ದೇಶದ ಧರ್ಮ ಮತ್ತು ಸಂಸ್ಕೃತಿ ಉಳಿಸಿ:ದೊಡ್ಡಪ್ಪಗೌಡ ಪಾಟೀಲ
ಅದ್ದೂರಿ ಯತ್ನಾಳ ಗ್ರಾಮದೇವತೆ ಜಾತ್ರೆ
ಯಡ್ರಾಮಿ:ಆಧುನಿಕ ಭಾರತದಲ್ಲಿ ದೇಶದ ಧರ್ಮ ಮತ್ತು ಸಂಸ್ಕೃತಿ ಉಳಿಸಬೇಕಾಗಿದೆ.ಎಂದು ಕ್ಷೇತ್ರದ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳ ಅವರು ಯತ್ನಾಳ ಗ್ರಾಮದ ಗ್ರಾಮದೇವತಾ ಜಾತ್ರಾ ಮಹೋತ್ಸವ ಧರ್ಮಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ.
ನಮ್ಮ ಧರ್ಮ ನಮ್ಮ ಸಂಸ್ಕೃತಿ ಉಳಿಸುವ ಜವಾಬ್ದಾರಿ ಪ್ರತಿಯೊಬ್ಬರು ಭಾರತಿಯ ಪ್ರಜೆಯ ಮೇಲೆ ಇದೆ.ಗ್ರಾಮದಲ್ಲಿ ಪುರಾಣ ಪ್ರವಚನ ಮೂಲಕ ನಮ್ಮ ದೇಶದ ಸಂಸ್ಕೃತಿ ಉಳಿಸಬೇಕಾಗಿದೆ.
ಭಾರತದ ಧರ್ಮ ಮತ್ತು ಸಂಸ್ಕೃತಿ ಪ್ರಪಂಚ ಅತ್ಯಂತ ಉನ್ನತ ಸಂಸ್ಕೃತಿ ಹೊಂದಿದ್ದು.ಅಂತಹ ಪುರಾಣ ಮತ್ತು ಪ್ರವಚನ ಮೂಲಕ ಯತ್ನಾಳ ಗ್ರಾಮಸ್ಥರು ಈ ಕಾರ್ಯಮಾಡುತ್ತಿದ್ದಾರೆ ಅವರ ಕಾರ್ಯ ನೋಡಿ ಸಂತೋಷವಾಗುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.
ಜೆಡಿಎಸ್ ಮುಖಂಡ ವಿಜಯಕುಮಾರ ಹಿರೇಮಠ ಮಾತನಾಡಿ.ಗ್ರಾಮದಲ್ಲಿ ಗೋಲ್ಲಾಳೇಶ್ವರ ಪುರಾಣದಿಂದ ಪ್ರತಿಯೊಬ್ಬರು ಉತ್ತಮ ಚಾರಿತ್ರಿ ಬೇಳಸಿಕೊಳ್ಳಬೇಕು.ಆಗ ಮಾತ್ರ ದೇವಿಯ ಜಾತ್ರೆ ಮತ್ತು ಪುರಾಣಕ್ಕೆ ಅರ್ಥ ಬರುತ್ತದೆ.
ಈ ಗ್ರಾಮ ಜನರು ನಮ್ಮ ತಂದೆಯವರಿಗೆ ಬಲ ನೀಡಿದ ಜನರು ಈ ಗ್ರಾಮಕ್ಕೆ ಯಾವಾಗಲು ನಮ್ಮ ಕುಟುಂಬ ಯಾವಾಗಲು ಮರೆಯುವದಿಲ್ಲ ಎಂದು ಹೇಳಿದರು.
ಕಾರ್ಯಕ್ರಮ ದಿವ್ಯ ಸಾನಿಧ್ಯ ಪೂಜ್ಯ ಡಾ.ರುದ್ರಮುನಿ ಶಿವಾಚಾರ್ಯರು ಕಡಕೋಳ ವಹಿಸಿಕೊಂಡಿದ್ದರು.ನೇತೃತ್ವ ಪೂಜ್ಯ ಅಡವಿಸಿದ್ದ ಮಹಾಸ್ವಾಮಿಗಳು ವಹಿಸಿದ್ದರು.ಪೂಜ್ಯರ ಸಾನಿಧ್ಯದಲ್ಲಿ ಗ್ರಾಮದ ಹೆಣ್ಣು ಮಕ್ಕಳಿಗೆ ಉಡಿತುಂಬಿ ಹಾರೈಸಿದ್ದರು.
ಈ ಕಾರ್ಯಕ್ರಮ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಬೋಳ,ವಿಜಯಕುಮಾರ ಹಿರೇಮಠ, ಮಂಜು ಕುಲಕರ್ಣಿ,ಬಲವಂತರಾಯ ಶಿಕ್ಷಕರು ಸಂಘದ ಅಧ್ಯಕ್ಷರು,ಶರಣ್ಣಗೌಡ ಪೊಲೀಸ್ ಪಾಟೀಲ,ಹೊನ್ನಪ್ಪಗೌಡ ಮಾಲಿ ಪಾಟೀಲ,ಶರಣಪ್ಪ ಸಾಹು,ಪ್ರಭುಗೌಡ ಪೊಲೀಸ್ ಪಾಟೀಲ ಹಾಗು ಗ್ರಾಮದ ಮುಖಂಡರು ಇತರರು ಉಪಸ್ಥಿತರಿದ್ದರು.ಈ ಕಾರ್ಯಕ್ರಮ ಬಸವರಾಜ ಪಾಟೀಲ ನಿರೂಪಿಸಿದರು ಚಿದಾನಂದ ಹರವಾಳ ವಂದಿಸಿದರು.