ಸುದ್ದಿಮೂಲ ವಾರ್ತೆ
ಕೆಜಿಎಫ್, ಮಾ.25: ಕ್ಷೇತ್ರದ ಮಹಿಳೆಯರು ಮತ್ತು ರೈತರು ಡಿ.ಸಿ.ಸಿ ಬ್ಯಾಂಕ್ ಮೂಲಕ ಸಾಲವನ್ನು ಪಡೆಯುವುದರ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಂಡು ಸ್ವಾವಲಂಬಿಯಾಗಬೇಕು ಎಂದು ಶಾಸಕಿ ರೂಪಕಲಾ ಹೇಳಿದರು. ಕೆಜಿಎಫ್ ತಾಲ್ಲೂಕಿನ, ಬೇತಮಂಗಲ ವ್ಯವಸಾಯ ಸೇವಾ ಸಹಕಾರ ಸಂಘದ ವ್ಯಪ್ತಿಯ 13 ಮಹಿಳಾ ಸಂಘದವರಿಗೆ 63.16ಲಕ್ಷ ಹಾಗೂ 6ರೈತರಿಗೆ 8.70 ಲಕ್ಷ ಸಾಲವನ್ನು ವಿತರಣೆ ಮಾಡಿ ಮಾತನಾಡಿದರು. ಡಿ.ಸಿ.ಸಿ ಬ್ಯಾಂಕ್ ಮಹಿಳೆಯರ ಹಾಗೂ ರೈತರ ಪರವಾಗಿದೆ. ಯಾವುದೇ ಹೆಣ್ಣು ಮಗು ತಮ್ಮ ಸ್ವ ಉದ್ಯೋಗವನ್ನು ಮಾಡುವುದಕ್ಕೆ ಎಲ್ಲಾ ರೀತಿಯ ಸಹಕಾರ ಮಾಡುತ್ತಿದೆ. ಸಾಲವನ್ನು ಪಡೆಯುವ ಮಹಿಳೆಯರು ಹಾಗೂ ರೈತರು ಸರಿಯಾದ ಸಮಯಕ್ಕೆ ಸಾಲವನ್ನು ಮಾರುಪಾವತಿ ಮಾಡಿ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಲವನ್ನು ಪಡೆಯಬಹುದು ಎಂದು ತಿಳಿಸಿದ್ದಾರೆ. ವಿರೋದಿಗಳಿಗೆ ಟಾಂಗ್: ಯುಗಾದಿ ಹಬ್ಬದ ಆಹಾರ ಕಿಟ್ಟುಗಳನ್ನು ವಿತರಣೆ ಮಾಡಲ್ಲು ಕೆಲ ವಿರೋದಿಗಳು ತೊಂದರೆ ಮಾಡಿದರು. ಅದರು ಕೈಲಾದಷ್ಟು ಬಡವರಿಗೆ ಹಬ್ಬಕ್ಕೆ ಸಹಾಯಮಾಡಿದ್ದೇನೆ. ಎಷ್ಟೇ ದುಷ್ಟಶಕ್ತಿಗಳು ಎದರುಬಂದರುನ್ನು ಬಡವರ ಸೇವೆ ನಿಲ್ಲುವುದಿಲ್ಲವೆಂದು ವಿರೋದಿಗಳಿಗೆ ಟಾಂಗ್ ಕೊಟ್ಟರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯಿತಿ ಅ.ಮು.ಲಕ್ಷ್ಮೀ ನಾರಾಯಣ, ಸೊಸೈಟಿ ಅಧ್ಯಕ್ಷ ಪ್ರಸನ್ನ, ನಿರ್ದೇಶಕರಾದ ವೆಂಕಟಚಲಪತಿ, ಸುರೇಂದ್ರಗೌಡ, ಶಂಕರ್, ಗ್ರಾ.ಪಂ ವಿನೂಕಾರ್ತಿಕ್, ನೂರಾರು ಮಹಿಳೆಯರು ಉಪಸ್ಥಿತರಿದರು.