ಸುದ್ದಿಮೂಲ ವಾರ್ತೆ
ಹೊಸಕೋಟೆ, ಮಾ.25: ರಾಜ್ಯದಲ್ಲಿ ನಿರಂತರವಾಗಿ ಅನಿರ್ದಿಷ್ಟ ಮುಷ್ಕರ ಪ್ರತಿಭಟನೆ ಹೋರಾಟಗಳ ಮೂಲಕ ಮಾದಿಗ ಸಮುದಾಯಕ್ಕೆ ಒಳ ಮೀಸಲಾತಿ ಜಾರಿಗೆ ತಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ನಗರಸಭೆ ಸದಸ್ಯ ಗಣೇಶ್ ತಿಳಿಸಿದರು.
ನಗರದ ಕೆಇಬಿ ವೃತ್ತದಲ್ಲಿ ಮಾದಿಗ ಸಮುದಾಯದ ವತಿಯಿಂದ ರಾಜ್ಯ ಸರ್ಕಾರ ನೀಡಿದ ಒಳ ಮೀಸಲಾತಿ ವರದಿಯನ್ನು ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಮ್ಮತಿಸಿ ಆದೇಶ ಹೊರಡಿಸಿದ್ದ ಹಿನ್ನೆಲೆಯಲ್ಲಿ ನಗರದ ಕೆಇಬಿ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿ ಹಚ್ಚುವ ಮೂಲಕ ಘೋಷಣೆಗಳನ್ನು ಕೂಗಿ ಸಂತಸ ವ್ಯಕ್ತಪಡಿಸಿ, ರಾಜ್ಯ ಸರ್ಕಾರಕ್ಕೆ ಧನ್ಯವಾದಗಳು ಸಮರ್ಪಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿ. ರಾಜ್ಯದಲ್ಲಿ ಕಳೆದ 30 ದಶಕಗಳಿಂದ ಮಾದಿಗ ಸಮುದಾಯದ ಒಳ ಮೀಸಲಾತಿಯನ್ನು ಜಾರಿಗೆ ತರುವಂತೆ ಅನೇಕ ಹೋರಾಟಗಳನ್ನು ಮಾಡಿ ಸಮುದಾಯದ ಮುಖಂಡರುಗಳು ಸರ್ಕಾರಕ್ಕೆ ಒತ್ತಾಯ ನೀಡಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಒಪ್ಪಿಕೊಂಡು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಬಹುದಿನಗಳ ಬೇಡಿಕೆಯಾದ ಮನವಿಯನ್ನು ರಾಜ್ಯ ಸರ್ಕಾರ ಪುರಸ್ಕರಿಸಿ ಇಂದು ನೀಡಿದ ಸಾಮಾಜಿಕ ನ್ಯಾಯಕ್ಕಾಗಿ ಸರ್ಕಾರಕ್ಕೆ ಅಭಿನಂದನೆಗಳನ್ನು ತಿಳಿಸುತ್ತೇವೆ.
ಮುಂದಿನ ದಿನಗಳಲ್ಲಿ ನಮಗೆ ದೊರಕಬಹುದಾದ ಶೇಕಡ 6 ಆರದಷ್ಟು ಶೈಕ್ಷಣಿಕ ಉದ್ಯೋಗ ಮೀಸಲಾತಿಗಳಲ್ಲಿ ನಮ್ಮ ಸಮುದಾಯಕ್ಕೆ ಆದ್ಯತೆ ನೀಡಿ ಎಲ್ಲರಂತೆಯೂ ಕೂಡ ನಮ್ಮ ಸಮುದಾಯ ಸಮಾಜದ ಮುಖ್ಯ ವಾಹಿನಿಯಲ್ಲಿ ಬರುವಂತೆ ಸಹಕಾರ ನೀಡಬೇಕೆಂದು ತಿಳಿಸಿದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಮುಖ್ಯಮಂತ್ರಿ ಎಸ್ ಬೊಮ್ಮಾಯಿರವರನ್ನ ಸ್ವಾಗತಿಸುತ್ತೇವೆ ಮುಂದಿನ ದಿನಗಳಲ್ಲಿ ಬಿಜೆಪಿ ಪಕ್ಷಕ್ಕೆ ಮಾದಿಗ ಸಮುದಾಯದ ಬೆಂಬಲವನ್ನ ಸೂಚಿಸುತ್ತೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಮಂಜು ಸೂರ್ಯ, ನಗರಸಭೆ ಸದಸ್ಯರಾದ ಗಣೇಶ್, ಶೋಭಾ ಶಿವನಂದ, ಕವಿತಾ ಗಂಗರಾಜ್, ಮಾಜಿ ಆರಾಧನಾ ಕಮಿಟಿ ಸದಸ್ಯರಾದ ಕೆ ನರಸಿಂಹಯ್ಯ, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಪ್ಪ ಅನೇಕ ಮುಖಂಡರುಗಳು ಇದ್ದರು.