ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದ ನಂದಿನಿ ಲೇಔಟ್ ವಾರ್ಡ್ ನಲ್ಲಿರುವ ನವರಾತ್ರಿ ವೃತ್ತದಲ್ಲಿ ಇಂದು ಸಂಕ್ರಾಂತಿ ಗೋವು ಉತ್ಸವ ಹಾಗೂ ಸಂಕ್ರಾಂತಿ ಹಬ್ಬದ ವಿಶೇಷ ಸಾಂಸ್ಕೃತಿಕ ಸಂಜೆ ಏರ್ಪಡಿಸಲಾಗಿತ್ತು.
ಈ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗೋ ಪೂಜೆ ಮಾಡುವುದು ಹಾಗೂ ಕಿಚ್ಚು ಹಾಯಿಸುವದು ಮತ್ತು ಸ್ವಾಮಿ ವಿವೇಕಾನಂದರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮವನ್ನು ಸ್ಥಳೀಯ ಶಾಸಕರು ಹಾಗೂ ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ರವರು ಪಾಲ್ಗೊಂಡು ಕಾರ್ಯಕ್ರಮ ಉದ್ಘಾಟಿ ಸಿದರು.
ನಂತರ ಮಾತನಾಡಿದ ಸಚಿವ ಗೋಪಾಲಯ್ಯ, “ಬಿಬಿಎಂಪಿ ನಿಕಟ ಪೂರ್ವ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್ ಅವರ ನೇತೃತ್ವದಲ್ಲಿ ಈ ಸಂಕ್ರಾಂತಿ ಹಬ್ಬವು ಕಳೆದ 8 ವರ್ಷಗಳಿಂದ ವಿಜೃಂಭಣೆ ಯಿಂದ ಆಚರಿಸಿಕೊಂಡು ಬರಲಾಗುತ್ತಿದೆ. ಇಂದು 9ನೇ ವರ್ಷದ ಸಂಕ್ರಾಂತಿ ಹಬ್ಬವನ್ನು ಸಂಭ್ರಮದಿಂದ ಬಡಾವಣೆಯ ಎಲ್ಲ ನಿವಾಸಿಗಳು ಪಾಲ್ಗೊಂಡು ಆಚರಿಸುತ್ತಿರುವುದು ಖುಷಿಯ ಸಂಗತಿ. ಇವತ್ತಿನ ಕಾರ್ಯಕ್ರಮ ಹಳ್ಳಿಗಾಡಿನ ಸೊಗಡನ್ನು ನೆನಪಿಸಿ ಮತ್ತೆ ಆ ದಿನಗಳು ನಾವು ಚಿಕ್ಕವರಿರುವಾಗ ಹಬ್ಬಗಳ ಆಚರಣೆ ಮಾಡುತ್ತಿದ್ದದ್ದು ನೆನಪಿಸುವಂತಿತ್ತು. ಎಲ್ಲರಿಗೂ ಹೊಸ ವರ್ಷದ ಶುಭಾಶಯ ಜೊತೆಗೆ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು ಕೋರಿದ ಸಚಿವರು ಮಹಾಲಕ್ಷ್ಮಿ ಲೇಔಟ್ ವಿಧಾನ ಸಭಾ ಕ್ಷೇತ್ರದಲ್ಲಿ ಬರುವ ನಂದಿನಿ ಲೇಔಟ್ ವಾರ್ಡ್ ತುಂಬಾ ಅಭಿವೃದ್ಧಿ ಹೊಂದಿದ ವಾರ್ಡ್ ಆಗಿದ್ದು, ಎಲ್ಲರೂ ಸ್ಮಾರ್ಟ್ ವಾರ್ಡ್ ಎಂದು ಕರೆಯುತ್ತಾರೆ. ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್ ಅವರು ವಾರ್ಡ್ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ,” ಎಂದರು.
ಈಗಾಗಲೇ ಎಲ್ಲ ಕೆಲಸಗಳು ಮುಗಿದಿದ್ದು, ಬಾಕಿ ಇರುವ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆಯುತ್ತಿದ್ದು, ಫೆಬ್ರುವರಿ 15 ರ ಒಳಗಾಗಿ ಮುಗಿಸಿ ಲೋಕಾರ್ಪಣೆ ಮಾಡಲಾಗುವುದು. ಸಿಎಂ ಬಸವರಾಜ ಬೊಮ್ಮಾಯಿ ಯವರು ನಮ್ಮ ಕ್ಷೇತ್ರಕ್ಕೆ ಆಗಮಿಸಿ ಈ ಎಲ್ಲ ಕಾರ್ಯಕ್ರಮಗಳನ್ನು ಲೋಕಾರ್ಪಣೆ ಮಾಡಲಿದ್ದಾರೆ. ಈಗಾಗಲೇ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡುತ್ತಿದ್ದು, ಸದ್ಯದಲ್ಲೇ ಅದನ್ನು ಉದ್ಘಾಟನೆ ಮಾಡಲಾಗುವುದು, ಜೊತೆಗೆ ಹಳೆಯ BHEL PARK ಅನ್ನು ನವೀಕರಿಸಿ ಹೊಸದಾಗಿ ನವ ನಂದಿನಿ ಪಾರ್ಕ್ ಅನ್ನುವ ಹೆಸರಿನಲ್ಲಿ ಪಾರ್ಕ್ ಅಭಿವೃದ್ಧಿ ಪಡಿಸಲಾಗಿದೆ. ಕ್ಷೇತ್ರದ ಜನರ ಆರೋಗ್ಯದ ಬಗ್ಗೆ ಸರ್ಕಾರ ನಮ್ಮ ಕ್ಲಿನಿಕ್ ಎಂಬ ಆಸ್ಪತ್ರೆ ಆರಂಭಿಸಲಾಗಿದೆ. ಇದರಲ್ಲಿ ಎಲ್ಲ ರೀತಿಯ ಚಿಕಿತ್ಸೆ ಲಭ್ಯವಿದೆ ಎಲ್ಲರೂ ಇದರ ಪ್ರಯೋಜನ ಪಡೆಯಬೇಕು. ಜೊತೆಗೆ ನಾಗಪುರದಲ್ಲಿ ಬರುವ ಭಾನುವಾರ ಬೃಹತ್ ಉದ್ಯೋಗ ಮೇಳ ನಡೆಯಲಿದೆ. ಅರ್ಹ ವಿದ್ಯಾರ್ಥಿಗಳು ಪಾಲ್ಗೊಂಡು ಸೂಕ್ತವಾದ ಕೆಲಸವನ್ನು ಪಡೆಯಬಹುದು.
ನಂತರ ಮಾತನಾಡಿದ ಕಾರ್ಯಕ್ರಮದ ರೂವಾರಿ ರಾಜೇಂದ್ರಕುಮಾರ್ ಅವರು ಸಚಿವರ ಸಹಕಾರದಿಂದ ಎಲ್ಲ ರೀತಿಯ ಅಭಿವೃದ್ಧಿ ಕಾರ್ಯಗಳು ಭರದಿಂದ ನಡೆಯುತ್ತಿದ್ದು ಮುಂದಿನ ಕೆಲವೇ ದಿನಗಳಲ್ಲಿ ಜನರ ಉಪಯೋಗಕ್ಕಾಗಿ ಮುಕ್ತವಾಗಿ ಸಿಗಲಿವೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿಬಿಬಿಎಂಪಿ ಮಾಜಿ ಉಪ ಮಹಾಪೌರರಾದ ಹೇಮಲತಾ ಗೋಪಾಲಯ್ಯ, ಬಿಬಿಎಂಪಿ ಮಾಜಿ ಸದಸ್ಯರಾದ ಕೆ ವಿ ರಾಜೇಂದ್ರ ಕುಮಾರ್,ಪುಷ್ಪಾ ರಾಜೇಂದ್ರ ಕುಮಾರ್, ಸುರಭಿ ನಾಗರಾಜ್, ಆನಂದ್, ಭಾಸ್ಕರ್,ಗೌರಮ್ಮ, ಸೇರಿದಂತೆ ಹಲವು ಗಣ್ಯರು,ಮುಖಂಡರು ಕಾರ್ಯಕರ್ತರು ಬಡಾವಣೆ ನಿವಾಸಿಗಳು ಮಕ್ಕಳು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಗೋವುಗಳನ್ನು ಪೂಜಿಸಿ ಕಿಚ್ಚು ಹಾಯಿಸಲಾಯಿತು. ಹಾಗೆಯೇ ಸಂಕ್ರಾಂತಿ ಸೊಗಡಿನ ಜಾನಪದ ಹಾಡು ನೃತ್ಯ, ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ನಡೆದವು. ನಟ ಧನಂಜಯ ಗೌಡ ಕಾರ್ಯಕ್ರಮ ನಿರೂಪಣೆ ಕಾರ್ಯಕ್ರಮಕ್ಕೆ ಮೆರಗು ನೀಡಿತು.