ರೈತರು ತಾವೂ ಉಳಿದು, ಭೂಮಿಯನ್ನೂ ಉಳಿಸಿ, ಜಗತ್ತನ್ನೂ ಉಳಿಸಬೇಕು ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಂಗಳದವರು
ಶ್ರೀ ವಿಶ್ವರಾಧ್ಯರು ಮತ್ತು ಅವರ ಧರ್ಮ ಪತ್ನಿ ಮಾತು ಶ್ರೀ ಬಸವಾಂಬೆ ತಾಯಿಯವರ 72ನೇ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಜೋಡು ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮವನ್ನು ಜ್ಯೋತಿಬೆಳಗಿಸುವ ಮುಲಕ ಉದ್ಘಾಟಿಸಲಾಯಿತು.
ಜಗದ್ಗುರು ಪಂಚಾಚಾರ್ಯರ ಅಡ್ಡ ಪಲ್ಲಕ್ಕಿ ಉತ್ಸವವನ್ನು ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ
ಜೇವರ್ಗಿ 17 : ಶಕಾಪುರ ಶ್ರೀಗಳು ಕಾಶೀ ಮತ್ತು ಶ್ರೀಶೈಲ ಪೀಠಗಳಲ್ಲಿ ಸಾವಿರಾರು ಭಕ್ತರೊಂದಿಗೆ ತೆರಳಿ ಜಗದ್ಗುರು ಪಂಚಾಚಾರ್ಯರ ಅಡ್ಡ ಪಲ್ಲಕ್ಕಿ ಉತ್ಸವವನ್ನು ಮಾಡಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಕಾಶೀಪೀಠದ ಡಾ. ಮಲ್ಲಿಕಾರ್ಜುನ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಂಗಳದವರು ಅಭಿಮತಪಟ್ಟರು.
ತಾಲೂಕಿನ ಶಕಾಪುರ ಗ್ರಾಮದ ಆರಾಧ್ಯ ದೈವ ಸದ್ಗುರು ಶ್ರೀ ವಿಶ್ವರಾಧ್ಯರು ಮತ್ತು ಅವರ ಧರ್ಮ ಪತ್ನಿ ಮಾತು ಶ್ರೀ ಬಸವಾಂಬೆ ತಾಯಿಯವರ 72ನೇ ಜಾತ್ರಾ ಮಹೋತ್ಸವ ಅಂಗವಾಗಿ ಗುರುವಾರ ಜೋಡು ರಥೋತ್ಸವ ಹಾಗೂ ವಿವಿಧ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಡಾ. ಸಿದ್ದರಾಮಯ್ಯ ಶಿವಾಚಾರ್ಯ ನೇತೃತ್ವದಲ್ಲಿ ಜರುಗಿತು.
ವಿಶ್ವಾರಾಧ್ಯ ಬಸವಾಂಬೆಯವರು ಶಿವಶಕ್ತಿಯಾಗಿ ಈ ಭಾಗದ ಭಕ್ತ ಸಮೂಹಕ್ಕೆ ಬೆಳಕಾಗಿದ್ದಾರೆ. ರೈತರು ದೃತಿಗೆಡಬಾರದು. ಸಾವಯವ ಕೃಷಿ ಮಾಡುವ ಮೂಲಕ ತಾವೂ ಉಳಿದು, ಭೂಮಿಯನ್ನೂ ಉಳಿಸಿ ಜಗತ್ತನ್ನೂ ಉಳಿಸಬೇಕು. ಮುಂದಿನ ದಿನಗಳಲ್ಲಿ ಸಾಧಕ ರೈತರಿಗೆ “ಕೃಷಿ ಋಷಿ” ಮತ್ತು ಕೃಷಿ ಮಹಾತ್ಮ ಪ್ರಶಸ್ತಿ ಪ್ರದಾನ ಮಾಡುವಂತೆ ಶಕಾಪುರ ಶ್ರೀಗಳಿಗೆ ಸೂಚಿಸಿದರು
ನಂತರ ಶಿವರಾಜ ಪಾಟೀಲ್ ರದ್ದೇವಾಡಗಿ ಮಾತನಾಡಿ ಕಾಶೀ ಕ್ಷೇತ್ರದಷ್ಟೆ ಪವಿತ್ರ ಕ್ಷೇತ್ರವಾಗುತ್ತಿದೆ ಶಕಾಪುರ ಕ್ಷೇತ್ರ. ಭಕ್ತರ ನೇಚಿನ ಆರಾಧ್ಯರಾಗುತ್ತಿದ್ದಾರೆ. ಕಾಶೀಗೆ ಹೋಗಲು ಆಗದವರ ಹತ್ತಿರವೆ ಕಾಶೀಯನ್ನು ಸೃಷ್ಠಿಸಿದ್ದಾರೆ. ಭಕ್ತರರನ್ನು ಕೈಬಿಡದೆ ಅವರ ಸಮಸ್ಯೆಗಳನ್ನು ಬಗೆಹರಿಸುತ್ತಾರೆ ಎಂದರು.
ಮಾರ್ಚ್ 8 ರಿಂದ 15 ರವರೆಗೆ ಶ್ರೀಮಠದಲ್ಲಿ ಸದ್ಗುರು ಕೂರಿಸಿದ್ದೇಶ್ವರ ಪುರಾಣ ಕಾರ್ಯಕ್ರಮ ನಡೆಸಲಾಯಿತು, ಜಾತ್ರಾ ಮಹೋತ್ಸವಕ್ಕೂ ಮುಂಚೆ ಮಾರ್ಚ್ 14 ಮತ್ತು 15 ರಂದು ಜೊಗೂರಿನಿಂದ ಮುಕ್ತಿ ಕ್ಷೆತ್ರ ಶಕಾಪುರಕ್ಕೆ ಶ್ರೀಗಳ ನೇತೃತ್ವದಲ್ಲಿ ನೂರಾರು ಜನರು ಪಾದಯಾತ್ರೆ ನಡೆಸಿದರು. ಮಾರ್ಚ್ 16 ರಂದು ಬೆಳಿಗ್ಗೆ 6:00 ಸದ್ಗುರು ವಿಶ್ವರಾಧ್ಯರ ಕರ್ತೃ ಗದಿಗೆ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ ನಡೆಯಿತು. ಸಂಜೆ 4:00ಗೆ ಕಾಶಿಪೀಠದ ನೂತನ ಜಗದ್ಗುರು ಡಾ. ಮಲ್ಲಿಕಾರ್ಜುನ್ ವಿಶ್ವರಾಧ್ಯ ಶಿವಾಚಾರ್ಯ ಭಗವತ್ಪಾದಂಗಳದವರ ಅಡ್ಡ ಪಲ್ಲಕ್ಕಿ ಉತ್ಸವ ನಡೆಯಿತು. ಸಂಜೆ 8 ಗಂಟೆಗೆ ಸಹಸ್ರಾರು ಭಕ್ತರ ಮಧ್ಯೆ ಅದ್ದೂರಿಯಾಗಿ ಜೋಡು ರಥೋತ್ಸವ ಜರಗಿತು ರಥದ ಮೇಲೆ ಭಕ್ತರು ಬಾಳೆಹಣ್ಣು ಉತ್ತತ್ತಿ ಬಾದಾಮಿ ಎಸೆದು ಹರಕೆ ತೀರಿಸಿದರು.
ಈ ಸಂದರ್ಭದಲ್ಲಿ ತಪೋವನ ಮಠ ಶಕಾಪುರದ ಶ್ರೀ. ಷ.ಬ್ರ. ಡಾ. ಸಿದ್ಧರಾಮ ಶಿವಾಚಾರ್ಯರು, ಪಾಳ ಮಠದ ಪರಮಪೂಜ್ಯ ಡಾ. ಗುರುಮುರ್ತಿ ಶಿವಾಚಾರ್ಯರು, ಆಂದೋಲಾ ಕರುಣೇಶ್ವರ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮಿ, ಸಿದ್ದರೇಣುಕಾ ಶಿವಾಚಾರ್ಯರು, ಮರಳಸಿದ್ಧ ದೇವರು, ಗುರುಸ್ವಾಮಿ ಶರಣರು, ಚಂದ್ರಶೇಖರ ಶರಣರು, ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕುರ್, ಶಿವರಾಜ ಪಾಟೀಲ್ ರದ್ದೇವಾಡಗಿ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಸರ್ವಭಕ್ತರು ಪಾಲ್ಗೊಂಡಿದ್ದರು. ಡಾ. ಮಹಾಂತೇಶಗೌಡ ಪಾಟೀಲ್ ನಿರಿಪಿಸಿದರು.