ಸುದ್ದಿಮೂಲ ವಾರ್ತೆ ರಾಯಚೂರು, ಡಿ.07:
ಯಚೂರು ನಗರದ ವಿವಿಧ ಶಾಲೆಗಳಲ್ಲಿ ಶಿಕ್ಷಕರ ಅರ್ಹತಾ ಪರೀಕ್ಷೆೆಗೆ 765 ಅಭ್ಯರ್ಥಿಗಳು ಗೈರಾಗಿದ್ದಾಾರೆ.
ನಗರ ಸೇರಿ ಸುತ್ತಮುತ್ತಲಿನ 47 ವಿವಿಧ ಶಾಲೆಗಳನ್ನು ಪರೀಕ್ಷೆೆ ಕೇಂದ್ರಗಳಲ್ಲಿ ಅರ್ಹ ಅಭ್ಯರ್ಥಿಗಳ ದಾಖಲೆ, ಮುಖ ಚರ್ಯೆಯ ಸ್ಕ್ಯಾಾನಿಂಗ್ ಮಾಡಿ ದೃಢೀಕರಿಸಿಕೊಂಡ ನಂತರ ಕೋಠಡಿಗೆ ಕಳುಹಿಸಲಾಯಿತು.
ಮಹಿಳಾ ಅಭ್ಯರ್ಥಿಗಳ ಕಿವಿಯ ಓಲೆ, ಬಳೆ , ಮೊಬೈಲ್ ಪೋನ್ ಪೇಜರ್, ಬ್ಲೂಟೂತ್, ವೈರಲೇಸ್ ಹಾಗೂ ಇತರ ಎಲೆಕ್ಟ್ರಾಾನಿಕ ವಸ್ತುಗಳ ತಪಾಸಣೆ ಮಾಡಿ, ಕೆಲ ವಸ್ತುಗಳನ್ನು ತೆಗೆಯಿಸಿ ಪರೀಕ್ಷೆೆ ಬರೆಯಿಸಲಾಯಿತು.
ಬೆಳಿಗ್ಗೆೆ ನಡೆದ ಮೊದಲ ಪರೀಕ್ಷೆೆಗೆ 3883 ಅಭ್ಯರ್ಥಿಗಳು ಹೆಸರು ನೋಂದಾ ಯಿಸಿಕೊಂಡಿದ್ದರು ಈ ಪೈಕಿ 3649 ಜನ ಹಾಜರಾಗಿ 234 ಜನ ಗೈರಾಗಿದ್ದರು.
ಮಧ್ಯಾಾಹ್ನ ನಡೆದ ಪರೀಕ್ಷೆೆಗೆ 11 ಸಾವಿರದ 5 ಜನ ನೋಂದಾಯಿಸಿಕೊಂಡಿದ್ದು ಈ ಪೈಕಿ 531 ಜನ ಗೈರಾಗಿದ್ದರು.
ಪರೀಕ್ಷೆಯ ನಕಲು ತಡೆಯಲು 200 ಮೀಟರ್ ಸುತ್ತಮುತ್ತಲಿನ ಸ್ಥಳವನ್ನು ನಿಷೇಧಿತ ಪ್ರದೇಶವೆಂದು ಹಾಗೂ ಈ ಪ್ರದೇಶದ ವ್ಯಾಾಪ್ತಿಿಯಲ್ಲಿ ಬರುವ ಎಲ್ಲ ಜೇರಾಕ್ಸ ಅಂಗಡಿಗಳು ಮತ್ತು ಪುಸ್ತಕ ಅಂಗಡಿಗಳನ್ನು ಮುಚ್ಚಲಾಗಿತ್ತುಘಿ.
ಮಕ್ಕಳೊಂದಿಗೆ ಟಿಇಟಿ ಪರೀಕ್ಷೆೆಗೆ ಆಗಮಿಸಿದ್ದ ಅಭ್ಯರ್ಥಿಗಳ ತಾಯಂದಿರುವ ಪರೀಕ್ಷೆೆ ಮುಗಿಯುವವರೆಗೂ ಪರೀಕ್ಷಾಾ ಪ್ರಾಾಂಗಣದಲ್ಲಿ ಆರೈಕೆ ಮಾಡುತ್ತಿಿರುವುದು ಕಂಡು ಬಂದಿತು.
ಪರೀಕ್ಷೆೆಯ ನಕಲು ತಡೆಗೆ ತಪಾಸಣಾ ತಂಡಗಳ ರಚಿಸಲಾಗಿತ್ತು ಎಲ್ಲ ಕಡೆಗೂ ಶಾಂತಿಯುತವಾಗಿ ಪರೀಕ್ಷೆೆ ನಡೆಸಲಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾಾರೆ.
ರಾಯಚೂರು : ಟಿಇಟಿ ಪರೀಕ್ಷೆಗೆ 765 ಅಭ್ಯರ್ಥಿಗಳು ಗೈರು

