ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 14: ಬಡವರ ಮಕ್ಕಳು ಶೈಕ್ಷಣಿಕವಾಗಿ ಮೇಲೆ ಬರಬೇಕು ಎಂಬ ಉದ್ದೇಶದಿಂದ ನಮ್ಮದು ಖಾಸಗಿ ಶಾಲೆಯಾದರೂ ಸಹ ಅತಿ ಕಡಿಮೆ ಶುಲ್ಕದಲ್ಲಿ ಬಡಮಕ್ಕಳಿಗೂ ಸಹ ಶಿಕ್ಷಣ ನೀಡುತ್ತಿದ್ದೇವೆ ಎಂದು ಎಸ್ಎಸ್ವಿ ಶಾಲೆಯ ಶಾಲೆಯ ಕಾರ್ಯದರ್ಶಿ ಉಮಾಪತಿ ಅಭಿಪ್ರಾಯಪಟ್ಟರು.
ಆನೇಕಲ್ ತಾಲೂಕಿನ ಬಿದರಿಕೆರೆ ಸಮೀಪವಿರುವ ಎಸ್ಎಸ್ವಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಈ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶೇಕಡ 99% ಫಲಿತಾಂಶ ಬಂದಿದೆ. ಶಾಲೆಯ ಪೋಷಕರು ಮತ್ತು ಶಿಕ್ಷಕರ ಸಹಕಾರದಿಂದ ಈ ಬಾರಿ 99% ಪರ್ಸೆಂಟ್ ರಿಸಲ್ಟ್ ಬಂದಿದೆ ಎಂದು ಹೇಳಿದರು.
ಇತ್ತೀಚಿಗೆ ಖಾಸಗಿ ಶಾಲೆಗಳು ವ್ಯಾಪಾರ ಮಾಡಿಕೊಂಡಿದ್ದಾರೆ. ನಮ್ಮ ಶಾಲೆಯಲ್ಲಿ ಆ ರೀತಿ ಇಲ್ಲ. ಗ್ರಾಮೀಣ ಭಾಗದ ಬಡ ಮಕ್ಕಳು ಸಹ ಉತ್ತಮ ಶಿಕ್ಷಣ ಪಡೆಯಲಿ ಎಂದು ಬಡವರಿಗೆ ಕೈಗೆಟುಕುವ ದರದಲ್ಲಿಯೇ ಶಿಕ್ಷಣ ನೀಡುತ್ತಿದ್ದೇವೆ. ಖಾಸಗಿ ಶಾಲೆ ಎಂದರೆ ಕೆಲವರು ಹೆದರಿಕೊಂಡೇ ದೂರು ಉಳಿಯುತ್ತಾರೆ. ಆದರೆ, ಮಕ್ಕಳು ಭವಿಷ್ಯದಲ್ಲಿ ಸ್ಪರ್ಧಾತ್ಮಕವಾಗಿ ಸಿದ್ಧವಾಗಬೇಕು ಎಂದು ಅವರಿಗೆ ಬಾಲ್ಯದಲ್ಲಿಯೇ ಉತ್ತಮ ಶಿಕ್ಷಣ ಸಿಗಬೇಕು. ಈ ನಿಟ್ಟಿನಲ್ಲಿ ಎಸ್ಎಸ್ವಿ ಶಾಲೆ ಕಾರ್ಯನಿರ್ವಹಿಸುತ್ತಿದೆ ಎಂದು ಉಮಾಪತಿ ತಿಳಿಸಿದರು.