ಸುದ್ದಿಮೂಲ ವಾರ್ತೆ ಬಳ್ಳಾರಿ, ಜ.26:
ಬಳ್ಳಾಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯಲ್ಲಿ 77ನೇ ಗಣರಾಜ್ಯೋೋತ್ಸವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾಾರ್ಚನೆ ಮಾಡಿ, ಧ್ವಜಾರೋಹಣವನ್ನು ನೆರವೇರಿಸುವ ಮೂಲಕ ಆಚರಿಸಲಾಯಿತು.
ಬಳ್ಳಾಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆೆಯ ಅಧ್ಯಕ್ಷ ಅವ್ವಾಾರು ಮಂಜುನಾಥ್ ಅವರು, ದೇಶದಲ್ಲಿ ಸಂವಿಧಾನ ಜಾರಿಯಾದ ದಿನ ಇದಾಗಿದ್ದು, ಬಲಿಷ್ಠ ಮತ್ತು ಸದೃಢ ಪ್ರಜಾಪ್ರಭುತ್ವ ವ್ಯವಸ್ಥೆೆ ನಮ್ಮ ಭಾರತ ದೇಶದ್ದಾಗಿದೆ ಎಂದರು.
ಭಾರತ ಸಂವಿಧಾನವು 1949ರ ನವೆಂರ್ಬ 26 ರಂದು ಅಂಗೀಕಾರವಾಗಿ, 1950 ರ ಜನವರಿ 26 ರಂದು ಜಾರಿಗೆ ಬಂದಿದೆ. ಕಾರಣ ಪ್ರತಿ ವರ್ಷ ಜನವರಿ 26 ರಂದು ಗಣರಾಜ್ಯೋೋತ್ಸವ ಆಚರಿಸಲಾಗುತ್ತಿಿದೆ ಎಂದರು.
ಗೌರವ ಕಾರ್ಯದರ್ಶಿ ಕೆ.ಸಿ. ಸುರೇಶಬಾಬು ಅವರು, ಗಣರಾಜ್ಯೋೋತ್ಸವವು ಭಾರತೀಯ ಹೆಮ್ಮೆೆಯ ರಾಷ್ಟ್ರೀಯ ಹಬ್ಬ. ಪ್ರತಿಯೊಬ್ಬ ಭಾರತೀಯರು ಈ ಹಬ್ಬದ ಆಚರಣೆಯಲ್ಲಿ ಸ್ವಯಂ ಪಾಲ್ಗೊೊಂಡು ರಾಷ್ಟ್ರೀಯತೆಯನ್ನು ತೋರಿಸಬೇಕು ಎಂದರು.
ಹಿರಿಯ ಉಪಾಧ್ಯಕ್ಷ ಶ್ರೀ ಎಸ್. ದೊಡ್ಡನಗೌಡ, ಉಪಾಧ್ಯಕ್ಷ ಗಿರಿಧರ ಸೊಂತ, ಜಂಟಿ ಕಾರ್ಯದರ್ಶಿಗಳಾದ ಡಾ. ಮರ್ಚೇಡ್ ಮಲ್ಲಿಕಾರ್ಜುನಗೌಡ, ಖಚಾಂಚಿ ನಾಗಳ್ಳಿಿ ರಮೇಶ, ಮಾಜಿ ಅಧ್ಯಕ್ಷರಗಳಾದ, ಬಿ.ಮಹಾರುದ್ರಗೌಡ, ಡಾ.ರಮೇಶಗೋಪಾಲ, ಉಪ ಕಮಿಟಿಗಳ ಚೇರ್ಮನ್ಗಳು, ಕಾರ್ಯಕಾರಿ ಸಮಿತಿ ಸದಸ್ಯರು, ವಿಶೇಷ ಆಹ್ವಾಾನಿತರು ಮತ್ತು ವಿಶೇಷ ಸಮನ್ವಯ ಸಮಿತಿ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿಿತರಿದ್ದರು.
ಬಳ್ಳಾರಿ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವ

