ಕೊಪ್ಪಳ : ಬಿಜೆಪಿಯಲ್ಲಿ ಕಮಿಷನ್ ಹಾಗೂ ಮೊಟ್ಟೆಯಲ್ಲಿಯೂ ಕಮಿಷನ್ ಮತ್ತು ಕೊರೊನಾದಲ್ಲಿಔಷಧಿ ಮಾರಾಟ ಮಾಡಿದ ಶಾಸಕರಿದ್ದಾರೆ ಎಂದು ಕೆಪಿಸಿಸಿ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೇವಾಲ್ ಹೇಳಿದರು.
ಅವರು ಇಂದು ಕೊಪ್ಪಳದಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡು ರಾಜ್ಯದಲ್ಲಿ ಈಗ ಎರಡು ಹುಲಿಗಳು ಈಗ ವೇದಿಕೆಯಲ್ಲಿ ಬಂದಿವೆ ಎಂದು ಡಿಕೆ ಶಿವಕುಮಾರ ಹಾಗು ಸಿದ್ದರಾಮಯ್ಯ ಉದ್ದೇಶಿಸಿ ಹೇಳಿದರು.
ಸೋನಾ ಮಸೂರಿ ಬೆಳೆದ ರೈತರಿಗೆ ಲಾಭವಾಗುತ್ತಿಲ್ಲ. ಬಿಜೆಪಿ ಸರಕಾರ ನಿರುದ್ಯೋಗ ಹೆಚ್ಚು ಮಾಡಿದೆ. ರಾಜ್ಯದಲ್ಲಿ 2.92 ಲಕ್ಷ ಸರಕಾರಿ ನೌಕರಿಗಳು ಖಾಲಿ ಇವೆ. ಈಗ ಯುವಜನ ಸಣ್ಣಪುಟ್ಟ ಕೆಲಸ ಮಾಡುತ್ತಿದ್ದಾರೆ. ಸರಕಾರಿ ಉದ್ಯಮಗಳು ಬಂದ್ ಆಗಿವೆ. ಆದರೆ ಈಗ ಲಕ್ಷ್ಯ ವಹಿಸದೆ ಬಿಜೆಪಿ ಶಾಸಕರ ಕಮಿಷನ್ ಎಂಎಲ್
ಎ ಪಿಎಸ್ಐ ನೇಮಕಾತಿಯಲ್ಲಿ 15 ಲಕ್ಷದ ತೆಗೆದುಕೊಂಡಿದ್ದುಮಾತನಾಡಿದ್ದಾರೆ. ಇನ್ನೊಬ್ಬ ಎಂಎಲ್ಎ ಬಿಸಿಯೂಟದಲ್ಲಿಮೊಟ್ಟೆಯಲ್ಲಿ ಕಮಿಷನ್ ಪಡೆದಿದ್ದಾರೆ.
ಇನ್ನು ಜಿಲ್ಲೆಯ ಆಸ್ಪತ್ರೆಯಲ್ಲಿ ಕೊರೊನಾ ಸಂದರ್ಭದಲ್ಲಿ ಔಷಧಿಯನ್ನು ಮಾರಿಕೊಂಡಿದ್ದಾರೆ ಎಂದು ಶಾಸಕ ಬಸವರಾಜ ದಡೇಸಗೂರು ಹಾಗು ಪರಣ್ಣ ಮುನವಳ್ಳಿ ಬಗ್ಗೆ ಪ್ರಸ್ತಾವನೆ ಮಾಡಿದರು.
2 ಲಕ್ಷ ಕೃಷಿ ಹೊಂಡ
ಇದೇ ವೇಳೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ. “ಕೊಪ್ಪಳದ ಕೊಪ್ಪಳದ ಮೆಡಿಕಲ್ ಕಾಲೇಜ್ ತಳಕಲ್ ಇಂಜಿನಿಯರಿಂಗ್ ಕಾಲೇಜ್, ಸಿಂಗಟಾಲೂರು ನೀರಾವರಿ, ಕೆರೆ ತುಂಬಿಸುವ ಯೋಜನೆಗಳು ನಮ್ಮ ಸರಕಾರದ ಅವಧಿಯಲ್ಲಿ ಜನಕ್ಕೆ ಲೋಕಾರ್ಪಣೆ ಆಗಿವೆ ಎಂದು ಹೇಳಿದರು.
2 ಲಕ್ಷ ಕೃಷಿ ಹೊಂಡ ಮಾಡಿಸಿದ್ದು ನಮ್ಮ ಸರಕಾರದ ಅವಧಿಯಲ್ಲಿ. ದರಿದ್ರ ಬಿಜೆಪಿ ಸರಕಾರ ಈಗ ಕೃಷಿ ಹೊಂಡ ನಿರ್ಮಾಣ ನಿಲ್ಲಿಸಿದೆ. ರಾಜ್ಯ ದಿವಾಳಿ ಆಗ್ತಿದೆ. ನರೇಂದ್ರ ಮೋದಿ ಕೂಡ ಈ ರಾಜ್ಯದ ರೈತರಿಗೆ ಟೋಪಿ ಹಾಕಿ ಮೋಸ ಮಾಡಿದ್ದಾರೆ ಬಿಜೆಪಿ ರಾಜ್ಯಕ್ಕೆ ಮಾರಕ.
2018 ರಲ್ಲಿ ಅಧಿಕಾರಕ್ಕೆ ಬಂದ್ರೆ 1 ಲಕ್ಷದವರೆಗಿನ ಸಾಲ ಮನ್ನಾ ಮಾಡ್ತಿವಿ ಅಂದ್ರು ಬಿಜೆಪಿಯವರು. ಆದ್ರೆ ಒಂದು ರೂಪಾಯಿ ಕೂಡ ಸಾಲ ಮನ್ನಾ ಮಾಡಿಲ್ಲ. ನಾವು ರಾಜ್ಯದಲ್ಲಿ 22 ಲಕ್ಷ ರೈತರ 50 ಸಾವಿರ ರೂ. ವರೆಗೆ ಸಾಲ ಮನ್ನಾ ಮಾಡಿದ್ದೇವೆ. ಕೇಂದ್ರದಲ್ಲಿ ಮನಮೋಹನ ಸಿಂಗ್ ಸರಕಾರ ರೈತರ 78 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ರು ಎಂದರು.
2013 ರಲ್ಲಿ ನಾವು ನೀಡಿದ್ದ 165 ರಲ್ಲಿ 158 ಭರವಸೆ ಈಡೇರಿಸಿದ್ದೇವೆ. ಬಿಜೆಪಿ 600 ಭರವಸೆ ನೀಡಿ 60 ಭರವಸೆ ಕೂಡ ಈಡೇರಿಸಿಲ್ಲ. ಬಿಜೆಪಿ ವಚನ ಭ್ರಷ್ಟ , ಜನರಿಗೆ ದ್ರೋಹ ಮಾಡಿದ ಸರಕಾರ.
ಸ್ವಾತಂತ್ರ್ಯ ದೊರೆತಾಗಿನಿಂದ 2013 ರವರೆಗೆ ರಾಜ್ಯದ ಸಾಲ 2 ಲಕ್ಷ 42 ಸಾವಿರ ಕೋಟಿ, 2023 ರವರೆಗೆ ರಾಜ್ಯದ ಸಾಲ 5 ಲಕ್ಷದ 40 ಸಾವಿರದ ಕೋಟಿ ಸಾಲ ಆಗಿದೆ ತೀವ್ರವಾಗಿ ವಾಗ್ದಾಳಿ ನಡೆಸಿದರು.
ಶಾಸಕರೇ ಬ್ರೋಕರ್ ಆಗಿದ್ದಾರೆ:
ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ ಮಾತನಾಡಿ, ಕರ್ನಾಟಕದ ಜನರ ಸಮಸ್ಯೆ ನೋವು ಅರಿತು ಪರಿಹರಿಸಲುಪಕ್ಷ ಪ್ರಜಾಧ್ವನಿ ಬಸ್ ಯಾತ್ರೆ ಹಮ್ಮಿಕೊಳ್ಳಲಾಗಿದೆ. ದೇಶದಲ್ಲಿ ಕರ್ನಾಟಕದ ಆಡಳಿತ ಮಾದರಿಯಾಗಿತ್ತು. ಈಗ ಕರ್ನಾಟಕದ ಆಡಳಿತ ದೇಶದಲ್ಲಿ ಕಪ್ಪು ಚುಕ್ಕೆ ಆಗಿದೆ. ಕಾಂಗ್ರೆಸ್ ಪಕ್ಷದ ಎಸ್.ಎಂ.ಕೃಷ್ಣ , ಧರಂ ಸಿಂಗ್ , ಸಿದ್ದರಾಮಯ್ಯರ ಆಡಳಿತ ಕಳಂಕ ರಹಿತ, ಪರಿಶುದ್ದ ಆಡಳಿತ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಶಾಸಕರೊಬ್ಬರು ಬ್ರೋಕರ್ ಆಗಿದ್ದಾರೆ. ಹಗರಣದಲ್ಲಿ ಮುಳುಗಿದ್ದಾರೆ. ಜಿಲ್ಲೆಯ ಐದೂ ಸ್ಥಾನಗಖನ್ನು ಕಾಂಗ್ರೆಸ್ ಗೆಲ್ಲಲಿದೆ. ವರ್ಷಕ್ಕೆ 24 ನೂರು ಯುನಿಟ್ ಉಚಿತ ಕರೆಂಟ್ , ಪ್ರತಿ ಕುಟುಂಬದ ಹಿರಿಯ ಮಹಿಳೆಗೆ ಪ್ರತಿ ವರ್ಷ 24 ಸಾವಿರ ರೂಪಾಯಿ ನೀಡುವ ನಿರ್ಧಾರ ಕಾಂಗ್ರೆಸ್ ಮಾಡಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಮಾತನಾಡಿ ಮೂರೂವರೆ ವರ್ಷಗಳ ಹಿಂದೆ ಹಿಂಬಾಗಿಲಿನಿಂದ ಬಂದಿರುವ ಬಿಜೆಪಿ ಸರಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸ್ವಜನ ಪಕ್ಷಪಾತದಲ್ಲಿ ಮುಳುಗಿದೆ. ಸಮಾಜಗಳ ನಡುವೆ ಒಡಕು ಉಂಟು ಮಾಡುತ್ತಿದ್ದಾರೆ. ರಾಜ್ಯ ಕೇಂದ್ರ ಎರಡೂ ಸರಕಾರ ವಿಫಲವಾಗಿವೆ ಎಂದರು.
ಬಸವರಾಜ ರಾಯರಡ್ಡಿ ಮಾತನಾಡಿ ಜಿಲ್ಲೆಯಲ್ಲಿ ಮೆಡಿಕಲ್, ಇಂಜಿನಿಯರಿಂಗ್, ವಸತಿ ಶಾಲೆ ಕಾಲೇಜುಗಳು,ಚಕೆರೆ ತುಂಬಿಸುವ ಯೋಜನೆ ಕಾಂಗ್ರೆಸ್ ಸರಕಾರದ ಅಭಿವೃದ್ಧಿ ಕಾರ್ಯಗಳು ಆಗಿವೆ ಎಂದರು.
ಅಮರೇಗೌಡ ಬಯ್ಯಾಪುರ ಮಾತನಾಡಿ, “ಬೆಲೆ ಏರಿಕೆಯಿಂದ ಜನ ಜೀವನ ದುಸ್ತರವಾಗಿದೆ. ಸಿದ್ದರಾಮಯ್ಯರು ನೀಡಿದ ಅಕ್ಕಿಯಲ್ಲಿ ಕಡಿತಗೊಳಿಸಿದ ಜನ ವಿರೋಧಿ ಸರಕಾರ ಬಿಜೆಪಿ ಎಂದರು.
ಇಕ್ಬಾಲ್ ಅನ್ಸಾರಿಯವರು ಮಾತನಾಡಿ ಸರಕಾರಿ ನೌಕರರು ಓಪಿಎಸ್ನಿಂದ ನೊಂದಿದ್ದು ಹಳೇ ಪಿಂಚಣಿ ಯೋಜನೆ ಜಾರಿಗಾಗಿ ಹೋರಾಡುತ್ತಿದ್ದಾರೆ. ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದಾಗ ಸಿದ್ದರಾಮಯ್ಯರು ಮನಸ್ಸು ಮಾಡಬೇಕು ಎಂದು ಹೇಳಿದರು.
ಶಿವರಾಜ ತಂಗಡಗಿ ಮಾತನಾಡಿ ನವಲಿ ಜಲಾಶಯ ಯೋಜನೆ ಬಗ್ಗೆ ಹಿಂದಿನ ನಮ್ಮ ಕಾಂಗ್ರೆಸ್ ಸರಕಾರ ಸ್ಪಂದಿಸಿದೆ. ಬಿಜೆಪಿ ಈ ಬಗ್ಗೆ ಅಪಪ್ರಚಾರ ಮಾಡುತ್ತಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಪ್ರಸ್ತಾವಿಕ ಮಾತನಾಡಿದರು. ವೇದಿಕೆಯಲ್ಲಿ ಮಲ್ಲಿಕಾರ್ಜುನ ನಾಗಪ್ಪ. ಹೆಚ್ ಆರ್ ಶ್ರೀನಾಥ. ಶ್ರೀಧರರಾವ್, ವಿ ಎಸ್ ಉಗ್ರಪ್ಪ. ಸತೀಶ ಜಾರಕಿಹೊಳಿ. ಪುಷ್ಪ ಅಮರನಾಥ ಸೇರಿ ಹಲವರು ಮುಖಂಡರಿದ್ದರು.
ಈ ಮುನ್ನು ಮಾಜಿ ಸಿಎಂ ಸಿದ್ದರಾಮಯ್ಯ..ಡಿ ಕೆ ಶಿವಕುಮಾರ ಗವಿಮಠಕ್ಕೆ ಹೋಗಿ ಸ್ವಾಮಿಗಳ ದರ್ಶನ ಪಡೆದು ಸ್ವಾಮಿಜಿಗಳೊಂದಿಗೆ ಸಮಾಲೋಚನ ಮಾಡಿದರು.
ಇದೇ ವೇಳೆ ಬಸವೇಶ್ವರ ವೃತ್ತದಿಂದ ತಾಲೂಕಾ ಕ್ರೀಡಾಂಗಣದವರೆಗೂ ಬಸ್ ಯಾತ್ರೆಯ ಮೆರವಣಿಗೆ ನಡೆಯಿತು. ಈ ಸಂದರ್ಭದಲ್ಲಿ ಸಾವಿರಾರು ಜನರು ಅವರಿಗೆ ಕುಂಬಗಳೊಂದಿಗೆ ಪಟಾಕಿ ಸಿಡಿಸಿ ಸ್ವಾಗತಿಸಿದರು.