ಬಿಜೆಪಿ ತೊರೆದು ಶರಣಗೌಡ ಸರಡಗಿ ನೇತೃತ್ವದಲ್ಲಿ ನೂರಾರು ಯುವಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ
ಜೇವರ್ಗಿ : ಪಟ್ಟಣದ ಮಾಳಿಂಗರಾಯರ ದೇವಸ್ಥಾನದ ಆವರಣದಲ್ಲಿ ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮ ಜರಗಿತು.
ಕನಕದಾಸ ಬಡಾವಣೆಯ ನಿವಾಸಿಗಳು ಹಾಗೂ ಮಾದಿಗ ಸಮಾಜದ ಯುವಕರು ನೂರಕ್ಕೂ ಹೆಚ್ಚಿನ ಕಾರ್ಯಕರ್ತರು ಬಿಜೆಪಿ ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸಿದ್ದಲಿಂಗ ರೆಡ್ಡಿ ಹಾಗೂ ಯಡ್ರಾಮಿ ತಾಲೂಕ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ರುಕ್ಕುಂ ಪಟೇಲ್ ಇಜೇರಿ ಅವರ ನೇತೃತ್ವದಲ್ಲಿ ಶಾಸಕ ಅಜಯ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ಶರಣಗೌಡ ಸರಡಗಿ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷಕ್ಕೆ ಸ್ವಾಗತ ಮಾಡಿಕೊಳ್ಳಲಾಯಿತು.
ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಶರಣಗೌಡ ಸರಡಗಿ ಮಾತನಾಡಿ ನಾನು ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳನ್ನು ಒಪ್ಪಿಕೊಂಡು ಶಾಸಕರಿಗೆ ಬೆಂಬಲವಾಗಿ ನಿಂತು ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಿ ತಾಲೂಕಿಗೆ ಶಾಸಕರ ಜೊತೆಗೆ ಕ್ಯಾಬಿನೆಟ್ ದರ್ಜೆಯ ಮಂತ್ರಿ ಮಾಡೇ ಮಾಡುತ್ತೇವೆ ಎನ್ನುವ ಭರವಸೆ ಶಾಸಕರಿಗೆ ನೀಡುತ್ತೇನೆ ಎಂದು ಹೇಳಿದರು. ನೀವು ನಮ್ಮ ಜೊತೆ ಇರಿ ನಾವು ನಿಮ್ಮ ಜೊತೆ ಹಗಲಿರುಳು ದುಡಿಯಲು ಸಿದ್ದರಾಗಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಲಕ್ಕಪ್ಪ ರದ್ದೆವಡಗಿ, ಶರಣಬಸು ಯಡ್ರಾಮಿ, ಮಾನಪ್ಪ ಗೋಗಿ, ಭೀಮರಾಯ ದೊಡ್ಡಮನಿ, ಶೇಖರ್ ಕೋಬಾಳ್ಕರ್, ಬಸಪ್ಪ ಹಿರಿ ಪೂಜಾರಿ, ಕಾಮಣ್ಣ ಜನಿವಾರ, ಮುಂಗಪ್ಪ ಹಿರಿ ಪೂಜಾರಿ, ಬೀರಪ್ಪ ಹನ್ನೂರ, ಅಂಬರೀಶ್, ಕಾಡಪ್ಪ ಚನ್ನೂರು ನಿಂಗಣ್ಣ ರದ್ದೇವಾಡಗಿ, ಇನ್ನಿತರರು ಪಕ್ಷಕ್ಕೆ ಸೇರಿದರು.
ಈ ಒಂದು ಕಾರ್ಯಕ್ರಮದಲ್ಲಿ ರಾಜಶೇಖರ್ ಸಿರಿ, ಷಣ್ಮುಖಪ್ಪ ಹಿರೇಗೌಡ, ಶಿವಕುಮಾರ್ ಕಲ್ಲಾ, ಚಂದ್ರಶೇಖರ್ ಹರನಾಳ, ಸುಭಾಷ್ ಚೆನ್ನುರ, ಚಂದ್ರಶೇಖರ್ ನೀರಡಗಿ, ರಾಜಶೇಖರ್ ಮುತ್ಕೋಡ್, ನೀಲಕಂಠ ಅವಂಟಿ, ರವಿ ಕೋಳಕೂರ್, ಬಸವರಾಜ್ ಹಡಪದ್, ತಿಪ್ಪಣ್ಣ ಗುಂಡುಗುರ್ತಿ, ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.