಹಮ್ಮಿಿಕೊಳ್ಳಲಾಗುತ್ತಿಿದೆ ಎಂದು ಹೇಳಿದರು.
ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸಹಕಾರ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿ, ಮಹಾಮಂಡಳ ರಚನೆಗೆ ಕಾರಣೀಭೂತರಾದ ಮತ್ತು ಸಹಕಾರ ಕ್ಷೇತ್ರದ ತರಬೇತಿ ಮೂಲಕ ಈ ಕ್ಷೇತ್ರಕ್ಕೆೆ ಹೆಚ್ಚೆೆಚ್ಚು ಕೊಡುಗೆ ನೀಡಿದ ದಿ.ಬಿ.ಎಸ್. ವಿಶ್ವನಾಥ್ ಅವರ ಕಂಚಿನ ಪುತ್ಥಳಿಯನ್ನು ಮಹಾಮಂಡಳದ ಕಚೇರಿ ಮುಂದೆ ಸ್ಥಾಾಪಿಸಲಾಗಿದ್ದು, ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರೇ ಇದನ್ನು ಶುಕ್ರವಾರ ಅನಾವರಣಗೊಳಿಸಲಿದ್ದಾರೆ ಎಂದರು.
ರಾಜ್ಯದಲ್ಲಿ ಸಹಕಾರ ಸಚಿವರೂ ಆಗಿರುವ ಮುಖ್ಯಮಂತ್ರಿಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಾಟಿಸುತ್ತಾಾರೆ. ಉಪಮುಖ್ಯಮಂತ್ರಿಿ ಸೇರಿ ಹಲವು ಸಚಿವರು, ಸಹಕಾರ ಕ್ಷೇತ್ರದ ಧುರೀಣರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೇ ವೇಳೆ ಮುಖ್ಯಮಂತ್ರಿಿಗಳು ’72 ಮಂದಿಗೆ ಸಹಕಾರ ರತ್ನ’ ಪ್ರಶಸ್ತಿಿ ಪ್ರದಾನ ಮಾಡಲಿದ್ದಾರೆ ಎಂದು ಜಿ.ಟಿ. ದೇವೇಗೌಡ ಹೇಳಿದರು.
ಜಿಲ್ಲಾ ಸಹಕಾರ ಸಂಘಟನೆಗಳ ಮೂಲಕ ಏಳು ದಿನಗಳ ಕಾಲ ಬೆಂಗಳೂರು ಸೇರಿ ವಿವಿಧೆಡೆ ನಡೆಯುವ ಕಾರ್ಯಕ್ರಮಗಳಲ್ಲಿ ಸಹಕಾರ ಚಳವಳಿಯ ಸಾಧನೆ, ವೈಲ್ಯಗಳ ಕುರಿತು ಜನರಿಗೆ ಮನವರಿಕೆ ಮಾಡಲಾಗುವುದು. ಕ್ಷೇತ್ರದ ಬೆಳವಣಿಗೆಯ ಕುರಿತು ಜಾಗೃತಿ ಮೂಡಿಸಲಾಗುವುದು. ಯಶಸ್ವಿಿ ಸಹಕಾರ ಸಂಘಗಳ ಸಾಧನೆಗಳ ಕುರಿತು ವ್ಯಾಾಪಕ ಪ್ರಚಾರ ನೀಡಲಾಗುವುದು ಎಂದರು.
ನ.15ರಂದು ರಾಯಚೂರಿನಲ್ಲಿ, ನ.16ರಂದು ಮಂಗಳೂರಿನಲ್ಲಿ, ನ.17ರಂದು ಹೊಸಪೇಟೆಯಲ್ಲಿ, ನ.18ರಂದು ಹಾವೇರಿಯಲ್ಲಿ ನ.19ರಂದು ಕೊಪ್ಪಳದಲ್ಲಿ ಕಾರ್ಯಕ್ರಮಗಳು ನಡೆದು ಹಾಗೂ ಅಂತಿಮವಾಗಿ ನ.20ರಂದು ಚಾಮರಾಜನಗರದಲ್ಲಿ ಸಪ್ತಾಾಹ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ. ಚಾಮರಾಜನಗರದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಿಗಳೂ ಭಾಗಿಯಾಗಲಿದ್ದಾರೆ ಎಂದು ಹೇಳಿದರು.
ಸರ್ಕಾರಕ್ಕೆೆ ಮನವಿ:
ಸಹಕಾರ ಮಹಾಮಂಡಲದ ಡಿಪ್ಲೊೊಮಾ ಇನ್ ಕೋ-ಆಪರೇಟಿವ್ ಮ್ಯಾಾನೇಜ್ಮೆೆಂಟ್ ಸರ್ಟಿಫಿಕೇಟ್ ಕೋರ್ಸ್ ಮಾಡಿದವರಿಗೆ ಸಹಕಾರಿ ಕ್ಷೇತ್ರ ಮತ್ತು ಸಹಕಾರಿ ಬ್ಯಾಾಂಕ್ಗಳಲ್ಲಿ ಉದ್ಯೋೋಗಕ್ಕೆೆ ಪರಿಗಣಿಸಬೇಕು ಮತ್ತು ಶಾಲಾ-ಕಾಲೇಜು ಪಠ್ಯಪುಸ್ತಕಗಳಲ್ಲಿ ಸಹಕಾರಿ ಕ್ಷೇತ್ರದ ಬಗ್ಗೆೆ ಪಠ್ಯಗಳನ್ನು ರಚಿಸಿ ಮಕ್ಕಳಿಗೆ ಸಣ್ಣ ವಯಸ್ಸಿಿನಲ್ಲಿಯೇ ಸಹಕಾರ ಕ್ಷೇತ್ರದ ಬಗ್ಗೆೆ ಅರಿವು ಮೂಡಿಸಬೇಕು ಎಂದು ಮುಖ್ಯಮಂತ್ರಿಿಗಳಿಗೆ ಪ್ರಸ್ತಾಾವನೆ ಸಲ್ಲಿಸಲಾಗಿದೆ. ಕಾರ್ಯಕ್ರಮದಲ್ಲಿ ಈ ಬಗ್ಗೆೆ ಮುಖ್ಯಮಂತ್ರಿಿಗಳು ಸರ್ಕಾರದ ನಿರ್ಧಾರ ಪ್ರಕಟಿಸಬಹುದು ಎಂದು ಜಿಟಿಡಿ ಹೇಳಿದರು.
ರಾಷ್ಟ್ರದಲ್ಲಿ 8.5ಲಕ್ಷ ಸಹಕಾರಿ ಸಂಸ್ಥೆೆಗಳಿದ್ದು, 31 ಕೋಟಿ ಜನ ಸದಸ್ಯರು ಇದ್ದಾರೆ. ಕರ್ನಾಟಕದಲ್ಲಿ 47,000 ಸಹಕಾರ ಸಂಸ್ಥೆೆಗಳು ಕ್ರಿಿಯಾಶೀಲ ಸಂಸ್ಥೆೆಗಳು ತೊಡಗಿಸಿಕೊಂಡಿವೆ. 2 ಕೋಟಿ, 72 ಲಕ್ಷ ಜನ ಸದಸ್ಯರಿದ್ದಾರೆ. ಹೈನುಗಾರಿಕೆ, ಕೃಷಿ ಪತ್ತಿಿನ ಸಹಕಾರ ವ್ಯವಸ್ಥೆೆ, ಪಟ್ಟಣ ಸಹಕಾರಿ ಬ್ಯಾಾಂಕ್ಗಳು, ಕೃಷಿಯೇತರ ಪತ್ತಿಿನ ಸಹಕಾರ ಸಂಘಗಳು ಅತ್ಯುತ್ತಮ ಸೇವೆ ಸಲ್ಲಿಸುತ್ತಿಿವೆ. ಸಹಕಾರ ಸಪ್ತಾಾಹದ ಮೂಲಕ ಇಂತಹ ಸಹಕಾರಿ ಸಂಸ್ಥೆೆಗಳ ಬಗ್ಗೆೆ ಜನರಲ್ಲಿ ಜಾಗೃತಿ ಮತ್ತು ಈ ಕ್ಷೇತ್ರದ ಬೆಳವಣಿಗೆಗೆ ಅನುಕೂಲಕರ ವಾತಾವರಣ ಕಲ್ಪಿಿಸುವ ವ್ಯವಸ್ಥೆೆ ಮಾಡಲಾಗುವುದು ಎಂದು ಹೇಳಿದರು.
ಶಾಸಕ ಹಾಗೂ ಕರ್ನಾಟಕ ರಾಜ್ಯ ವಸತಿ ಮಹಾಮಂಡಳ ಅಧ್ಯಕ್ಷ ಎಸ್.ಟಿ. ಸೋಮಶೇಖರ್, ಶಾಸಕ ಹಾಗೂ ಕರ್ನಾಟಕ ರಾಜ್ಯ ಸಹಕಾರಿ ಕೃಷಿ ಮತ್ತು ಗ್ರಾಾಮೀಣ ಅಭಿವೃದ್ದಿ ಬ್ಯಾಾಂಕ್ ಅಧ್ಯಕ್ಷ ಕೆ. ಷಡಕ್ಷರಿ, ಮಹಾಮಂಡಳದ ವ್ಯವಸ್ಥಾಾಪಕ ನಿರ್ದೇಶಕ ಕೆ.ಎಸ್. ನವೀನ್ ಉಪಸ್ಥಿಿತರಿದ್ದರು.

