ಸುದ್ದಿಮೂಲ ವಾರ್ತೆ
ಆನೇಕಲ್, ಮಾ.23: ಕಾವ್ಯ ಮನಸ್ಸಿನಿಂದ ಉಂಟಾಗುವ ಬೆಳಕು ಎಂದು ಹಿರಿಯ ಸಾಹಿತಿ ಡಾ. ತಾ ನಂ ಕುಮಾರಸ್ವಾಮಿ ಹೇಳಿದರು
ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ಚಿಕ್ಕೆರೆಯ ರಾಜಕುಮಾರ್ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ವಸಂತ ಗೀತ ಗಾಯನ ಹಾಗೂ ಯುಗಾದಿ ಕವಿಗೋಷ್ಠಿ ಕಾರ್ಯಕ್ರದಲ್ಲಿ ಅವರು ಮಾತನಾಡಿದರು.
ಶ್ರೇಷ್ಠ ಕವಿಗಳು ಅಧ್ಯಯನಶೀಲರಾಗಿ ಪಡೆದುಕೊಂಡ ಅನುಭವವನ್ನು ಕವಿತೆಗಳಾಗಿ ಹೊರ ತಂದು ಸಮಾಜಕ್ಕೆ ಹಂಚುತ್ತಾರೆ ಪರಂಪರೆಯನ್ನು ಉಳಿಸಿಕೊಳ್ಳಲು ಕವಿಗಳು ಬಹಳ ಮುಖ್ಯವಾಗುತ್ತಾರೆ ಎಂದು ಅಭಿಪ್ರಾಯಪಟ್ಟರು
ಕಾರ್ಯಕ್ರಮದ ಆಶಯ ಭಾಷಣವನ್ನು ಮಾಡಿದ ಪ್ರಜ್ವಲ್ ಪ್ರಕಾಶನದ ಪ್ರಕಾಶಕರು ಹಾಗೂ ಹಿರಿಯ ಹೋರಾಟಗಾರರಾದ ಜಿಗಣಿ ಶಂಕರ್, ಸಮಾಜದಲ್ಲಿ ಅನೇಕರ ಋಣವನ್ನು ಉಂಡು ಬೆಳೆದಿರುತ್ತೇವೆ. ಆದರೆ ಅವರ ಋಣವನ್ನ ತೀರಿಸಲು ಮನುಷ್ಯ ವಿಫಲನಾಗುವುದು ಬಹಳ ಸೋಜಿಗ ಎನಿಸುತ್ತದೆ. ಕಾಲ ಎಲ್ಲವನ್ನು ನಿರ್ಧರಿಸುವ ಅದ್ಭುತ ಗುರುವಾಗಿದೆ ಸಾಹಿತಿಗಳು ಸಮಾಜದ ಆಸ್ತಿ ಇವರಿಂದ ಶಾಂತಿ ಸಮಾಧಾನ ಪ್ರೀತಿ ಮಮಕಾರಗಳು ದೊರೆಯುತ್ತವೆ ಎಂದು ತಿಳಿಸಿದರು.
ಹಿರಿಯ ಲೇಖಕರಾದ ಜಗನ್ನಾಥ್ ರಾವ್ ಬಹುಳೆ ಮಾತನಾಡಿ, ಕವಿ ಓದಿನ ತಪಸ್ಸಿನಲ್ಲಿ ಮುಳುಗಿ ಬಂದ ಅನುಭವವನ್ನು ಕವಿತೆಯಾಗಿಸಿದರೆ ಉತ್ಕೃಷ್ಟ ಕವಿತೆಯನ್ನು ಕಾಣಬಹುದಾಗಿದೆ ಎಂದರು.