ಸುದ್ದಿಮೂಲ ವಾರ್ತೆ
ಬೆಂಗಳೂರು ಮಾ.28: ಗ್ರಾಹಕರಿಗೆ ಇದೇ ತಿಂಗಳಿನೊಳಗೆ ತಮ್ಮ ವ್ಯವಹಾರವನ್ನು ಮುಗಿಸಿಕೊಳ್ಳುವುದು ಸೂಕ್ತ. ಇಲ್ಲವಾದಲ್ಲಿ ಮುಂದಿನ ಏಪ್ರಿಲ್ ತಿಂಗಳಿನಲ್ಲಿ ಬ್ಯಾಂಕುಗಳ ರಜೆ ಸಾಲು ಸಾಲು ರಜೆಗಳಿದ್ದು, ಬ್ಯಾಂಕ್ ವ್ಯವಹಾರದಲ್ಲಿ ತೊಂದರೆಯಾಗಬಹುದು.
ಆದರಿಂದ ಈ ತಿಂಗಳಿನೊಳಗೆ ತಮ್ಮ ಬ್ಯಾಂಕಿಗೆ ಸಂಬಂಧಿಸಿದಂತಹ ಕಾರ್ಯಗಳನ್ನು ಇದೇ ತಿಂಗಳು ಮುಗಿಸಿಕೊಳ್ಳುವುದು ಸೂಕ್ತ .
ಆರ್ಬಿಐ ನೀಡಿರುವ ರಜೆಗಳ ಪಟ್ಟಿಯಲ್ಲಿ ಎರಡು ರೀತಿಯಾದಂತಹ ರಜೆಗಳನ್ನು ನೋಡಬಹುದು.
ರಾಷ್ಟ್ರೀಯ ರಜೆ ಇದು ರಾಷ್ಟ್ರಾದ್ಯಂತ ಬ್ಯಾಂಕುಗಳು ರಜೆಯನ್ನು ಹೊಂದಿದಂತಹ ರಜೆ. ಇನ್ನೂ ಕೆಲವೆಡೆ ಪ್ರಾದೇಶಿಕ ರಜೆಗಳಿದ್ದು, ಇದು ಆಯಾ ರಾಜ್ಯಗಳಿಗೆ ಅನ್ವಯಿಸುತ್ತದೆ.
ಏಪ್ರಿಲ್ ತಿಂಗಳು ಬ್ಯಾಂಕ್ ರಜೆ ಇದ್ದರು ಕೂಡ ಆನ್ ಲೈನ್ ಸೇವೆಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ.
ಏಪ್ರಿಲ್ ತಿಂಗಳಿನಲ್ಲಿ ಇರುವ ಒಟ್ಟಾರೆ ರಜೆಗಳ ವಿವರ ಹೀಗಿದೆ:
1) ಏ.1: ಖಾತೆಗಳನ್ನು ಮುಚ್ಚುವುದು
2) ಏ.2: ಭಾನುವಾರ
3) ಏ.4: ಮಹಾವೀರ ಜಯಂತಿ( ಅಹಮದಾಬಾದ್, ಐಜ್ವಾಲ್, ಬೇಲಾಪುರ್, ಬೆಂಗಳೂರು, ಭೋಪಾಲ್, ಚಂಡೀಗಢ, ಚೆನ್ನೈ, ಜೈಪುರ, ಕೋಲ್ಕತ್ತಾ, ಕಾನ್ಪುರ, ಲಕ್ನೋ, ಮುಂಬೈ, ನವದೆಹಲಿ, ರಾಯ್ಪುರ್ ರಾಂಚಿ)
4) ಏ.೦5: ಬಾಬು ಜಗಜೀವನ್ ರಾಮ್ ಜನ್ಮದಿನ ( ಹೈದರಾಬಾದ್)
5) ಏ.೦7: ಶುಭ ಶುಕ್ರವಾರ ( ಅಗರ್ತಲಾ, ಅಹಮದಾಬಾದ್, ಗುವಾಹಟಿ, ಜೈಪುರ, ಜಮ್ಮು, ಶಿಮ್ಲಾ, ಮತ್ತು ಶ್ರೀ ನಗರ ಹೊರತುಪಡಿಸಿ)
6) ಏ.೦8: ಎರಡನೇ ಶನಿವಾರ
7) ಏ.೦9: ಭಾನುವಾರ
8) ಏ.14: ಅಂಬೇಡ್ಕರ್ ಜಯಂತಿ/ಬೋಹಾಗ್ ಬಿಹು/ಚೀರೋಬಾ/ವೈಶಾಖಿ/ಬೈಸಾಖಿ/ತಮಿಳು ಹೊಸ ವರ್ಷ/ಮಹಾ ಬಿಸುಭಾ ಸಂಕ್ರಾಂತಿ/ಬಿಜು/ಬುಯಿಸು (ಐಜ್ವಾಲ್, ಭೋಪಾಲ್, ನವದೆಹಲಿ, ರಾಯ್ಪುರ, ಶಿಲ್ಲಾಂಗ್ ಮತ್ತು ಶಿಮ್ಲಾ ಹೊರತುಪಡಿಸಿ ಎಲ್ಲೆಡೆ)
9) ಏ.15 (ಶನಿ): ವಿಷು/ಬೋಹಾಗ್ ಬಿಹು/ಹಿಮಾಚಲ ದಿನ/ ಬಂಗಾಳಿ ಹೊಸ ವರ್ಷ (ಅಗರ್ತಲಾ, ಗುವಾಹಟಿ, ಕೊಚ್ಚಿ, ಕೋಲ್ಕತ್ತಾ, ಶಿಮ್ಲಾ ಮತ್ತು ತಿರುವನಂತಪುರಂ)
10) ಏ. 16: ಭಾನುವಾರ
11) ಏ.18 : ಶಬ್-ಐ-ಖಾದರ್ (ಜಮ್ಮು, ಶ್ರೀನಗರ)
12) ಏ. 21 : ಈದ್-ಉಲ್-ಫಿತರ್/ಗರಿಯಾ ಪೂಜೆ/ಜುಮಾತ್-ಉಲ್-ವಿದಾ (ಅಗರ್ತಲಾ, ಜಮ್ಮು, ಕೊಚ್ಚಿ, ಶ್ರೀನಗರ ಮತ್ತು ತಿರುವನಂತಪುರಂ)
13) ಏ. 22 : ರಂಜಾನ್ ಈದ್ (ಅಗರ್ತಲಾ, ಅಹಮದಾಬಾದ್, ಐಜ್ವಾಲ್, ಬೆಂಗಳೂರು, ಭುವನೇಶ್ವರ, ಚಂಡೀಗಢ, ಗ್ಯಾಂಗ್ಟಾಕ್, ಕೊಚ್ಚಿ, ಶಿಮ್ಲಾ ಮತ್ತು ತಿರುವನಂತಪುರಂ ಹೊರತುಪಡಿಸಿ ಎಲ್ಲೆಡೆ)
14) ಏ.23: ಭಾನುವಾರ
15) ಏ. 30: ಭಾನುವಾರ