ಸುದ್ದಿಮೂಲ ವಾರ್ತೆ
ತಿಪಟೂರು : ತುಮಕೂರು ಜಿಲ್ಲೆಯಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ವಿಜಯ ಸಂಕಲ್ಪ ಯಾತ್ರೆಗೆ ಅಭೂತಪೂರ್ವ ಸ್ಪಂದನೆ ದೊರೆತಿದ್ದು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳನ್ನು ಗೆಲ್ಲಿಸಲು ಬಿ.ಜೆ.ಪಿ ಕಾರ್ಯಕರ್ತರುಗಳು ಮುಂದಿನ ಎರಡೂವರೆ ತಿಂಗಳು ಅವಿಶ್ರಾಂತರಾಗಿ ಶ್ರಮಿಸಬೇಕೆಂದು ಬಿ.ಜೆ.ಪಿ ಸ್ಥಾಪಕ ಸದಸ್ಯ ಕೆ.ಎಸ್.ಸದಾಶಿವಯ್ಯ ಕರೆನೀಡಿದ್ದಾರೆ.
ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುವ ಅವರು ಬಿ.ಜೆ.ಪಿ ಪಕ್ಷ ಬಿ.ಎಸ್.ಯಡಿಯೂರಪ್ಪನವರನ್ನು ಕಡೆಗಣಿಸುತ್ತಿದೆ ಎಂದು ವಿರೋಧ ಪಕ್ಷದವರು ಅಪಪ್ರಚಾರಮಾಡುತ್ತಾ ವೀರಶೈವಲಿಂಗಾಯತ ಬಂದುಗಳಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಬಿ.ಜೆ.ಪಿ ಪಕ್ಷ ನನ್ನನ್ನು ಕಡೆಗಣಿಸಿಲ್ಲಿ, ನಾನು ಸ್ವಇಚ್ಚೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ, ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಲ್ಲರೂ ಒಟ್ಟಾಗಿ ಚುನಾವಣೆ ಎದುರಿಸುತ್ತಿದ್ದೇವೆ. ಆದ್ದರಿಂದ ವೀರಶೈವ ಲಿಂಗಾಯತ ಬಂದುಗಳು ವಿಚಲಿತರಾಗದೇ ಮತ್ತೊಮ್ಮೆ ಹೆಚ್ಚಿನ ಸಂಖ್ಯೆಯಲ್ಲಿ ಬಿ.ಜೆ.ಪಿ ಅಭ್ಯರ್ಥಿಗಳನ್ನು ಗೆಲ್ಲಿಸಿ ಎಂದು ಜಿಲ್ಲೆಯಲ್ಲಿ ನಡೆದ ವಿಷಯ ಸಂಕಲ್ಪ ಯಾತ್ರೆಯಲ್ಲಿ ಭಾಗವಹಿಸಿ ಬಿಎಸ್ವೈ ಕರೆನೀಡಿದ್ದಾರೆ. ಹಾಗಾಗಿ ಯಾರೂ ಗೊಂದಲಕ್ಕೆ ಒಳಗಾಗಬಾರದು ಎಂದರು.
ಯಡಿಯೂರಪ್ಪನವರು ಯಾವತ್ತು ವೀರಶೈವ ಲಿಂಗಾಯತ ಸಮಾಜದ ಪ್ರಶ್ನಾತೀತ ನಾಯಕರು. ಅವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಡಳಿತದ ಚುಕ್ಕಾಣಿ ಹಿಡಿದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಾ ನವ ಭಾರತಕ್ಕಾಗಿ-ನವಕರ್ನಾಟಕ ಎಂಬ ಧ್ಯೇಯದಿಂದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಕಾರ್ಯ ನಡೆಯುತ್ತಿದೆ. ಆದ್ದರಿಂದ ಮತ್ತೊಮ್ಮೆ ರಾಜ್ಯದಲ್ಲಿ ಬಿ.ಜೆ.ಪಿ ಜನಪರ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸೊಣವೆಂದು ಕೆ.ಎಸ್.ಸದಾಶಿವಯ್ಯ ಮನವಿ ಮಾಡಿದ್ದಾರೆ.