851ನೇ ಶಿವಯೋಗಿ ಶ್ರೀ ಸಿದ್ದರಾಮೇಶ್ವರ ಜಯಂತೋತ್ಸವ ಜನಜಾಗೃತಿ ಸಮಾವೇಶ ನಾಳೆ: ರವಿಚಂದ್ರ ಗುತ್ತೇದಾರ
ಜೇವರ್ಗಿ : ಪಟ್ಟಣದ ಹಳೆ ತಹಸಿಲ್ದಾರ್ ಕಚೇರಿ ಆವರಣದಲ್ಲಿ ಮಾರ್ಚ್ 14ರಂದು ತಾಲೂಕ ಭೂವಿ ಸಮಾಜದ ವತಿಯಿಂದ ಶಿವಯೋಗಿ ಶ್ರೀ ಸಿದ್ದರಾಮೇಶ್ವರರ 851ನೆಯ ಜಯಂತೋತ್ಸವ ಹಾಗೂ ಜನ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ರವಿಚಂದ್ರ ಗುತ್ತೇದಾರ್ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಚಿತ್ರದುರ್ಗ ಭೋವಿ ಗುರುಪೀಠ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಡಾಕ್ಟರ್ ಶಿವಾನಂದ ಮಹಾಸ್ವಾಮಿಗಳು ವಿರಕ್ತಮಠ ಸೋನ್ನ ಡಾ. ಸಿದ್ದರಾಮೇಶ್ವರ ಶಿವಾಚಾರ್ಯರು ಶಖಾಪುರ, ಸಿದ್ದಲಿಂಗ ಶ್ರೀಗಳು ಆಂದೋಲ, ಸಿದ್ದಲಿಂಗ ಶ್ರೀಗಳು ವಿರಕ್ತಮಠ ಯಡ್ರಾಮಿ, ಗುರುಲಿಂಗ ಸ್ವಾಮೀಜಿ ಹರಕೆರ, ಸಿದ್ದ ಬಸವ ಕಬೀರ ಸ್ವಾಮೀಜಿ, ಸಿದ್ದಲಿಂಗ ಸ್ವಾಮೀಜಿ ನೇಲೋಗಿ, ಸಾನಿಧ್ಯ ವಹಿಸಲಿದ್ದಾರೆ.
ಡಾ. ಅಜಯ್ ಸಿಂಗ್ ಶಾಸಕರು ಮತ್ತು ವಿಧಾನಸಭೆ ಪ್ರತಿಪಕ್ಷದ ಮುಖ್ಯ ಪ್ರಚೇತಕರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಾಜಿ ಶಾಸಕ ಮಾನಪ್ಪ ವಜ್ಜಲ್ ಅಧ್ಯಕ್ಷತೆ ವಹಿಸುವರು. ಮಾಜಿ ಸಚಿವ ವೆಂಕಟರಮಣಪ್ಪ, ಶಾಸಕ ರಮೇಶ್ ಬೂಸನೂರ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ, ಧರ್ಮಣ್ಣ ದೊಡ್ಮನಿ, ಕೇದಾರಲಿಂಗಯ್ಯ ಹಿರೇಮಠ್, ಶಿವರಾಜ್ ಪಾಟೀಲ್ ರದ್ದೇವಾಡಗಿ, ಜ್ಯೋತಿ ಬೆಳಗಿಸುವರು. ಪ್ರಮುಖರಾದ ಮಂಜುನಾಥ್ ಗೌಡ ಯಲಗೋಡ, ಅಶೋಕ ಸಾಹು ಗೋಗಿ, ರಾಜಶೇಖರ್ ಸೀರಿ, ಶಾಂತಪ್ಪ ಕೂಡಲಗಿ, ಸೋಮಯ್ಯ ನೀದಲಗಿ, ಗಂಗಯ್ಯ ಗುತ್ತೇದಾರ್, ಶರಣು ಗುತ್ತೇದಾರ್ ಧ್ವಜಾರೋಹಣ ನೆರವೇರಿಸುವರು.
ಈ ಕಾರ್ಯಕ್ರಮದಲ್ಲಿ ತಾಲೂಕಿನ ಭೋವಿ ಸಮಾಜದ ಯುವಕರು ಹಿರಿಯರು ಹಾಗೂ ಮಹಿಳೆಯರು ಭಾಗವಹಿಸಲಿದ್ದಾರೆ ಎಂದು ಜಯಂತೋತ್ಸವ ಸಮಿತಿ ಅಧ್ಯಕ್ಷರಾದ ರವಿಚಂದ್ರ ಗುತ್ತೇದಾರ್ ಹೇಳಿದರು.