ಸುದ್ದಿಮೂಲ ವಾರ್ತೆ
ಬೆಂಗಳೂರು, ಮಾ.-24: ಗೋವಿಂದರಾಜ ನಗರ ಕ್ಷೇತ್ರದ ಮೂಡಲಪಾಳ್ಯದಲ್ಲಿ ಶ್ರೀ ವಿಶ್ವಕರ್ಮ ಕಾರ್ಮಿಕರ ಸೇವಾ ಸಂಘದಿಂದ ನೂತನವಾಗಿ ನಿರ್ಮಿಸಲಾದ ಶ್ರೀ ಕಾಳಿಕಾದೇವಿ ಹಾಗೂ ಶ್ರೀ ಮೌನೇಶ್ವರರ ದೇವಸ್ಥಾನವನ್ನು ವಸತಿ ಸಚಿವ ವಿ. ಸೋಮಣ್ಣ ಉದ್ಘಾಟಿಸಿದರು.
ಶಹಪುರದ ಶ್ರೀ ಅಜ್ಜೇಂದ್ರ ಮಹಾಸ್ವಾಮಿಗಳು ಹಾಗೂ ಶ್ರೀ ಕಾಳಹಸ್ತೇಂದ್ರ ಮಹಾಸ್ವಾಮಿಗಳ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನೆರವೇರಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಮೌನೇಶ ಬಡಿಗೇರ ಹಾಗೂ ಉಪಾಧ್ಯಕ್ಷರಾದ ಗುರುನಾಥ ಬಡಿಗೇರ, ಸಂಘಟನಾ ಕಾರ್ಯದರ್ಶಿ ದೇವೆಂದ್ರ ಸಗರ ಹಾಗೂ ಬೆಂಗಳೂರು ನಗರದ ಉತ್ತರ ಕರ್ನಾಟಕ ವಿಶ್ವಕರ್ಮ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ನಾಗೇಂದ್ರ ಕಮ್ಮಾರ ಹಾಗೂ ಪ್ರಧಾನಕಾರ್ಯದರ್ಶಿ ವಿಜಯಕುಮಾರ ಪತ್ತರಾ , ದ್ಯಾಮಣ್ಣ ಬಡಿಗೇರ, ವಾಸುದೇವ ಆಚಾರ, ಮಹೇಶ ವಕೀಲರು, ಇತರ ಪದಾಧಿಕಾರಿಗಳು ಹಾಗೂ ಇನ್ನಿತರ ಸಮಾಜ ಮುಖಂಡರು ಉಪಸ್ಥಿತರಿದ್ದರು.