ವೆಂಕಟೇಶ ಹೂಗಾರ ರಾಯಚೂರು , ನ.27:
ಆಂಧ್ರಪ್ರದೇಶದ ಶ್ರೀಶೈಲದ ಕರ್ನಾಟಕ ಭವನ ಭೂ ವಿವಾದದ ಇತರೆ ವಿಷಯಗಳ ಕುರಿತು ಚರ್ಚಿಸಲು ಆಂಧ್ರದ ರಾಜ್ಯಪಾಲರ ಅಧ್ಯಕ್ಷತೆಯಲ್ಲಿ ಕರ್ನಾಟಕ ಹಾಗೂ ಆಂಧ್ರ ಸರ್ಕಾರಗಳ ಸಂಬಂಧಿಸಿದ ಸಚಿವರ ಹಾಗೂ ಅಧಿಕಾರಿಗಳ ಜೊತೆ ಇಂದು ಸಭೆಯೊಂದು ನಿಗದಿಯಾಗಿದೆ.
ಸುಕ್ಷೇತ್ರ ಶ್ರೀಶೈಲದಲ್ಲಿರುವ ಕರ್ನಾಟಕ (ಛತ್ರ) ಭವನದ ಸ್ಥಳಕ್ಕೆೆ ಸಂಬಂಧಿಸಿದ ವಿವಾದ ಕಳೆದ ನಾಲ್ಕುವರೇ ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದು ಅದಕ್ಕೆೆ ಈಗ ಕಾಲ ಕೂಡಿ ಬಂದಿದೆ.
ಅದರಂತೆ ಇಂದು ಆಂಧ್ರದ ರಾಜದಾನಿ ಅಮರಾವತಿಯಲ್ಲಿ ರಾಜ್ಯದ ರಾಜ್ಯಪಾಲ ಎಸ್.ಅಬ್ದುಲ್ ನಜೀರ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕದ ಧಾರ್ಮಿಕ ದತ್ತಿಿ ಇಲಾಖೆ ಸಚಿವ ಎಚ್.ಕೆ.ಪಾಟೀಲ, ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ್, ಇಲಾಖೆಯ ಆಯುಕ್ತ ಬಿ.ಶರತ್, ರಾಯಚೂರು ಜಿಲ್ಲಾಾಧಿಕಾರಿ ನಿತೀಶ ಹಾಗೂ ಆಂಧ್ರ ಪ್ರದೇಶದ ಧಾರ್ಮಿಕ ದತ್ತಿಿ ಇಲಾಖೆ ಸಚಿವ ಆನಂ ರಾಮಪ್ರಸಾದ್ ರೆಡ್ಡಿಿ ,ಆಯುಕ್ತ ರಾಮಚಂದ್ರ ಮೋಹನ್, ಶ್ರೀಶೈಲ ಮಲ್ಲಿಕಾರ್ಜುನ ಭ್ರಮರಾಂಭ ದೇವಸ್ಥಾಾನದ ಸಿಇಓ ಸೇರಿ ಇತರ ಅಧಿಕಾರಿಗಳು ಚರ್ಚೆ ನಡೆಸಲಿದ್ದಾಾರೆ ಎಂದು ಗೊತ್ತಾಾಗಿದೆ.
ಆಂದ್ರಪ್ರದೇಶದ ಧಾರ್ಮಿಕ ಹಾಗೂ ಮುಜರಾಯಿ ಇಲಾಖೆ ವ್ಯಾಾಪ್ತಿಿಯಲ್ಲಿನ ಶ್ರೀಶೈಲ ಮಲ್ಲಿಕಾರ್ಜುನ ಭ್ರಮರಾಂಭ ಸ್ವಾಾಮಿವಾರು ದೇವಸ್ಥಾಾನಂ ಸಮಿತಿಯ ಜೊತೆ 2022ರಲ್ಲಿ ಅಂದಿನ ಕರ್ನಾಟಕದ ಮುಜರಾಯಿ ಸಚಿವರ, ಉನ್ನತಾಧಿಕಾರಿಗಳು ಈಗಿರುವ ಕರ್ನಾಟಕ ಭವನದ ನೆಲದ ಬಾಡಿಗೆಯ ರೂಪದಲ್ಲಿ ಮುಂದಿನ 11 ವರ್ಷಗಳಿಗೆ ಒಪ್ಪಂದವೊಂದು ಮಾಡಿಕೊಳ್ಳಲಾಗಿತ್ತು. ಹೀಗಾಗಿ, ಅಂದಿನ ಬಿಜೆಪಿ ಹಾಗೂ ನಂತರ ಅಧಿಕಾರಕ್ಕೆೆ ಬಂದ ಕಾಂಗ್ರೆೆಸ್ ಸರ್ಕಾರದ ಧಾರ್ಮಿಕ ದತ್ತಿಿ ಇಲಾಖೆಯ ತಿರುಪತಿ, ಮಂತ್ರಾಾಲಯ ಹಾಗೂ ಶ್ರೀಶೈಲದಲ್ಲಿರುವ ಕರ್ನಾಟಕ ಭವನಗಳ ನಿರ್ಮಾಣ, ಆಧುನಿಕರಣ, ಅಭಿವೃದ್ದಿ ಕಾಮಗಾರಿಗಳಿಗೆ ಪ್ರತ್ಯೇಕ ಅನುದಾನ ಮಂಜೂರು ಮಾಡಲಾಗಿತ್ತು.
ಅದರಂತೆ ತಿರುಪತಿ ಮತ್ತು ಮಂತ್ರಾಾಲಯದ ಕರ್ನಾಟಕ ಭವನಗಳಲ್ಲಿ ಹೊಸ ಕಟ್ಟಡ ನಿರ್ಮಾಣ, ಇರುವ ಕೋಠಡಿಗಳ ಆಧುನಿಕರಣ, ಹವಾನಿಯಂತ್ರಿಿತ ವ್ಯವಸ್ಥೆೆಯ ಕಾಮಗಾರಿ ಪೂರ್ಣಗೊಂಡು ಈಗಾಗಲೇ ಜನ ವಸತಿಗೆ ಅವಕಾಶ ಕಲ್ಪಿಿಸಲಾಗಿದೆ.
ಆದರೆ, ಶ್ರೀಶೈಲದಲ್ಲಿರುವ ಕರ್ನಾಟಕ ಭವನದ ಹೊಸ ಕಟ್ಟಡ ನಿರ್ಮಾಣಕ್ಕೆೆ ಮಂಜೂರಾದ ಸುಮಾರು 85 ಕೋಟಿ ರೂ.ಅನುದಾನ ಕಳೆದ ನಾಲ್ಕುವರೇ ವರ್ಷಗಳಿಂದಲೂ ಬಳಸದೆ ಖಾತೆಯಲ್ಲಿ ಉಳಿಯುವಂತಾಗಿದೆ.
ಈಗಿರುವ ಶ್ರೀಶೈಲದಲ್ಲಿನ ಕರ್ನಾಟಕ ಭವನದ ಸುತ್ತಲೂ ಉಳಿದ ಖಾಲಿ ಜಾಗದಲ್ಲಿ ಹೊಸದಾಗಿ ಭವನ ನಿರ್ಮಾಣಕ್ಕೆೆ ಅಲ್ಲಿನ ಸರ್ಕಾರ ಮತ್ತು ಶ್ರೀಶೈಲ ದೇವಸ್ಥಾಾನದ ಸಮಿತಿ ಆಕ್ಷೇಪಿಸಿತ್ತು.ಅಲ್ಲದೆ, ಇದರ ಬದಲಿಗೆ ಶ್ರೀಶೈಲದ ಹೊರವಲಯದಲ್ಲಿ ಜಾಗ ನೀಡಲಾಗುವುದು ಈ ಸ್ಥಳ ದೇವಸ್ಥಾಾನಕ್ಕೆೆ ಬಿಟ್ಟುಕೊಡಬೇಕು ಹೀಗಾಗಿ, ಯಾವುದೆ ಕಾರಣಕ್ಕೆೆ ಕಾಮಗಾರಿ ಆರಂಭಿಸಬಾರದು ಎಂದು ತಕರಾರು ತೆಗೆದ ಕಾರಣ ವಿವಾದ ಹುಟ್ಟು ಹಾಕಿತ್ತು.
ಇದರಿಂದಾಗಿ ನೆನೆಗುದಿಗೆ ಬಿದ್ದಿದ್ದ ಈ ಭೂ ವಿವಾದಕ್ಕೆೆ ಪರಿಹಾರ ಕಂಡುಕೊಳ್ಳಲು ರಾಯಚೂರಿನ ಸಚಿವರಾದ ಎನ್.ಎಸ್.ಬೋಸರಾಜ್ ಅವರ ಆಸಕ್ತಿಿಯಿಂದಾಗಿ ಆಂಧ್ರದ ರಾಜ್ಯಪಾಲರ ಸಂಬಂಧಿಸಿದ ಸಚಿವರ ಜೊತೆ ಸಮನ್ವಯತೆ ಸಾಧಿಸಿದ್ದರಿಂದ ಇದೀಗ ರಾಜ್ಯದ ಧಾರ್ಮಿಕ ದತ್ತಿಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಿ ಮತ್ತು ಅಧಿಕಾರಿಗಳು ಭವನದ ಜಾಗೆ, ಒಪ್ಪಂದ, ಅಭಿವೃದ್ದಿಗೆ ಅವಕಾಶ ನೀಡುವ ಬಗ್ಗೆೆ ರಾಜಭವನದಲ್ಲಿ ಮಹತ್ವದ ಸಭೆ ನಿಗದಿಯಾಗಿದೆ ಎಂದು ಹೇಳಲಾಗಿದೆ.
ಶ್ರೀಶೈಲದ ಕರ್ನಾಟಕ (ಛತ್ರ)ಭವನ ಜಾಗ ವಿವಾದ ಖಾತೆಯಲ್ಲಿಯೆ ಅಭಿವೃದ್ದಿಗೆ ನೀಡಿದ 85 ಕೋಟಿ ಉಭಯ ರಾಜ್ಯದ ಸಚಿವರ ಮಹತ್ವದ ಸಭೆ, ಸಿಗುವುದೆ ಪರಿಹಾರ

