ಸುದ್ದಿಮೂಲ ವಾರ್ತೆ
ಶಿಡ್ಲಘಟ್ಟ, ಮಾ.28: ತಾಲ್ಲೂಕಿನ ಕಸಬಾ ಹೋಬಳಿಯ ತುಮ್ಮನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಸೊರಕಾಯಲಹಳ್ಳಿ ಗ್ರಾಮದಲ್ಲಿ ಕೆಲವು ಮುಖಂಡರು ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಬಿಜೆಪಿ ಟಿಕೆಟ್ ಆಕಾಂಕ್ಷಿ ಸೀಕಲ್ ರಾಮಚಂದ್ರಗೌಡ ಹಾಗೂ ಮಾಜಿ ಶಾಸಕ ಎಂ.ರಾಜಣ್ಣ ನವರ ಸಮ್ಮುಖದಲ್ಲಿ ಸೊರಕಾಯಲಹಳ್ಳಿ ಗ್ರಾಮದ ಮುಖಂಡರಾದ ಅಂಬರೀಶ್, ಸಂತೋಷ್, ಶ್ರೀನಿವಾಸ್, ವೆಂಕಟರಾಯಪ್ಪ, ಬಲರಾಮ, ನಾರಾಯಣಮ್ಮ, ಈರಮ್ಮ, ಕಮಲಮ್ಮ ಮುಂತಾದವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದರು. ಈ ಸಂದರ್ಭದಲ್ಲಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸುರೇಂದ್ರ ಗೌಡ, ನಗರ ಪ್ರಾಧಿಕಾರ ಅಧ್ಯಕ್ಷ ಬಿ.ಸಿ ನಂದೀಶ್,ಸೀಕಲ್ ಆನಂದ್ ಗೌಡ, ಕೊತ್ತನೂರು ರವಿ,ಅರೀಕೆರೆ ಮುನಿರಾಜು,ಯುವಕರು ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು.