ವಿದ್ಯಾಭ್ಯಾಸದಲ್ಲಿ ಶ್ರದ್ಧೆ, ಸಮಯ ಪಾಲನೆ ಬಹು ಮುಖ್ಯ:ಡಾ. ಶರಣು ಗದ್ದುಗೆ
ಜೇವರ್ಗಿ ೦೯ : ವಿದ್ಯಾರ್ಥಿಜೀವನದಲ್ಲಿ ಹಾಗೂ ಖಾಸಗಿ ಜೀವನದಲ್ಲಿ ಯಶಸ್ಸು ಅನ್ನೊದು ಒಂದೆ ದಿನದಲ್ಲಿ ಬರುವಂತದ್ದಲ್ಲ, ಸತತ ಪ್ರಯತ್ನದಿಂದ ಮಾತ್ರ ನಮ್ಮ ಗುರಿ ಮುಟ್ಟಲು, ಯಶಸ್ಸು ಕಾಣಲು ಸಾದ್ಯವಾಗುತ್ತದೆ ಎಂದು ಡಾ. ಶರಣು ಬಿ ಗದ್ದುಗೆ ಅಭಿಮತಪಟ್ಟರು.
ಪಟ್ಟಣದ ಸಜ್ಜನ ಕಲ್ಯಾಣ ಮಂಟಪದಲ್ಲಿ ಕದಂಬ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ೭ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನುದ್ದೆಶಿಸಿ ಶರಣು ಗದ್ದುಗೆ ಮಾತನಾಡಿ ವಿದ್ಯಾರ್ಥಿಗಳ ಜೀವನದಲ್ಲಿ ಯಶಸ್ಸು ಎನ್ನುವುದು ಒಂದೇ ದಿನ ಬರುವಂತದ್ದಲ್ಲ ಅದನ್ನು ಸಾಧಿಸುವ ಹುಮ್ಮಸ್ಸಿನಿಂದ, ಸತತ ಪ್ರಯತ್ನದಿಂದ ಛಲ ಬಿಡದೆ, ಸಮಯ ಪಾಲನೆ, ಶ್ರದ್ದೆಯೊಂದಿಗೆ ನಮ್ಮ ಜೀವನದ ಗುರಿಯಡೆಗೆ ಸಾಗಿದಾಗ ಮಾತ್ರ ಯಶಸ್ಸು ಸಿಗುತ್ತದೆ. ಜೀವನದಲ್ಲಿ ಕಳೆದು ಹೋದ ಸಮಯ ಮತ್ತು ವಯಸ್ಸು ಎಂದಿಗೂ ಮರಳಿ ಬರುವುದಿಲ್ಲ ಪ್ರತಿಯೊಂದು ನಿಮಿಷವನ್ನು ಚೆನ್ನಾಗಿ ಬಳಸಿಕೊಂಡು ಸಾಧನೆಯ ಶಿಖರವೇರಬೇಕು ಎಂದರು.
ನಂತರ ಡಾ. ಶಿವಾನಂದ ಮಹಾಸ್ವಾಮಿ ಮಾತನಾಡಿ ವಿದ್ಯಾರ್ಥಿಜೀವನ ಒಮ್ಮೆ ಕಳೆದುಕೊಂಡರೆ ಮತ್ತೆ ಮರಳಿ ಬರುವುದಿಲ್ಲ. ವಿದ್ಯಾರ್ಥಿ ಜೀವನ ಬಹಳ ಮುಖ್ಯವಾಗಿದೆ, ಇಂದಿನ ನಿಮ್ಮ ನಡೆಯ ಮೇಲೆ ನಿಮ್ಮ ಮುಂದಿನ ಜೀವನ ನಿಂತಿರುತ್ತದೆ. ಆದ್ದರಿಂದ ಇಂದು ನಿವು ಎಷ್ಟು ಕಷ್ಟದ ಜೀವನ ಕಳಿಯುತ್ತಿರೊ ಮುಂದು ಸುಖಃ ಜೀವನ ನಡೆಸುತ್ತಿರ. ಒದು ಬಿಟ್ಟು ಸುಮ್ಮನೆ ಕಾಲೇಜಿಗೆ ಪ್ರತಿನಿತ್ಯ ಬಂದು ಹೊಗುವುದು ಮಾಡಿದರೆ ನಿಮ್ಮ ಜೀವನ ನಿವೆ ಹಾಳು ಮಾಡಿಕೊಳ್ಳುತ್ತಿರ. ನಿಮ್ಮ ಉತ್ತಮ ಭವಿಷ್ಯದ ನಿರ್ಮಾಣಕ್ಕೆ ಇಂದಿನಿoದಲೆ ಕಷ್ಟಪಡಬೇಕು ಎಂದರು.
ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯವನ್ನು ಯನಗುಂಟಿಯ ಪೂಜ್ಯರಾದ ಗಿರೀಶ್ ಮಹಾಸ್ವಾಮಿಗಳು ವಹಿಸಿಕೊಂಡಿದ್ದರು. ಉತ್ತರ ಕರ್ನಾಟಕ ಕರವೇ ಅಧ್ಯಕ್ಷ ಡಾ. ಶರಣು ಬಿ ಗದ್ದುಗೆ ದಯಾನಂದ್ ಬಿರಾದರ್, ಶ್ರೀಶೈಲ ಯಡ್ರಾಮಿ, ವಾಸು ವಿ.ಕೆ, ರಮೇಶ್ ನಂದೂರ್, ಸೋಮಶೇಖರ್ ಬಿ ಎನ್, ಅಮೃತ್ ಪಾಟೀಲ್, ಸಿದ್ದು ಮಸ್ಕಿ, ಮಲ್ಲಿಕಾರ್ಜುನ್ ಗುಜಗೊಂಡ, ಮರೆಪ್ಪ ಮೂಲಿಮನಿ, ಮಹೇಶ್ ನಿಲೂರ್, ವಿಜಯಕುಮಾರ್ ಬಡಿಗೇರ್, ಮುದು ಮ್ಯಾಳಗಿ ನರಿಬೋಳ, ಸಂಸ್ಥೆಯ ಅಧ್ಯಕ್ಷ ಮಲ್ಲಿಕಾರ್ಜುನ್ ಮ್ಯಾಳಗಿ, ಉಪಾಧ್ಯಕ್ಷ ಮಹದೇವಿ ಮದರಿ, ಕಾರ್ಯದರ್ಶಿ ಸಂಗಣ್ಣ ಪಿ ಸಾಹು ಯಳವಾರ್, ಸಹ ಕಾರ್ಯದರ್ಶಿ ಜಗನ್ನಾಥ ಬಿರಾದರ್, ಖಜಾಂಜಿ ರೂಪಾ ಬಲವಂತರಾಯ್, ಸಂಸ್ಥೆಯ ಸದಸ್ಯರಾದ ಭೂತಾಳಿ ಪೂಜಾರಿ, ಪ್ರಾಚಾರ್ಯರಾದ ಶ್ರೀಶೈಲ ಕೆ ಖಣದಾಳ, ಅಯ್ಯಣ್ಣ ಸರ್, ಶರಣು ಬಿಲ್ಲಾ ಯಲಗೊಡ ಸೆರಿದಂತೆ ಉಪನ್ಯಾಸಕರು, ವಿದ್ಯಾರ್ಥಿಗಳಿದ್ದರು. ಜ್ಯೋತಿ ಎಂ ಮದರಿ ನಿರುಪಿಸಿದರು, ಶ್ರೀ ಶೈಲ್ ಕೆ ಖಣದಾಳ ಪ್ರಾಸಸ್ತವಿಕ ಮಾತನಾಡಿದರು.