ಸುದ್ದಿಮೂಲ ವಾರ್ತೆ ಲಿಂಗಸುಗೂರು, ಜ.14:
ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರಕಾರ ರೈತರ ಪರವಾಗಿದ್ದು ಪ್ರತಿ ಕ್ವಿಿಂಟಲ್ ತೊಗರಿ ಖರೀದಿಗೆ 8 ಸಾವಿರದಂತೆ ಖರೀದಿಸಲು ಮುಂದಾಗಿದೆ. ಕಳೆದ ಬಾರಿ 450ರೂ ರಾಜ್ಯ ಸರಕಾರ ಪ್ರೋೋತ್ಸಾಾಹಧನ ಘೋಷಿಸಿತ್ತು ಅದನ್ನು 500ರೂಗೆ ಏರಿಕೆ ಮಾಡುವಂತೆ ರಾಜ್ಯ ಸರಕಾರಕ್ಕೆೆ ಒತ್ತಾಾಯಿ ಸುವುದಾಗಿ ಶಾಸಕ ಮಾನಪ್ಪ ವಜ್ಜಲ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದ ಗೋಡಾನ್ನಲ್ಲಿ ಖರೀದಿ ಕೇಂದ್ರ ಆರಂಭಕ್ಕೆೆ ಪೂಜೆ ಸಲ್ಲಿಸಿ ರೈತರಿಂದ ತೊಗರಿ ಖರೀದಿಗೆ ಮಂಗಳವಾರ ಚಾಲನೆ ನೀಡಿದ ಅವರು ಕೇಂದ್ರ ಸರಕಾರದ ಕೃಷಿ ಮತ್ತು ಆರೋಗ್ಯ ಇಲಾಖೆ ರಾಜ್ಯದ ತೊಗರಿ ಬೆಳೆದ ಪ್ರದೇಶಗಳಲ್ಲಿ ತೊಗರಿ ಸೇರಿ ಆಯಾ ಭಾಗದ ಬೆಳೆಗಳಿಗೆ ಸೂಕ್ತ ಉತ್ತಮ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿ ಕೇಂದ್ರಗಳ ಮೂಲಕ ಖರೀದಿಸಿ ರೈತರ ಬೆಳೆದ ಬೆಳೆಗೆ ಸೂಕ್ತ ಮಾರುಕಟ್ಟೆೆ ದರ ನಿಗದಿ ಮಾಡಿದೆ. ರಾಜ್ಯ ಸರಕಾರ ಕೂಡಾ ಸೂಕ್ತ ಪ್ರೋೋತ್ಸಾಾಹ ಧನ ನೀಡಿದರೆ ರೈತರಿಗೆ ಅನೂಕೂಲವಾಗಲಿದೆ. ಖರೀದಿಸಿದ 15 ದಿನದೊಳಗೆ ರೈತರ ಖಾತೆಗೆ ಹಣ ಜಮೆ ಮಾಡಲು ಸೂಚಿಸಲಾಗಿದೆ ಎಂದರು.
ಈ ವೇಳೆ ಎಪಿಎಂಸಿ ಅಧ್ಯಕ್ಷ ಅಮರೇಶ ಚಿಕ್ಕಹೆಸರೂರು, ಕಾರ್ಯದರ್ಶಿ ನೀಲಪ್ಪಶೆಟ್ಟಿಿ, ನೊಡ್ ಹಿರಿಯ ಕಾರ್ಯನಿವಾಹಕ ಹರೀಶ, ಜಿಲ್ಲಾಾ ಬಿಜೆಪಿ ಅಧ್ಯಕ್ಷ ವೀರನಗೌಡ ಲೆಕ್ಕಿಿಹಾಳ, ಗಿರಿಮಲ್ಲನಗೌಡ ಕರಡಕಲ್, ಅಯ್ಯಪ್ಪ ಮಾಳೂರ, ಮಹಾದೇವಯ್ಯ ಸ್ವಾಾಮಿ, ಹುಲ್ಲೇಶ ಸಾಹುಕಾರ, ಮುದಕಪ್ಪ ನಾಯಕ ಸೇರಿದಂತೆ ಗಣ್ಯರು ಇಲಾಖಾ ಅಧಿಕಾರಿಗಳು ರೈತರಿದ್ದರು.
ಪ್ರತಿ ಕ್ವಿಿಂಟಾಲ್ ತೊಗರಿಗೆ 8 ಸಾವಿರ ಕೇಂದ್ರ ಸರಕಾರದಿಂದ ನಿಗದಿ ರಾಜ್ಯ ಸರಕಾರ ರೂ.500 ಏರಿಕೆ ಮಾಡಿ ನೀಡಲು ಆಗ್ರಹ

