ಜೇವರ್ಗಿಗೆ ೯ ಕೋಟಿ ರೂಪಾಯಿ ಅನುಧಾನ ಬಿಡುಗಡೆ, ಹಲವು ಕಾಮಗಾರಿಗಳಿಗೆ ಚಾಲನೆ
ದ್ವೇಶದ ರಾಜಕಾರಣ ನಮ್ಮ ಕುಟುಂಬಕ್ಕೆ ಗೊತ್ತಿಲ್ಲ : ಡಾ. ಅಜಯಸಿಂಗ್
ಪಟ್ಟಣದ ಮಾಳಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ. ಅಜಯಸಿಂಗ್ ಪುರಸಭೆ ಅಧ್ಯಕ್ಷ ಗಂಗೂಬಾಯಿ ಜಟ್ಟಿಂಗರಾಯ ಮಂದ್ರವಾಡ ಶಂಕುಸ್ಥಾಪನೆ ನೇರವೆರಿಸಿದರು.
ಜೇವರ್ಗಿ ೨೬ : ನಮ್ಮ ಕಟುಂಬದಲ್ಲಿ ದ್ವೇಶದ ರಾಜಕಾರಣ ಮಾಡುವುದು ಗೊತ್ತಿಲ್ಲ. ನಮ್ಮ ತಂದೆಯವರು ಯಾರಿಗು ಕೆಟ್ಟದನ್ನ ಬಯಸಿಲ್ಲ, ಕೆಟ್ಟದನ್ನ ಬಯಸಿದವರಿಗು ಒಳ್ಳೆಯದನ್ನ ಬಯಸಿದ್ದಾರೆ ಎಂದು ಶಾಸಕ ಡಾ. ಅಜಯಸಿಂಗ್ ಮಾತನಾಡಿದರು.
ಪಟ್ಟಣದ ಕನಕದಾಸ ವೃತ್ತದಲ್ಲಿ ಪುರಸಭೆ ಹಾಗೂ ಪೌರಾಡಳಿತ ಇಲಾಖೆ ವತಿಯಿಂದ ವಿವಿದ ಕಾಮಗಾರಿಗಳಿಗೆ ಚಾಲನೆ ಹಾಗೂ ಅಡಿಗಲ್ಲು ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನುದ್ದೆಶಿಸಿ ಶಾಸಕ ಡಾ. ಅಜಯಸಿಂಗ ಮಾತನಾಡಿ ನಾವು ನಮ್ಮ ಕೆಲಸವನ್ನು ಮಾಡಬೇಕು, ಟೀಕೆ ಮಾಡುವವರು ಟೀಕೆ ಮಾಡಲಿ, ನಮ್ಮ ಕಾರ್ಯದಲ್ಲಿ ನಾವು ಪ್ರವೃತ್ತರಾಗಬೇಕು. ನಮ್ಮ ಗುರಿ ಒಂದೆ ಕ್ಷೇತ್ರ ಅಭಿವೃದ್ದಿ ಮಾಡುವುದು. ಪಕ್ಷ ಭೇದ ಮರೆತು ಜೇವರ್ಗಿ ಮತಕ್ಷೇತ್ರಕ್ಕೆ ದುಡಿಯೋಣ. ನಮ್ಮ ಕುಟುಂಬದಲ್ಲಿ ಯಾರಿಗು ದ್ವೇಶದ ರಾಜಕಾರಣ ಮಾಡುವುದು ಗೊತ್ತಿಲ್ಲ, ನಾವು ಮಾಡುವುದಕ್ಕು ಹೋಗುವುದಿಲ್ಲ. ಕ್ಷೇತ್ರದ ಜನರಿಗೆ ನಮ್ಮ ತಂದೆಯ ಮೇಲೆ ಅಭಿಮಾನವಿದೆ ಅವರಂತೆ ನಾನು ಕೆಲಸ ಮಾಡುತ್ತಿದ್ದೆನೆ. ಕೇತ್ರದ ಜನರು ನಮ್ಮ ತಂದೆಯವರಿಗು ಆಶಿರ್ವದಿಸಿದ್ದಾರೆ. ಅದರಂತೆ ನನಗು ಆಶೀರ್ವದಿಸಿದ್ದಾರೆ. ಮುಂದೆಯು ಮತ್ತೆ ನಮಗೆ ಬಹುಮತದ ಅಂತರದಿoದ ಗೆಲ್ಲಿಸುತ್ತಾರೆ. ಜನ ಸೇವೆಗೆ ಮತ್ತೆ ಅವಕಾಸ ನೀಡುತ್ತಾರೆ.
ವಿವಿಧ ವಾರ್ಡ್ಗಳಲ್ಲಿ ರಸ್ತೆ, ಚರಂಡಿ, ಮಟನ್ ಮಾರ್ಕೆಕಟ್, ಉದ್ಯಾನ ಅಭಿವೃದ್ದಿ ಹಾಗೂ ಕುಡಿಯಿವ ನೀರಿನ ಕಾಮಗಾರಿಗಳಿಗೆ ೫. ೮೩ ಕೋಟಿ ಬಿಡುಗಡೆ ಮಾಡಲಾಯಿತು. ಕೆ ಕೆ ಆರ್ ಡಿ ಬಿ ಯೋಜನೆ ಅಡಿಯಲ್ಲಿ ಟೌನ್ ಹಾಲ್ ಪೀಟೋಪಕರಣ, ಕಾಂಪೌoಡ್ ನಿರ್ಮಾಣ ೪೦ ಲಕ್ಷ, ಪದವಿ ಪೂರ್ವ ಕಾಲೇಜಿನ ೩ ಕೋಣೆಗಳಿಗೆ ೩೨ ಲಕ್ಷ, ಮೇಟ್ರಿಕ್ ನಂತರದ ಬಾಲಕರವವಸತಿ ನಿಲಯದ ನಿರ್ಮಾಣಕ್ಕೆ ೨. ೯೮ ಕೋಟಿ, ಅಲ್ಪಸಂಖ್ಯಾತರ ಮೇಟ್ರಿಕ್ ಪೂರ್ವ ಬಾಲಕರ ನಿಲಯ ನಿರ್ಮಾಣಕ್ಕೆ ೧. ೪೯ ಕೋಟಿ ಸೇರಿದಂತೆ ಅನೇಕ ಕಾಮಗಾರಿಗಳಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು ೯ ಕೋಟಿ ಅನುಧಾನ ಬಿಡುಗಡೆ ಮಾಡಲಾಗಿದೆ ಅದರ ಕಾಮಗಾರಿ ಗುಣಮಟ್ಟ ಉತ್ತಮವಾಗಿರಬೇಕು ಎಂದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ಗಂಗೂಬಾಯಿ ಜಟ್ಟಿಂಗರಾಯ ಮಂದ್ರವಾಡ, ಉಪಾಧ್ಯಕ್ಷ ಸಂಗಣ್ಣಗೌಡ ಪಾಟೀಲ್, ಪುರಸಭೆ ಮುಖ್ಯಾಧೀಕಾರಿ ಸಂಗೀತಾ ಹಿರೇಮಠ, ಕಿರಿಯ ಇಂಜಿನಿಯರ್ ಮಲ್ಲಿಕಾರ್ಜುನ ಹಬ್ಬಳಿ, ಅಧಿಕಾರಿಗಳಾದ ಬಸವರಾಜ ಹೆಬ್ಬಾಳ, ತಜಮುಲ್ ಹುಸೇನ್, ಮಲ್ಲಿಕಾರ್ಜುನ್, ಭೀಮಶೇನ್ ಜೋಶಿ, ಧನರಾಜ ಚೌವ್ಹಾಣ, ಪುರಸಭೆ ಸದಸ್ಯರಾದ ಶಿವುಬಾಯಿ ಕೊಂಬಿನ್, ಸಿದ್ದರಾಮ ಯಳಸಂಗಿ, ಚಂದನ್ ಮಹೇಂದ್ರಕರ್, ಪ್ರಮೀಳಾ ನರಿಬೋಳ, ಸಾಹೇಬಗೌಡ ಕಲ್ಲಾ, ಮೈಮುದ ಪಟೇಲ್, ಮರೆಪ್ಪ ಸರಡಗಿ ಸೇರಿದಂತೆ ಅನೇಕರಿದ್ದರು.