ಸುದ್ದಿಮೂಲ ವಾರ್ತೆ ಅರಕೇರಾ, ಜ.24:
ತಾಲ್ಲೂಕಿನ ಗೆಜ್ಜೆೆಭಾವಿ ಶ್ರೀಮಠದ ಚನ್ನಬಸವ ಶಿವಾಚಾರ್ಯ ಮಹಾಸ್ವಾಾಮಿಗಳ ಜಾತ್ರಾಾ ಮಹೋತ್ಸವದ ಅಂಗವಾಗಿ ಶನಿವಾರ ಆಯೋಜಿಸಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ 9 ಜೋಡಿಗಳು ದಾಂಪತ್ಯ ಜೀವನಕ್ಕೆೆ ಕಾಲಿಟ್ಟರು.
ಬಳಿಕ ಮಠದ ಪೀಠಾಧಿಪತಿ ಅಭಿನವ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಾಮಿಗಳು ಮಾತನಾಡಿ, ಮಠ- ಮಾನ್ಯಗಳಲ್ಲಿ ನಡೆಯುವ ಸರಳ ಸಾಮೂಹಿಕ ವಿವಾಹಗಳಲ್ಲಿ ದಾಂಪತ್ಯ ಜೀವನಕ್ಕೆೆ ಕಾಲಿಟ್ಟು ದುಂದುವೆಚ್ಚಕ್ಕೆೆ ಕಡಿವಾಣ ಹಾಕಬೇಕು ಇದು ನೆಮ್ಮದಿ ಜೀವನಕ್ಕೆೆ ನಾಂದಿ ಎಂದರು.
ಬದುಕಿನಲ್ಲಿ ಮದುವೆ ಎನ್ನುವ ಬಂಧನ ಹೊಸ ಅಧ್ಯಾಾಯವಿದ್ದಂತೆ,ಜೀವನದ ಎಲ್ಲ ಹಂತದಲ್ಲೂ ಸತಿ ಪತಿಗಳು ಪರಸ್ಪರ ನಂಬಿಕೆ ಮತ್ತು ಗೌರವಿಸುವ ಮನೋಭಾವ ಹೊಂದಿರಬೇಕು.ಜೀವನದಲ್ಲಿ ಬಾಂಧವ್ಯ ಬೆಸೆಯುವ ಬಂಧವೇ ದಾಂಪತ್ಯ. ಸಣ್ಣಪುಟ್ಟ ಸಮಸ್ಯೆೆಗಳನ್ನು ದೊಡ್ಡದೆಂದು ಬಿಂಬಿಸುವ ಮಟ್ಟಕ್ಕೆೆ ಇಂದಿನ ಸಂಬಂಧಗಳು ಬದಲಾಗಿವೆ. ಕುಟುಂಬದಲ್ಲಿನ ನೀತಿ ನಿಯಮಗಳು ಹೆಣ್ಣಿಿಗೆ ಮಾತ್ರ ಸೀಮಿತವಲ್ಲ. ಗಂಡು ಸಹ ಆ ನೀತಿ ನಿಯಮಗಳಿಗೆ ಬದ್ಧವಾದಾಗ ಸಂಸಾರ ಸುಖಮಯವಾಗುತ್ತದೆ. ಆದ್ದರಿಂದ ದಂಪತಿಗಳು ಪ್ರೀೀತಿ, ಬಾಂಧವ್ಯ ಮತ್ತು ಅನ್ಯೋೋನ್ಯತೆ ಬೆಳೆಸಿಕೊಳ್ಳಿಿ ಎಂದು ನವ ಜೋಡಿಗಳಿಗೆ ಕಿವಿ ಮಾತು ಹೇಳಿದರು.
ವಧು-ವರರಿಗೆ ಮಾಂಗಲ್ಯ, ಕಾಲುಂಗುರ, ಸಮವಸಗಳನ್ನು ಜೇರಬಂಡಿ ಗ್ರಾಾಮಸ್ಥರು ಕೊಡುಗೆಯಾಗಿ ನೀಡಿದರು.
ಶರಣಗೌಡ ಮಾಲಿ ಮಾಟೀಲ್ ಬಿ.ಗಣೇಕಲ್, ಬಸವರಾಜ ಪೂಜಾರಿ, ತಿಮ್ಮರೆಡ್ಡಿಿ ಚಿಂತಲಕುಂಟ, ಪ್ರಕಾಶ ಪಾಟೀಲ್ ಜೇರಬಂಡಿ, ರಾಜುಗೌಡ ಗೆಜ್ಜೆೆಭಾವಿ,ತೇಜರಾಜ ನಾಯಕ, ಮಾಳಿಂಗರಾಯ, ಮಲ್ಲನಗೌಡ ವಕೀಲರು, ವೆಂಕಟಾಚಲ, ಬಾಪುಗೌಡ, ರಾಮನಗೌಡ ಸೇರಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಾಣ ಇಲಾಖೆ ಅಧಿಕಾರಿಗಳು, ಸುತ್ತಲಿನ ಗ್ರಾಾಮಸ್ಥರು ಮಠದ ಭಕ್ತರು ಭಾಗವಹಿಸಿದ್ದರು. ಗಬ್ಬೂರು ಪೊಲೀಸ್ ಠಾಣೆ ಸಿಬ್ಬಂದಿ ಭದ್ರತೆ ಒದಗಿಸಿದ್ದರು.
ಉಚಿತ ಸಾಮೂಹಿಕ ವಿವಾಹದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ 9 ಜೋಡಿಗಳು ಸಾಮೂಹಿಕ ವಿವಾಹ ನೆಮ್ಮದಿ ಜೀವನಕ್ಕೆ ನಾಂದಿ ಅಭಿನವ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳ ನುಡಿ

