ಸುದ್ದಿಮೂಲ ವಾರ್ತೆ ಮಸ್ಕಿ, ಫೆ. 11:
ಪಟ್ಟಣದಿಂದ ಉಮ್ರಾ ಯಾತ್ರೆಗೆ ತೆರಳಿದ ಮುಸ್ಲಿಂ ಮುಖಂಡ ಇಲ್ಲಿನ ಜಾಮೀಯಾ ಮಸ್ಜೀದ್ ಕಮಿಟಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಜಾಮೀಯಾ ಮಸ್ಜೀದ್ ಕಮಿಟಿಯ ಉಪಾಧ್ಯಕ್ಷ ಹಸನಸಾಬ್, ಅಬ್ರಾಬ್, ಲಾಲ್ ಅಹ್ಮದ್ಸಾಬ್, ಜಾಫರ್ಚೌದ್ರಿ ಇವರಿಗೆ ಸನ್ಮಾನಿಸಲಾಯಿತು.
ಮುಸ್ಲಿಂ ಮುಖಂಡರಾದ ಮುಫ್ತಿ ಆಸೀಫ್ಸಾಬ್, ಮುಪ್ತಿ ನೂರ್ಸಾಬ್, ಅಬ್ದುಲ್ ಅಜೀಜ್ಸಾಬ್, ಜಿಲಾನಿ ಖಾಜಿ, ಮಹ್ಮದ್ ಹನೀಫಸಾಬ್, ರಜಾಕ್ ಸಾಬ್, ಉಸ್ಮಾನ್ಸಾಬ್, ತಾಹೇರ್ ಸಾಬ್ ಸೇರಿದಂತೆ ಇನ್ನಿತರರು ಇದ್ದರು.