ರಾಷ್ಟ್ರೀಯ ಸಮಾವೇಶಕ್ಕೆ ಬಸ್ಸಿನ ಸೌಕರ್ಯ : ನೀಲಕಂಠ ಅವಂಟಿ
ಜೇವರ್ಗಿ : ರಾಷ್ಟ್ರೀಯ ಲಿಂಗಾಯತ ಮಹಾಸಭಾ ಅಧಿವೇಶನಕ್ಕೆ ಹೋಗಲು ಬಸ್ಸಿನ ಸೌಕರ್ಯ ಮಾಡಲಾಗಿದೆ ಎಂದು ನೀಲಕಂಠ ಆವಂಟಿ ಹೇಳಿದರು.
ದಿನಾಂಕ 4 ಮತ್ತು 5 ರಂದು ಬಸವಕಲ್ಯಾಣದಲ್ಲಿ ನಡೆಯುವ ರಾಷ್ಟ್ರೀಯ ಲಿಂಗಾಯತ್ ಮಹಾ ಅಧಿವೇಶನಕ್ಕೆ ಹೋಗಲು ಜಾಗತಿಕ ಲಿಂಗಾಯತ ಮಹಾಸಭಾ ಜೇವರ್ಗಿ ತಾಲೂಕ ಘಟಕದ ವತಿಯಿಂದ ವಾಹನದ ವ್ಯವಸ್ಥೆ ಮಾಡಲಾಗಿರುತ್ತದೆ ಆದ ಕಾರಣ ಹೋಗಲು ಇಚ್ಚಿಸುವ ಸಮಸ್ತ ಬಸವ ಅಭಿಮಾನಿಗಳು ಸಂಘಟನೆಯ ಕಾರ್ಯದರ್ಶಿಗಳಾದ ಶ್ರೀಯುತ ಅಕಂಡಪ್ಪ ಕಲ್ಲ ಶ್ರೀಯುತ ವಿಶ್ವನಾಥ್ ರೆಡ್ಡಿ ರಾಜಳ್ಳಿ ಮತ್ತು ವೀರನಗೌಡ ಪಾಟೀಲ ಗುಳ್ಯಾಳ ಇವರ ಹತ್ತಿರ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಲು ಅಧ್ಯಕ್ಷರು ಪತ್ರಿಕ ಪ್ರಕಟಣೆ ಮುಖಾಂತರ ಕೋರಿದ್ದಾರೆ.