ಮುಖ್ಯಗುರುಗಳನ್ನು ಅಮಾನತು ಮಾಡಬೇಕು : ಸಿದ್ರಾಮ ಕಟ್ಟಿ
ಹಲಗಿಯನ್ನು ಬಾರಿಸುವುದರ ಮುಲಕ ತಹಸೀಲ್ ಆವರಣದಲ್ಲಿ ಹಲಗಿ ಪ್ರತಿಭಟನೆ ನಡೆಸಲಾಯಿತು.
ಜೇವರ್ಗಿ : ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಸ.ಮಾ. ಪ್ರಾ. ಶಾಲೆಯ ಮುಖ್ಯಗುರಗಳನ್ನು ಅಮಾನತು ಮಾಡಬೇಕು ಹಾಗೂ ಪ್ರತಿಭಟನಕಾರರಿಗೆ ಗುರುತಿನ ಚೀಟಿ ಕೆಳಿ ಅವಮಾನಿಸಿದಕ್ಕಾಗಿ ತಾಲೂಕ ದಂಡಾಧೀಕಾರಿ ಬಹಿರಂಗವಾಗಿ ಕ್ಷಮೇಯಾಚಿಸಬೇಕು ಎಂದು ದಲಿತ ಸಂಘರ್ಷ ಸಮಿತಿ ತಾಲೂಕ ಸಂಚಾಲಕ ಸಿದ್ರಾಮ ಕಟ್ಟಿ ಆಗ್ರಹಿಸಿದರು.
ತಾಲೂಕಿನ ಕಟ್ಟಿಸಂಗಾವಿ ಗ್ರಾಮದಲ್ಲಿ ಶಾಲಾ ಕಟ್ಟಡ ಪ್ರಾರಂಭಿಸಲು ಮತ್ತು ಕಾಮಗಾರಿಗೆ ಗೊಂದಲ ಸೃಷ್ಠಿಸಿರುವ ಮುಖ್ಯಗುರುಗಳ ಅಮಾನತಿಗೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ಜೇವರ್ಗಿ ಶಾಖೆ ಹಾಗೂ ಗ್ರಾಮಸ್ಥರ ನೇತೃತ್ವದಲ್ಲಿ ತಹಸೀಲ್ ಕಚೇರಿ ಮುಂದುಗಡೆ ಅನಿರ್ಧೀಷ್ಟ ಧರಣಿ ನಡೆಸುತ್ತಿದೆ.
ಹಲಗಿ ಚಳುವಳಿಯನ್ನು ಗುರುವಾರ ನಡೆಸಲಾಯಿತು. ಡಾ. ಬಿ. ಆರ್. ಅಂಬೇಡ್ಕರ್ ವೃತ್ತದಿಂದ ತಹಸೀಲ್ ಕಚೇರಿವರೆಗು ಮೆರವಣಿಗೆ ಮುಲಕ ಹಲಗಿ ಚಳುವಳಿಯನ್ನು ಮಾಡಲಾಯಿತು. ಸುಮಾರು ಎರಡು ಘಂಟೆಗಳ ಕಾಲ ತಹಸೀಲ್ ಆವರಣದಲ್ಲಿ ಹಲಗಿ ಬಾರಿಸುವುದರ ಮುಲಕ ಬಿಸಿ ಮುಟ್ಟಿಸಿದರು.
ತಾಲೂಕಿನ ಕಟ್ಟಿಸಂಗಾವಿ ಗ್ರಾಮದ ಶಾಲೆಯ ಮುಖ್ಯಗುರುಗಳು ಶಾಲಾ ಮಕ್ಕಳ ಪಾಲಿಗೆ ಮಲತಾಯಿಯಂತೆ ವರ್ತಿಸುತ್ತಿದ್ದಾರೆ. ಅವರ ಈ ನಡೆಯಿಂದ ಮಕ್ಕಳ ಶಿಕ್ಷಣದ ಮೇಲೆ ಕೇಟ್ಟ ಪರಿಣಾಮ ಬಿರುತ್ತಿದೆ. ಮಕ್ಕಳ ಭವಿಷವನ್ನು ಹಾಳು ಮಾಡಲು ಮುಖ್ಯ ಗುರುಗಳಾದ ವಿಜಯಲಕ್ಷಿ ದೇಸಾಯಿ ಮುಂದಾಗಿದ್ದಾರೆ. ಪಾಲಕರು ಮಕ್ಕಳನ್ನು ಶಿಕ್ಷಣ ಪಡೆಯಲು ಶಾಲೆಗೆ ಕಳುಹಿಸಿದರೆ ಅವರನ್ನು ಜೇವರ್ಗಿ ಗೆ ಕಳುಹಿಸಿ ಕ್ಷೇತ್ರಶಿಕ್ಷಣಧಿಕಾರಿಗಳಿಗೆ ಮನವಿ ನೀಡಲು ಗ್ರಾಮದ ಕೆಲವರ ಜೋತೆ ಕಳುಹಿಸಿ ಅವಕಾಸ ಕಲ್ಪಿಸಿದ್ದಾರೆ.
ಮಕ್ಕಳನ್ನು ತಮ್ಮ ಸ್ವಂತಕ್ಕೆ ಬಳಕೆ ಮಾಡಿಕೊಳುವ ಈ ಮುಖ್ಯಗುರುಗಳು ನಮ್ಮ ಶಾಲೆ ಬೇಡ. ಇವರು ಶಾಲಾ ಕಟ್ಟಡವನ್ನು ತಡೆಹಿಡಿದು ಮಕ್ಕಳ ಭವಿಷ್ಯದ ಜೋತೆ ಆಟವಾಡುತ್ತಿದ್ದಾರೆ. ಶಿತಲಗೊಂಡ ಕಾರಣಕ್ಕೆ ಅಧಿಕಾರಿಗಳು ನೆಲಸಮ ಮಾಡುವಂತೆ ಆದೇಶಿಸಿದರು ಕೂಡ ಕ್ಯಾರೆ ಎನ್ನುತ್ತಿಲ್ಲ. ಇದಕ್ಕೆ ತಾಲೂಕ ದಂಡಾಧಿಕಾರಿ ಸಹಕರಿಸಿದಂತೆ ಕಾಣುತ್ತಿದೆ. ಅದಲದೆ ಪ್ರತಿಭಟನಕಾರರನ್ನು ನಿಮ್ಮ ಗುರುತಿನ ಚೀಟಿ ತೊರಿಸಿ ಎಂದು ಘದರಿಸಿದಕ್ಕೆ ಕ್ಷಮೇಯಾಚಿಸುವಂತೆ ಆಗ್ರಹಿಸಿದರು. ನಂತರ ತಾಲೂಕ ದಂಡಾಧಿಕಾರಿ ಆಗಮಿಸಿ ನನ್ನ ಕಾರ್ಯಗಳ ಒತ್ತಡದಲ್ಲಿ ಹಾಗೆ ಮಾತಡಿದ್ದೆನೆ ಅದಕ್ಕೆ ವಿಷಾದಿಸುತ್ತೆನೆ ಎಂದರು.
ಈ ಸಂದರ್ಭದಲ್ಲಿ ಸಿದ್ರಾಮ ಕಟ್ಟಿ, ಶಿವಕುಮಾರ ಹೇಗಡೆ, ಬಿ. ಎಸ್. ಮಾಲಿಪಾಟೀಲ್, ಮರೆಪ್ಪ ಖಂಡಾಳಕರ್, ಪರಮಾನಂದ ಯಲಗೋಡ, ಸಂತೋಷ ತಳಗೇರಿ, ಬಿರಪ್ಪ ಪೂಜಾರಿ, ಮಹೇಶ ಛತ್ರಿ, ಗಂಗಣ್ಣ ತಳವಾರ, ಸಂಗಣ್ಣ ಹೊಸ್ಮನಿ, ಬಾಬು ಮದರಿ, ಜಯಣ್ಣ ಕಟ್ಟಿಮನಿ, ನಿಂಗಪ್ಪ ಪೂಜಾರಿ, ಮನೋಹರ ಹೊಸ್ಮನಿ, ಶರಣಬಸಪ್ಪ ಕಟ್ಟಿ, ಅಮೃತ್ ಹೊಸ್ಮನಿ, ಮಹಂತೇಶ ದೊಡ್ಮನಿ, ರವಿ ಕುಳಗೇರಿ, ಶ್ರೀಹರಿ ಕರಕಿಹಳ್ಳಿ, ನಾಗರಾಜ ಹೊಸ್ಮನಿ, ರಾಜಶೇಖರ ನರಿಬೋಳ, ಸುನೀಲ್ ರಾಜಾಹುಲಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.