ಕಲಬುರಗಿ: ರಾಜ್ಯ ವಿಧಾನ ಸಭೆ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸಿರುವ ಕಾಂಗ್ರೆಸ್ ಪಕ್ಷ ಚುನಾವಣೆ ಘೋಷಣೆ ಮುನ್ನವೇ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಕಲಬುರಗಿ ಜಿಲ್ಲೆಯ 9 ಮತಕ್ಷೇತ್ರಗಳಲ್ಲಿ 6 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
[contact-form][contact-field label=”Name” type=”name” required=”true” /][contact-field label=”Email” type=”email” required=”true” /][contact-field label=”Website” type=”url” /][contact-field label=”Message” type=”textarea” /][/contact-form]
ಜಿಲ್ಲೆಯ ಜೇವರ್ಗಿ ಮತಕ್ಷೇತ್ರಕ್ಕೆ ಡಾ. ಅಜಯ ಧರ್ಮ ಸಿಂಗ್, ಚಿತ್ತಾಪುರ(ಮೀಸಲು) ಮತಕ್ಷೇತ್ರಕ್ಕೆ ಪ್ರಿಯಾಂಕ್ ಖರ್ಗೆ, ಸೇಡಂ ನಿಂದ ಡಾ. ಶರಣಾಪ್ರಕಾಶ್ ಪಾಟೀಲ್, ಚಿಂಚೋಳಿ (ಮೀಸಲು) ಸುಭಾಷ್ ರಾಠೋಡ್, ಕಲಬುರಗಿ ಉತ್ತರ ಖನಿಜಾ ಫಾತಿಮಾ ಹಾಗೂ ಆಳಂದ ಕ್ಷೇತ್ರಕ್ಕೆ ಬಿ. ಆರ್. ಪಾಟೀಲ್ ಅವರ ಹೆಸರು ಘೋಷಣೆ ಮಾಡಿದೆ.
ಇನ್ನೂ, ಜಿಲ್ಲೆಯ ಕಲಬುರಗಿ ದಕ್ಷಿಣ, ಕಲಬುರಗಿ ಗ್ರಾಮೀಣ ಹಾಗೂ ಅಫಜಲಪೂರ್ ಕ್ಷೇತ್ರಗಳಿಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಗಳ ಘೋಷಣೆ ಮಾಡಿಲ್ಲ. ಅಫಜಲಪೂರ್ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ನ ಎಂ ವೈ ಪಾಟೀಲ್ ಅವರು ಶಾಸಕರಾಗಿದ್ದಾರೆ. ಆದರೂ ಅವರ ಹೆಸರು ಮೊದಲ ಪಟ್ಟಿಯಲ್ಲಿ ಇಲ್ಲದಿರುವುದು ಕುತೂಹಲ ಮೂಡಿಸಿದೆ.