ಸುದ್ದಿಮೂಲ ವಾರ್ತೆ ರಾಯಚೂರು, .18:
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ತೆಲಂಗಾಣ ರಾಜ್ಯಗಳ ಹೈಕೋರ್ಟ್ ನ್ಯಾಾಯಾಧೀಶರು ಕುಟುಂಬ ಸಮೇತ ಮಂತ್ರಾಾಲಯದ ಶ್ರೀ ರಾಘವೇಂದ್ರ ಸ್ವಾಮೀಗಳ ದರ್ಶನ ಪಡೆದರು.
ಇಂದು ಶ್ರೀಮಠಕ್ಕೆ ಆಗಮಿಸಿದ ಕರ್ನಾಟಕ ಹೈಕೋರ್ಟ್ನ ನ್ಯಾಾಯಾಧೀಶ ರಾಮಚಂದ್ರ ಡಿ.ಉದ್ದಾರ ಹಾಗೂ ತೆಲಂಗಾಣ ಹೈಕೋರ್ಟ್ನ ನ್ಯಾಯಾಧೀಶ ಡಿ.ನಾಗಾರ್ಜುನ ಅವರು ತಮ್ಮ ಕುಟುಂಬದ ಜೊತೆ ಆಗಮಿಸಿ ಮೊದಲಿಗೆ ಶ್ರೀಮಂಚಾಲಮ್ಮ ದೇವಿ ದರ್ಶನ ಪಡೆದರು. ನಂತರ ಶ್ರೀ ರಾಘವೇಂದ್ರ ಸ್ವಾಾಮಿಗಳವರ ಬೃಂದಾವನ ದರ್ಶನ ಪಡೆದು ರಥೋತ್ಸವದಲ್ಲಿ ಪಾಲ್ಗೊೊಂಡರು.
ನಂತರ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರೊಂದಿಗೆ ಮಠದ ಅಭಿವೃದ್ದಿ ಕಾರ್ಯಗಳ ಬಗ್ಗೆ ಮಾಹಿತಿ ಪಡೆದರು. ಇಬ್ಬರು ನ್ಯಾಾಯಾಧೀಶೆ ಹಾಗೂ ಕುಟುಂಬದವರಿಗೆ ಮಂತ್ರಾಕ್ಷತೆ ನೀಡಿ ಹಾರೈಸಿದರು.
ಈ ಸಂದರ್ಭದಲ್ಲಿ ಮಠದ ಸಿಬ್ಬಂದಿಗಳಿದ್ದರು.
ಮಂತ್ರಾಲಯದಲ್ಲಿ ಶಿವರಾತ್ರಿ ಆಚರಣೆ
ಮಂತ್ರಾಲಯ : ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶಿವರಾತ್ರಿ ಹಿನ್ನೆಲೆಯಲ್ಲಿ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶಿವಲಿಂಗಕ್ಕೆ ವಿಶೇಷ ಪೂಜೆ ನೆರವೇರಿಸಿದರು. ವೇದ ಮಂತ್ರಗಳ ಪಠಿಸಿದ ಶ್ರೀಗಳು ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿದರು. ಮಠದ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.