ಸುದ್ದಿಮೂಲ ವಾರ್ತೆ
ಬೆಂಗಳೂರು, ಅ.24: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ನಂದಿನಿ ಲೇಔಟ್ ವಾರ್ಡ್ನಲ್ಲಿ ಕಳೆದ 9 ದಿನಗಳಿಂದ ವಿಜೃಂಭಣೆಯಿಂದ ನಡೆದ ನವರಾತ್ರಿ ನಂದಿನಿ ಉತ್ಸವ ಮಂಗಳವಾರ ಸಂಪನ್ನವಾಯಿತು.
ಕೊನೆಯ ದಿನವಾದ ಇಂದು ತಾಯಿ ದುರ್ಗಾ ಪರಮೇಶ್ವರಿಯನ್ನು ಹಾಗೂ ಸ್ವಾಮಿ ವಿವೇಕಾನಂದ ಮೂರ್ತಿಯನ್ನು ತೆರೆದ ಸಾರೋಟು ನಲ್ಲಿ ಕುಳ್ಳಿರಿಸಿ ಪೂಜಾ ಕೈಂಕರ್ಯಗಳನ್ನು ಮಾಡಿ ತಮಟೆ ನಗಾರಿ ಡೊಳ್ಳು ಡಿಜೆ ಹಾಗೂ ಹಲವು ತಾಳ ವಾದ್ಯಗಳೊಂದಿಗೆ ಮೂಲಕ ನಂದಿನಿ ಲೇಔಟ್ ವಾರ್ಡ್ ನಲ್ಲಿರುವ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ಮೂಲಕ ವಿಸರ್ಜನೆ ಮಾಡಲಾಯಿತು.
10 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಭಾಗವಹಿಸಿ ಮೆರವಣಿಗೆ ಯಲ್ಲಿ ಪಾಲ್ಗೊಂಡು ದೇವಿಯ ದರ್ಶನ ಪಡೆದು ಕುಣಿದು ಕುಪ್ಪಳಿಸಿ ಮನರಂಜೆಯಲ್ಲಿ ಮಿಂದೆದ್ದರು.
9 ದಿನಗಳ ಕಾಲ ನಡೆದ ನವರಾತ್ರಿ ನಂದಿನಿ ಉತ್ಸವದಲ್ಲಿ ಹಲವು ರಾಜಕಾರಿಣಿಗಳು ಸಿನೆಮಾ ತಾರೆಯರು ರಂಗಭೂಮಿ ಹಾಗೂ ರಿಯಾಲಿಟಿ ಶೋ ಕಲಾವಿದರು ಹಾಗೂ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಹಲವು ಶಾಲೆಯ ಮಕ್ಕಳು ಹಾಗೂ ಬೆಂಗಳೂರು ನಗರ ಡ್ಯಾನ್ಸ್ ಶಾಲೆಯ ಹಲವು ಮಕ್ಕಳು ಬಂದು ತಮ್ಮ ನೃತ್ಯ ಪ್ರದರ್ಶನ ಮೂಲಕ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರಗು ತಂದರು.ಇಂದು ಕ್ಷೇತ್ರದ ಎಲ್ಲ ಜನರಿಗೆ ಅನ್ನದಾನ ಸೇವೆ ಏರ್ಪಡಿಸಲಾಗಿತ್ತು.
ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್ ಹಾಗೂ ಅವರ ತಂಡ ಕಳೆದ 21 ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಈ ನವರಾತ್ರಿ ನಂದಿನಿ ಉತ್ಸವ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯತೆ ಜೊತೆಗೆ ಹಲವು ಪ್ರತಿಭೆಗಳಿಗೆ ಅವಕಾಶ ಗಳ ಆಗರವಾಗಿದೆ ಎಂದರೆ ತಪ್ಪಾಗಲಾರದು. ಇಂದಿಗೆ ನವರಾತ್ರಿ ನಂದಿನಿ ಉತ್ಸವ ಸಂಪನ್ನಗೊಂಡಿತು. ಸ್ಥಳೀಯ ಶಾಸಕ ಕೆ. ಗೋಪಾಲಯ್ಯ ಅವರು ಉತ್ಸವಕ್ಕೆ ಬೆಂಬಲವಾಗಿ ಸಹಕಾರಿ ನೀಡಿದ್ದರು.
ಮೆರವಣಿಗೆಯು ಮಾರುತಿನಗರ ಸರ್ಕಲ್ ನಿಂದ ಶುರುವಾಗಿ ರವಿ ಬಡಾವಣೆ, ಸಾಕಮ್ಮ ಬಡಾವಣೆ ನರಸಿಂಹ ಲೇಔಟ್ ಕೃಷ್ಣಾನಂದ ನಗರ ಪರಿಮಳ ನಗರ ನಂದಿನಿ ನಾಲ್ಕನೇ ಹಂತದ ಮೂಲಕ ಸಾಗಿಬರಲಿದೆ.