ಶ್ರೀ ಸಂತ ಸೇವಾಲಾಲ್ 284ನೇ ಜಯಂತೋತ್ಸವ ಆಚರಣೆ
1.36 ಕೋಟಿ ವೆಚ್ಚದಲ್ಲಿ ಬಂಜಾರ ಭವನ ಲೋಕಾರ್ಪಣೆ:ಅಜಯ ಧರ್ಮಸಿಂಗ್
ಜೇವರ್ಗಿ: ಜೈ ಸೇವಾಲಾಲ ಜೈ ಜೈ ಸೇವಾಲಾಲ ಮಹಾರಾಜ ಹಾಗೂ ಮಾರ ನಾಯಕ ಡಾವ ಸಾಣೇನ ರಾಮ ರಾಮಿ ಎಂದು ಶಾಸಕ ಹಾಗೂ ಸರ್ಕಾರದ ವಿರೋಧ ಪಕ್ಷದ ಮುಖ್ಯ ಸಚೇತಕ ಡಾ.ಅಜಯ ಧರ್ಮಸಿಂಗ್ ಹೇಳಿದರು.
ಪಟ್ಟಣದಲ್ಲಿ ಸಂತಶ್ರೀ ಸೇವಾಲಾಲ ಮಹಾರಾಜರ 284ನೇ ಜಯಂತ್ಯೋತ್ಸವ ಹಾಗೂ ಬಂಜಾರ ಭವನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಜೇವರ್ಗಿ ತಾಲೂಕಿನ ಬಂಜಾರ ಭವನ ಅತ್ಯದ್ಭುತವಾಗಿದೆ.ಬಹಳಷ್ಟು ಮುತುವರ್ಜಿ ವಹಿಸಿ,1.36 ಕೋಟಿ ವೆಚ್ಚ ಮಾಡಿ ನಿರ್ಮಿಸಲಾಗಿದೆ.ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಅಜಯಸಿಂಗ್ ಮನವಿ ಮಾಡಿದರು.
ಸಂತ ಸೇವಾಲಾಲ ಮಹಾರಾಜರು ಸಕಲ ಕ್ರಿಮಿ ಕೀಟಗಳಿಗೂ ಸಹ ಲೇಸನ್ನೆ ಬಯಸಿದ ಮಹಾನ್ ಸಂತರು.ಮೌಡ್ಯ ಕಂದಾಚಾರಗಳನ್ನು ಹೊಗಲಾಡಿಸಲು ಪ್ರಯತ್ನಿಸಿದ ಬಂಜಾರ ಸಮಾಜದ ವಿಶ್ವ ಗುರು ಸಂತ ಸೇವಾಲಾಲರು ಎಂದು ಹೇಳಿದರು. ನಿಮ್ಮ ಸಮಾಜದ ಜೊತೆ ನಾನು ಯಾವತ್ತಿಗೂ ಇರುವೆ.ನಿಮ್ಮ ಸಹಕಾರ ನನಗೆ ಇರಲಿ ಎಂದು ಮನವಿ ಮಾಡಿದರು.
ಬಾಕ್ಸ್ (೧)
ಕುಣಿದು ಕುಪ್ಪಳಿಸಿದ ಬಂಜಾರ ಯುವಕರು
ಡಿಜೆ ಸೌಂಡನಲ್ಲಿ ಸಮಾಜದ ಆರಾಧ್ಯದೈವ ಸಂತ ಶ್ರೀ ಸೇವಾಲಾಲರ ಕುರಿತು ಹಾಗೂ ಬಂಜಾರ ಸಮಾಜದ ಹಲವು ಹಾಡುಗಳಿಗೆ ಸಖತ್ ನೃತ್ಯ ಮಾಡುವುದರ ಮೂಲಕ, ಮೇರವಣಿಗೆ ಉದ್ದಕ್ಕೂ ನೃತ್ಯ ಮಾಡಿದರು. ಆಗಾಗ ಹಿರಿಯ ನಾಯಕರುಗಳು ಕೂಡಾ ನೃತ್ಯ ಮಾಡಿ ರಂಜಿಸಿದರು.
ಬಾಕ್ಸ್ (೩)
ಮೋದಿಗೆ ಟಾಂಗ್ ಕೊಟ್ಟ ಅಜಯಸಿಂಗ್
ಕಳೆದ ಕೆಲವು ದಿನಗಳ ಹಿಂದೆ ಕಲಬುರಗಿ ಜಿಲ್ಲೆಗೆ,ಪ್ರಧಾನಿ ನರೇಂದ್ರ ಮೊದಿ ಆಗಮಿಸಿ, ಬಂಜಾರ ಸಮಾಜದವರಿಗೆ ಹಕ್ಕು ಪತ್ರ ವಿತರಣೆ ಮಾಡಿದ್ದಾರೆ. ಆ ಕಾರ್ಯ ತಹಸೀಲ್ದಾರರವರು ಅಥವಾ ಶಾಸಕರು ಮಾಡಬೇಕು. ಅದು ಬಿಟ್ಟು ಪ್ರಧಾನಿ ಮೋದಿ ಆಗಮಿಸಿ, ಹಕ್ಕು ಪತ್ರ ನೀಡಿದ್ದು ಎಷ್ಟು ಸಮಂಜಸ ಎಂದು ಅಜಯಸಿಂಗ್ ಮೋದಿಗೆ ಟಾಂಗ್ ನೀಡಿದರು.
ತಹಸೀಲ್ದಾರ ರಾಜೇಶ್ವರಿ ಮೇರವಣಿಗೆಗೆ ಚಾಲನೆ.
ಸಾರೋಟನಲ್ಲಿ ಸಂತ ಸೇವಾಲಾಲರ ಭವ್ಯ ಚಿತ್ರ ಪಟ.
ಸೇವಾಲಾಲರ ವೇಷಧಾರಿಯಾಗಿ ಕು.ಸಮರ್ಥ.
ಮಾರೋ ನಂಗಾರಾ,ಜಾಗೋ ಬಂಜಾರ ಘೋಷಣೆಯ ಝೇಂಕಾರ.
ರಿಲಯನ್ಸ್ ಪೆಟ್ರೋಲ್ ನಿಂದ, ಬಂಜಾರ ಭವನದ ವರೆಗೆ ಭವ್ಯ ಮೇರವಣಿಗೆ.
ಭವ್ಯ ಮೇರಣಿಗೆಯಲ್ಲಿ ಶಾಸಕ ಅಜಯಸಿಂಗ್ ಹಾಗೂ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ಭಾಗಿ.
ಡಿಜೆ ಸೌಂಡಗೆ,ಯುವಕ ಯುವತಿಯರ ಸಖತ್ ಡ್ಯಾನ್ಸ್.
ಐತಿಹಾಸಿಕ ಸೇವಾಲಾಲರ ಜಯಂತ್ಯೋತ್ಸವ.
ಪೂಜಾ ಕಾರ್ಯ ಮಾಡಿದ ಪೂಜ್ಯ ಶ್ರೀಗಳು.ಅಣ್ಣಾರಾಯ ಮಂದೇವಾಲರ ಬಂಜಾರ ಭಜನೆಗೆ ತಲೆದೂಗಿದ ಜನತೆ.
ಸುಮಾರು ಎರಡು ಕಿಲೋಮೀಟರ್ ಮೇರವಣಿಗೆ.
1.36 ಕೋಟಿ ವೆಚ್ಚದಲ್ಲಿ ಬಂಜಾರ ಭವನ ಲೋಕಾರ್ಪಣೆ.
ಈ ಸಂದರ್ಭದಲ್ಲಿ,ರಾಜಶೇಖರ ಸಿರಿ,ಮಾಜಿ ಜಿಪಂ ಸದಸ್ಯರಾದ ಚಂದ್ರಶೇಖರ ಹರನಾಳ, ಶಾಂತಪ್ಪ ಕೂಡಲಗಿ,ಕಾಸೀಂ ಪಟೇಲ್ ಮುದಬಾಳ,ಸಿದ್ದಲಿಂಗರೇಡ್ಡಿ ಇಟಗಾ, ಜಯಂತ್ಯೋತ್ಸವ ಸಮಿತಿ ಅಧ್ಯಕ್ಷ ರಮೇಶ್ ರಾಠೋಡ ರೇವನೂರ, ಪ್ರಚಾರ ಸಮಿತಿ ಅಧ್ಯಕ್ಷರಾದ ಬಹದ್ದೂರ್ ರಾಠೋಡ,,ತುಕಾರಾಮ ಚವ್ಹಾಣ, ತಿಪ್ಪಣ್ಣ ರಾಠೋಡ,ಬಸವರಾಜ ಪವಾರ , ಪ್ರಶಾಂತ ರಾಠೋಡ ಯಡ್ರಾಮಿ,ಸಿತಾರಾಮ ರಾಠೋಡ,ಪಂಡಿತ ಪವಾರ ರಂಜಣಗಿ, ಅಂಬರೀಶ್ ರಾಠೋಡ,ಸುರೇಶ್ ಮಂದೇವಾಲ, ಹೇಮು ಅಂಕಲಗಿ,ಪತ್ರಕರ್ತ ಧನರಾಜ್ ರಾಠೋಡ ಮುತ್ತಕೋಡ ,ಉಮಾಜಿ ರಾಠೋಡ,ಲಕ್ಷ್ಮಣ ರಾಠೋಡ ಖಾದ್ಯಾಪೂರ,ಶ್ರೀಶೈಲ ಯಡ್ರಾಮಿ, ಕೃಷ್ಣ ರಾಠೋಡ ಹರವಾಳ, ಲಕ್ಷ್ಮಣ ಪವಾರ, ಚಂದ್ರಶೇಖರ ರಾಠೋಡ, ,ತಿರುಪತಿ ರಾಠೋಡ ಕೊಣ್ಣೂರ,ಜಾನು ರಾಠೋಡ, ನರೇಶ್ ರಾಠೋಡ, ತುಕಾರಾಮ ಜಾಧವ ಜೇವರ್ಗಿ, ಯಮನಾಥ ಜಾಧವ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಮೇರವಣಿಗೆ ಹಾಗೂ ವೇದಿಕೆಯಲ್ಲಿ ಇದ್ದರು.
ಉಪನ್ಯಾಸವನ್ನು ಗಿರೀಶ್ ರಾಠೋಡ ಮಾಡಿದರೇ,ಸ್ವಾಗತವನ್ನು ತುಳಜಾರಾಮ ರಾಠೋಡ ಹರವಾಳ ಹಾಗೂ ನಿರೂಪಣೆಯನ್ನು ಧನಸಿಂಗ್ ರಾಠೋಡ ಮಾಡಿದರು.