ಸುದ್ದಿಮೂಲ ವಾರ್ತೆ ಲಿಂಗಸುಗೂರು, ಡಿ.18:
ರಾಜಕಾರಣಿ ತನ್ನನ್ನು ತಾನು ರಾಜಕೀಯಕ್ಕೆೆ ಅರ್ಪಿಸಿ ಕೊಂಡು ಇತರರಿಗಿಂತ ಮಾದ ರಿಯಾದಾಗ ಜನರ ಪ್ರೀೀತಿ ವಿಶ್ವಾಾಸ ಗಳಿಸಲು ಸಾಧ್ಯ ವೆಂದು ಮಾಜಿ ಸಚಿವರು ಕೊಪ್ಪಳ ಜಿಲ್ಲಾಾ ಕಾಂಗ್ರೆೆಸ್ ಅಧ್ಯಕ್ಷರಾದ ಅಮರೇಗೌಡ ಪಾಟೀಲ್ ಬಯ್ಯಾಾಪುರ ಹೇಳಿದರು.
ಪಟ್ಟಣದ ನಿವಾಸದಲ್ಲಿ ಅಭಿಮಾನಿಗಳು ಏರ್ಪಡಿಸಿದ ಬಯ್ಯಾಾಪುರ ರವರ 72ನೇ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಾಧನೆಗಳ ಚಿತ್ರಗಳ ಮೂಲಕ ನಿರ್ಮಿಸಿದ ಕೇಕ್ ಕತ್ತರಿಸಿ ಮಾತನಾಡಿ ರಾಜಕಾರಣ ಬರಿ ದುಡ್ಡು ಮಾಡುವುದಕ್ಕೆೆ ಬಳಕೆಯಾಗದೆ ಜನರ ಸೇವೆಯ ಕಡೆಗೆ ಹೆಚ್ಚು ಒಲವು ಇರಬೇಕು ಆಯ್ಕೆೆಯಾದ ಕ್ಷೇತ್ರದಲ್ಲಿ ನಿರಂತರ ಪ್ರವಾಸ ಕೈಗೊಂಡು ಜನರ ಜತೆ ಸಂಪರ್ಕದಲ್ಲಿದ್ದು ಸಮಸ್ಯೆೆಗಳನ್ನು ಆಲಿಸಿ ಸರಕಾರದ ಗಮನಕ್ಕೆೆ ತಂದು ಕೆಲಸ ಮಾಡಬೇಕು ಸಮಸ್ಯೆೆಯನ್ನು ಹೇಳಿಕೊಂಡು ಯಾರೆ ಬರಲಿ ಅವರನ್ನು ಮಾತನಾಡಿಸಿ ಅವರ ಕೆಲಸಗಳನ್ನು ಮಾಡಿಕೊಡುವ ಹೃದಯವಂತಿಕೆಯಿಂದ ಮಾಡಬೇಕು ಅಂದಾಗ ರಾಜಕಾರಣದಲ್ಲಿ ಬೆಳೆಯಲು ಸಾಧ್ಯವಾಗುತ್ತದೆ.
ಲಿಂಗಸಗೂರಲ್ಲಿ ಕುಡಿವ ನೀರಿನ ಸಮಸ್ಯೆೆ ಸಾಕಷ್ಟಿಿತ್ತು ಆಗ ನನಗೆ ಹೊಳೆದದ್ದೆೆ ನದಿಯ ನೀರು ತರುವ ಯೋಚನೆ ಅದರಂತೆ ಕುಡಿವ ನೀರು ತರುವ ಕೆಲಸವಾಯಿತು ನೀರಾವರಿ ತರಲು ಯತ್ನಿಿಸಿದ್ದು ಹೀಗೆ ಸಾಕಷ್ಟು ಅಭಿವೃದ್ದಿ ಕಾರ್ಯಗಳು ನಡೆದವು. ಅದಕ್ಕಾಾಗಿ ರಾಜಕಾರಣಿಯಾದವನು ಪ್ರಾಾಮಾಣಿಕ ಸೇವೆ ಮಾಡುವ ಗುಣವಿರಬೇಕು, ಸಮಸ್ಯೆೆ ಅರಿವ ಮತ್ತು ಅದಕ್ಕೆೆ ಸ್ಪಂದಿಸುವ ಗುಣವಿರಬೇಕು ಅಂದಾಗ ಯಶಸ್ವಿಿಯಾಗಲು ಸಾಧ್ಯವಾಗುತ್ತದೆ ನಾನು ಕುಗ್ರಾಾಮದಿಂದ ಬೆಳೆದು ಬಂದು ಮಂಡಲಪಂಚಾಯ್ತಿಿ ಅಧ್ಯಕ್ಷನಾಗಿ ಶಾಸಕನಾಗಿ ಮಂತ್ರಿಿಯಾಗಿ ಸೇವೆ ಸಲ್ಲಿಸಲು ಅವಕಾಶವಾಗಿದ್ದು ನಿಮ್ಮೆೆಲ್ಲ ಪ್ರೀೀತಿ ವಿಶ್ವಾಾಸದಿಂದ ಸಾಧ್ಯವಾಗಿದೆ ನಿಮ್ಮ ಅಭಿಮಾನಕ್ಕೆೆ ಚಿರಋಣಿಯಾಗಿದ್ದೇನೆಂದರು.
ಮುಖಂಡರಾದ ಡಿ.ಜಿ ಗುರಿಕಾರ ಹಾಗೂ ಮಸ್ಕಿಿ ಡಾ, ಬಿ.ಎಚ್ದಿವಟರ್ ಬಯ್ಯಾಾಪುರ ಒಬ್ಬ ಸರಳ ಹಾಗೂ ಪ್ರಾಾಮಾಣಿಕ ರಾಜಕಾರಣಿಯಾಗಿದ್ದು ಜನರ ಸಮಸ್ಯೆೆ ಸಂಕಷ್ಟಗಳಿಗೆ ತುಡಿಯುವ ಗುಣವಿದ್ದು ಅವರು ಉತ್ತಮ ರಾಜಕಾರಣಿಯಾಗಿ ಬೆಳೆದಿದ್ದಾಾರೆಂದರು. ಹನಮಂತಪ್ಪ ಕಂದಗಲ್, ಭೂಪನಗೌಡ ಪಾಟೀಲ್ ಕರಡಕಲ್, ಸಿದ್ರಾಾಮಪ್ಪಸಾಹುಕಾರ, ಶಶಿಧರಪಾಟೀಲ್, ಡಾ,ನಾಗನಗೌಡಪಾಟೀಲ್, ಗುರುನಾಥರೆಡ್ಡಿಿದೇಸಾಯಿ, ಚನ್ನಾಾರಡ್ಡಿಿಬಿರಾದಾರ ಅಪಾರ ಅಭಿಮಾನಿ ಬಳಗ ಭಾಗವಹಿಸಿತ್ತು.
ಅಮರೇಗೌಡ ಪಾಟೀಲ್ ಬಯ್ಯಾಪುರರವರ 72ನೇ ಹುಟ್ಟುಹಬ್ಬ ರಾಜಕಾರಣಿ ಸಮಾಜಕ್ಕೆ ಮಾದರಿಯಾದಾಗ ಜನರ ವಿಶ್ವಾಸ ಪಡೆಯಲು ಸಾಧ್ಯ: ಬಯ್ಯಾಪುರ

