ಬೆಂಗಳೂರು: ಪುಸ್ತಕಗಳ ಸಂಗ್ರಹ ಮತ್ತು ಪ್ರದರ್ಶನದಲ್ಲಿ ದಾಖಲೆ ನಿರ್ಮಿಸಿರುವ ಪುಸ್ತಕಮನೆ ಹರಿಹರಪ್ರಿಯ ಅವರಿಗೆ ಸದ್ಯ 70ರ ಸಂಭ್ರಮ.
ಪುಸ್ತಕ ಸಂಗ್ರಹದಲ್ಲಿ ದಾಖಲೆ ಮಾಡಿದವರಿಗೆ ನಯನ ಸಭಾಂಗಣದಲ್ಲಿ ಶುಕ್ರವಾರ ಪುಸ್ತಕದಿಂದಲೇ ತುಲಾಭಾರ ಮಾಡುವ ಮೂಲಕ ಅವರ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಭಾರತರತ್ನ ಸರ್. ಎಂ. ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಪ್ರತಿಷ್ಠಾನ ಟ್ರಸ್ಟ್ನಿಂದ ಮತ್ತು ಗೀತಾಂಜಲಿ ಪಬ್ಲಿಕೇಶನ್ನ ನಿಡಸಾಲೆ ಪುಟ್ಟಸ್ವಾಮಯ್ಯನವರ ಸಹಯೋಗದಲ್ಲಿ ವೈವಿದ್ಯಮಯ ಪುಸ್ತಕದಿಂದ ತುಲಭಾರ ಮಾಡಿ, ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ನಾಡೋಜ ಬರಗೂರು ರಾಮಚಂದ್ರಪ್ಪ, ರಾಜ್ಯಸಭಾ ಸದಸ್ಯ ಡಾ. ಎಲ್. ಹನುಮಂತಯ್ಯ, ಪ್ರಜಾವಾಣಿ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್, ಮಾಜಿ ಶಾಸಕ ವೈ.ಎಸ್.ವಿ. ದತ್ತ ಹಾಜರಿದ್ದರು.