ಸುದ್ದಿಮೂಲ ವಾರ್ತೆ:
ಮಾ29: ರಾಜ್ಯದ 224 ಕ್ಷೇತ್ರಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮೇ 10 ರಂದು ವಿಧಾನ ಸಭೆ ಮತದಾನ ನಡೆಯಲಿದ್ದು, ಮೇ 13 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಇಂದಿನಿಂದಲೇ ನೀತಿಸಂಹಿತೆ ಜಾರಿಯಾಗಿದೆ. ಏಪ್ರಿಲ್ 13 ರಿಂದ ಏಪ್ರಿಲ್ 20 ರ ವರೆಗೆ ನಾಮ ಪತ್ರ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು ಅದಾದ ನಂತರ ಏಪ್ರಿಲ್ 21 ಕ್ಕೆ ಪರಿಶೀಲನೆ ನಡೆಸಲಾಗುವುದು ಮತ್ತು ನಾಮಪತ್ರ ವಾಪಸ್ ಪಡೆಯುವವರಿಗೆ ಏಪ್ರಿಲ್ 24 ಕೊನೆಯ ದಿನಾಂಕವಾಗಿರುತ್ತದೆ ಮೇ 10 ರಂದು ಚುನಾವಣೆ ನಡೆಯಲಿದ್ದು ಮೇ 13 ರಂದು ಚುನಾವಣ ಫಲಿತಾಂಶ ಪ್ರಕಟಗೊಳುವುದು. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ.
80 ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗವಿಕಲರಿಗೆ ಮನೆಯಲ್ಲಿ ಕುಳಿತು ಮತ ಚಲಾಯಿಸುವ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಕರ್ನಾಟಕದಲ್ಲಿ ಇದೇ ಮೋದಲ ಬಾರಿಗೆ ಈ ಅವಕಾಶವನ್ನು ನೀಡಲಾಗಿದೆ.
ಸರ್ಕಾರಿ ಕಾರುಗಳನ್ನು ಬಿಟ್ಟು ಖಾಸಗಿ ಕಾರುಗಳಲ್ಲಿ ತೆರಳಿದ ಶಾಸಕರು ಇಂದಿನಿಂದ ಸರ್ಕಾರಿ ಕಾರುಗಳನ್ನು ಉಪಯೋಗಿಸುವಂತಿಲ್ಲ, ಮತ್ತು ಯಾವುದೇ ಸರ್ಕಾರಿ ಕಾರ್ಯಕ್ರಮಗಳನ್ನು ನಡೆಸುವಂತಿಲ್ಲ ಎಂದು ಸಂಮಿತಿ ಜಾರಿಗೊಳಿಸಲಾಗಿದೆ.
ಒಟ್ಟು 224 ಕ್ಷೇತ್ರಗಳಲ್ಲಿ 36 ಪರಿಶಿಷ್ಟ ಜಾತಿ ಹಾಗೂ 15 ಪರಿಶಿಷ್ಟ ಪಂಗಡಗಳಿಗೆ ಮೀಸಲು ಕ್ಷೇತ್ರಗಳಾಗಿವೆ. ಚುನಾವಣೆ ಪಟ್ಟಿಯಲ್ಲಿ 5.2 ಕೋಟಿ ಜನ ಮತದಾರರಿದ್ದಾರೆ ಅವರಲ್ಲಿ 2.62 ಕೋಟಿ ಪುರುಷರು ಮತ್ತು 2.59 ಕೋಟಿ ಮಹಿಳೆಯರಿದ್ದಾರೆ. 12.15 ಲಕ್ಷ ಮತದಾರರು 80ಕ್ಕಿಂತ ಹೆಚ್ಚು ವರ್ಷದವರಿದ್ದಾರೆ. 15 ಸಾವಿರಕ್ಕೂ ಅಧಿಕ ಮಂದಿ 100 ವರ್ಷ ದಾಟಿದವರಿದ್ದಾರೆ.
ಹಿರಿಯ ನಾಗರಿಕರು, ಅಂಗವಿಕಲರು, ಲಿಂಗತ್ವ ಅಲ್ಪಸಂಖ್ಯಾತರು ಎಲ್ಲರೂ ಮತದಾನ ಮಾಡಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆ. 80 ವರ್ಷ ದಾಟಿದ ವೃದ್ಧರಿಗೆ ಮತ್ತು ಅಂಗವಿಕಲರಿಗೆ ಮನೆಯಿಂದಲೇ ಮತ ಚಲಾಯಿಸುವ ಅವಕಾಶವನ್ನು ಇದೇ ಮೊದಲ ಬಾರಿಗೆ ಕರ್ನಾಟಕದಲ್ಲಿನಡೆಯಲಿದೆ.
5.55 ಲಕ್ಷ ಮಂದಿ ಅಂಗವಿಕಲರಿದ್ದಾರೆ. 9.17 ಲಕ್ಷ ಹೊಸ ಮತದಾರರು ಪಟ್ಟಿಗೆ ಸೇರ್ಪಡೆಯಾಗಿದ್ದಾರೆ. 1.25 ಲಕ್ಷ ಅರ್ಜಿಗಳನ್ನು 17 ವರ್ಷ ದಾಟಿದ ಯುವಜನರಿಂದ ಸ್ವೀಕರಿಸಲಾಗಿತ್ತು. ಏಪ್ರಿಲ್ 1ರ ಒಳಗೆ 18 ವರ್ಷ ತುಂಬುವ ಯುವಜನರಿಗೆ ಮತದಾನಕ್ಕೆ ಅವಕಾಶ ಸಿಗಲಿದೆ.
ಜೇನುಕುರುಬ ಮತ್ತು ಕೊರಗ ಬುಡಕಟ್ಟು ಸಮುದಾಯಗಳಿಗಾಗಿ 40 ವಿಶೇಷ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು . 42,756 ಲಿಂಗತ್ವ ಅಲ್ಪಸಂಖ್ಯಾತರಿದ್ದು, 41 ಸಾವಿರದಷ್ಟು ಮಂದಿ ನೋಂದಣಿಯಾಗಿದ್ದಾರೆ. ಲಿಂಗತ್ವ ಅಲ್ಪಸಂಖ್ಯಾತ ಮತದಾರರಿಗೆ ವಿಶೇಷ ಒತ್ತು ನೀಡಲಾಗಿದೆ. ಅವರು ಯಾವುದೇ ಹಿಂಜರಿಕೆ ತೊರದೆ ಮತ ಚಲಾಯಿಸಬೇಕು ಎಂದು ಚುನಾವಣಾ ಆಯೋಗ ತಿಳಿಸಿದೆ