52 ಜೋಡಿಗಳಿಗೆ ಕಲ್ಯಾಣ ಮಹೋತ್ಸವ. ಗ್ರಂಥ ಲೋಕಾರ್ಪಣೆ
ನಮ್ಮ ತಂದೆಯವರ ಮಾರ್ಗದಲ್ಲಿ ನಡೆಯುತ್ತೆವೆ. ದೊಡ್ಡಪ್ಪಗೌಡ ಪಾಟೀಲ
ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದಲ್ಲಿ ದಿ. ಶಿವಲಿಂಗಪ್ಪಗೌಡ ಪಾಟೀಲ್ ನರಿಬೋಳ ರವರ ಪುತ್ಥಳಿ ಅನಾವರಣ, ಗ್ರಂಥ ಲೋಕಾರ್ಪಣೆ ಹಾಗೂ ೫೨ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ವಿವಿಧ ಮಠಾಧಿಶರು ಜೋತಿ ಬೆಳಗಿಸುವದರ ಮುಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜೇವರ್ಗಿ ೨೫ : ಜನಸೇವೆಯನ್ನು ನಮ್ಮ ತಂದೆಯವರು ಮಾಡುತ್ತಿದ್ದರು. ಅವರ ಮಾರ್ಗದಲ್ಲಿಯೇ ನಾವು ನಡೆಯುತ್ತೆವೆ, ಅವರಂತೆ ಜನಸೇವೆಯಲ್ಲಿ ಸದಾ ತೊಡಗುತ್ತೆವೆ ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಅಭಿಮತಪಟ್ಟರು.
ತಾಲೂಕಿನ ನರಿಬೋಳ ಗ್ರಾಮದಲ್ಲಿ ಡಾ. ಧರ್ಮಣ್ಣ ಕೆ ಬಡಿಗೇರ ಬರೆದ ಮರೆಯದ ಮಾಣಿಕ್ಯ ದಿ. ಶಿವಲಿಂಗಪ್ಪಗೌಡ ಪಾಟೀಲ್ ನರಿಬೋಳ ರವರ ಪುತ್ಥಳಿ ಅನಾವರಣ, ಗ್ರಂಥ ಲೋಕಾರ್ಪಣೆ ಹಾಗೂ ೫೨ ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮವು ಶನಿವಾರ ಜರುಗಿತು.
ಕಾರ್ಯಕ್ರಮವನ್ನುದ್ದೇಶಿಸಿ ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ ಜೇವರ್ಗಿಯಲ್ಲಿ ಅನೇಕ ಹೋರಾಟಗಳನ್ನು ನಮ್ಮ ತಂದೆಯವರಾದ ದಿ. ಶಿವಲಿಂಗಪ್ಪಗೌಡ ಪಾಟೀಲ್ ನರಿಬೋಳ ರವರು ಮಾಡಿದ್ದರೆ. ನಮ್ಮ ತಂದೆಯವರ ಪುತ್ಥಳಿ ಅನಾವರಣ ಮಾಡಿದ್ದು ಬಹಳ ಸಂತೋಷವಾಗುತ್ತಿದೆ. ನಮ್ಮ ಇಂದಿನ ಈ ಸ್ಥಾನಕ್ಕೆ ನಮ್ಮ ತಂದೆ ಹಾಗೂ ಗ್ರಾಮದ ಜನರೆ ಕಾರಣ. ಜನರು ನೀಡಿದ ಆಶಿರ್ವಾದದಿಂದಲೆ ಇಂದು ಇಂತಹ ಕಾರ್ಯಕ್ರಮಗಳನ್ನ ಮಾಡುತ್ತಿದ್ದೆವೆ. ನಮ್ಮ ತಂದೆಯವರಂತೆ ಜನಸೇವೆಯನ್ನು ಮಾಡುತ್ತೆವೆ ಅವರ ಮಾರ್ಗದಲ್ಲಿ ಸಾಗುತ್ತೆವೆ. ವಧು ವರರಿಗೆ ಮಂಗಳ ಸೂತ್ರ ಕಾಲುಂಗರ ಹಾಗೂ ಬಟ್ಟಯನ್ನಿ ನೀಡಲಾಗಿದೆ ಎಂದರು.
ನಂತರ ಸೊನ್ನ ಮಠದ ಡಾ. ಶಿವಾನಂದ ಮಹಾಸ್ವಾಮಿ ಮಾತನಾಡಿ ಸಾಮೂಹಿಕ ಮದುವೆಗಳನ್ನು ಮಾಡುವುದು ತುಂಬ ಒಳ್ಳೆಯ ಕೆಲಸ. ಬಡ ಜನರಿಗೆ ಸಹಾಯ ಮಾಡಿದಂತಾಗುತ್ತದೆ. ಮದುವೆ ಮಾಡಿಸುವುದು ಬಡವರಿಗೆ ಸ್ವಲ್ಪ ಹೋರೆ ಕಡಿಮೆ ಮಾಡಿದಂತಾಗುತ್ತದೆ. ಸಾಮೂಹಿಕ ಮದುವೆಗಳಿಂದ ಬಡ ಕುಟುಂಬಗಳಿಗೆ ಅನುಕುಲ ಮಾಡಿದಂತೆ. ಇಂತಹ ಸಾಮೂಹಿಕ ಮದೆವಗಳನ್ನ ಮಾಡುವುದು ಮುಂದುವರೆಸಿ ಎಂದರು.
ಈ ಸಂದರ್ಭದಲ್ಲಿ ವಿವಿಧ ಮಠದ ಮಠಾಧೀಶರು ಉಪಸ್ಥಿತರಿದ್ದರು. ಮಾಲಿಕಯ್ಯ ಗುತ್ತೆದಾರ, ಗುರು ಪಾಟೀಲ್ ಶಿರವಾಳ, ಬಸವರಾಜ ಮತ್ತಿಮುಡ, ಅಮಥ್ಯಪ್ಪ ಕಂದಕೂರ, ಸುರೇಸ ಸಜ್ಜನ್, ರಮೇಶ ಬಾಬು ವಕೀಲ, ಮರೆಪ್ಪ ಬಡಿಗೇರ, ಸಾಯಬಣ್ಣ ದೊಡಮನಿ, ಹಳ್ಳೆಪ್ಪಾಚಾರ್ಯ ಜೋಶಿ, ರಾಜಶೇಖರ ಸೀರಿ, ಬೈಲಪ್ಪ ನೇದಲಗಿ, ವಿಜಯಕುಮಾರ ಹೀರೆಮಠ, ಸಿದ್ದಣ ಹೂಗಾರ, ಸೋಮಶೇಖರ ಹೂಗಾರ, ಶಾಂತಕುಮಾರ ಜಮಖಂಡಿ, ಮರೆಪ್ಪ ಕಂಡಾಳಕರ್, ಶಾಂತರಾಜ ಪಾಟೀಲ್, ಪ್ರಭು ಜಾಧವ್, ವಿಶ್ವನಾಥ ಇಮ್ಮಣ್ಣಿ, ಸಂಗಣ್ಣಗೌಡ ರದ್ದೆವಾಡಗಿ ಸಿದ್ದು ಅಂಗಡಿ, ಸುರೇಶ ಅಂಗಡಿ, ಶರಣು ಸಲಗರ, ರೌಫ್ ಹವಲ್ದಾರ ಪುರಸಭೆ ಮಾಜಿ ಉಪಾಧ್ಯಕ್ಷರಾದ ರಾಜು ರದ್ದೆವಾಗಿ, ಮಲ್ಲಿಕಾರ್ಜುನ್ ಭಜಂತ್ರಿ, ಸಂತೋಷ್ ಮಲ್ಲಾಬಾದ್,ಸೆರಿದಂತೆ ಪುರಸಭೆ ಸದಸ್ಯರು, ಗ್ರಾಮಸ್ಥರು, ಅಭಿಮಾನಿಗಳು ರಾಜಕಿಯ ಮುಖಂಡರು ಉಪಸ್ಥಿತರಿದ್ದರು.