ಸುದ್ದಿಮೂಲ ವಾರ್ತೆ
ತುಮಕೂರು, ಮಾ.30: ಗುಬ್ಬಿ ಕ್ಷೇತ್ರದ ಮಾಜಿ ಶಾಸಕ ಎಸ್.ಆರ್. ಶ್ರೀನಿವಾಸ್ ಅವರು ಗುರುವಾರ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಜೆಡಿಎಸ್ ಶಾಸಕರಾಗಿದ್ದ ಅವರನ್ನು ಇತ್ತಿಚೆಗೆ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಕಳೆದ ವಾರ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಂದೇ ವಿಧಾನಸಭಾಧ್ಯಕ್ಷರು ಶ್ರೀನಿವಾಸ್ ಅವರ ರಾಜೀನಾಮೆಯನ್ನೂ ಅಂಗೀಕರಿಸಿದ್ದರು. ಈ ಹಿನ್ನೆಲೆಯಲ್ಲಿ ಅವರು ಗುರುವಾರ ಅಧಿಕೃತವಾಗಿ ಕಾಂಗ್ರೆಸ್ ಸೇರಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು.
ಗುಬ್ಬಿ ಕ್ಷೇತ್ರದಾದ್ಯಂತ ಹಾಲಿ ಶಾಸಕ ಎಸ್.ಆರ್ ಶ್ರೀನಿವಾಸ್ ಅಲೆ ಜೋರಾಗಿಯೇ ಇದೆ. ಈ ಕ್ಷೇತ್ರದ ಜನ ಇವರನ್ನು ಪ್ರೀತಿಯಿಂದ ವಾಸಣ್ಣ ಎಂದೇ ಕರೀತಾರೆ. ಶ್ರೀನಿವಾಸ್ ಅವರು ಪಕ್ಷೇತರ ನಿಂತರೂ ನಮಗೆ ಬೇಕು ಅಥವಾ ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ನಮಗೆ ಇವರೇ ಬೇಕು ಅನ್ನುವಷ್ಟರ ಮಟ್ಟಿಗೆ, ಏಸ್.ಆರ್ ಶ್ರೀನಿವಾಸ್, ಗುಬ್ಬಿ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದಾರೆ.
ಶೌರ್ಯ ಪ್ರಶಸ್ತಿ ಪಡೆದ ಏಕೈಕ ಶಾಸಕ
ಎಸ್.ಆರ್ ಶ್ರೀನಿವಾಸ್, 1977-78ರಲ್ಲಿ ಆಗಿನ್ನೂ ಯುವಕರು. ಚಿದಂಬರ ಆಶ್ರಮದಲ್ಲಿ ತೆರೆದ ಬಾವಿಯಲ್ಲಿ ಮುಳುಗುತ್ತಿದ್ದ ಬಾಲಕನನ್ನು ರಕ್ಷಿಸಿದ್ದಕ್ಕಾಗಿ, ಅಂದಿನ ರಾಜ್ಯಪಾಲ ಗೋವಿಂದ್ ನಾರಾಯಣ್ ಅವರಿಂದ ಶರ್ಯ ಪ್ರಶಸ್ತಿ ಪಡೆದರು. ಮುಂದೆ 2018ರ ಜೂನ್ 6 ರಂದು ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ಅವರಿಂದ, ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯನ್ನು ಮುನ್ನಡೆಸಿದ್ದು ದೊಡ್ಡ ಸಾಧನೆಯೇ ಸರಿ.
ಕ್ಷೇತ್ರದ ಜನರ ಪಾಲಿಗೆ ಪ್ರೀತಿಯ ವಾಸಣ್ಣ!
ಎಸ್.ಆರ್ ಶ್ರೀನಿವಾಸ್ ಅವರು ಗುಬ್ಬಿ ಕ್ಷೇತ್ರದಲ್ಲಿ ವಾಸಣ್ಣ ಅಂತಲೇ ಫೇಮಸ್. ಕೆಲವರಿಗಂತೂ ಎಸ್.ಆರ್ ಶ್ರೀನಿವಾಸ್ ಎಂದರೆ, ಥಟ್ ಅಂತ ಹೊಳೆಯೋದೇ ಇಲ್ಲ. ಅದೇ, ವಾಸಣ್ಣ ಅಂದಾಕ್ಷಣ.. ಓ ನಮ್ ವಾಸಣ್ಣ ಅವ್ರ ಅಂತಾ ಮಾತಿಗಿಳೀತಾರೆ. ವಾಸಣ್ಣ ಎಂಬ ಹೆಸರಿನಲ್ಲಿ ಗುಬ್ಬಿಯ ಜನ ಇವ್ರ ಮೇಲಿಟ್ಟಿರೋ ಪ್ರೀತಿ ಎದ್ದು ಕಾಣುತ್ತದೆ. ಭಾಷಣ ಯಾರು ಬೇಕಾದರೂ ಮಾಡ್ತಾರೆ, ವಾಸಣ್ಣ ಒಬ್ಬರೇ ಕೆಲಸ ಮಾಡ್ತಾರೆ ಎಂಬುದು ಕ್ಷೇತ್ರದ ಜನರ ಅಭಿಪ್ರಾಯ.
ಮೊದಲಿಗೆ 2000ದಲ್ಲಿ ರಾಜಕೀಯ ಪ್ರವೇಶಿಸಿದ ಎಸ್.ಆರ್. ಶ್ರೀನಿವಾಸ್ ಅವರು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಗೆಲುವು ಸಾಧಿಸಿದರು. ಬಳಿಕ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಶಾಸಕರಾದರು. ನಂತರ ಜೆಡಿಎಸ್ನಿಂದ ಸ್ಪರ್ಧಿಸಿ ಸತತ 3 ಬಾರಿ ಆಯ್ಕೆಯಾಗುವ ಮೂಲಕ ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಗುಬ್ಬಿ ಕ್ಷೇತ್ರವನ್ನು ಜೆಡಿಎಸ್ ಭದ್ರಕೋಟೆಯನ್ನಾಗಿ ಪರಿವರ್ತಿಸಿದರು.
ವೈಯಕ್ತಿಕ ಜೀವನ
ಎಸ್.ಆರ್ ಶ್ರೀನಿವಾಸ್ ಅವರು 1961ರ ಜುಲೈ 14ರಂದು ತುಮಕೂರಿನ ಗುಬ್ಬಿ ಕ್ಷೇತ್ರದ ರ್ವೇಗಾರನಪಾಳ್ಯ ಗ್ರಾಮದಲ್ಲಿ ರಾಮೇಗೌಡ-ಮಂಗಳಮ್ಮ ದಂಪತಿಯ ಮಗನಾಗಿ ಜನಿಸಿದರು. ಪತ್ನಿ ಭಾರತಿ ಶ್ರೀನಿವಾಸ್. ಇವರಿಗೆ ದುಷ್ಯಂತ್ ಮತ್ತು ತೇಜಸ್ವಿನಿ ಎಂಬ ಇಬ್ಬರು ಮಕ್ಕಳಿದ್ದಾರೆ.
ಜಿಲ್ಲಾ ಪಚಾಯತ್ ಸ್ಥಾನವನ್ನು ಗೆಲ್ಲುವ ಮೂಲಕ ರಾಜಕೀಯದಲ್ಲಿ ಮೊದಲ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದ ವಾಸಣ್ಣ, ಮತ್ತೆಂದೂ ಹಿಂತಿರುಗಿ ನೋಡಲಿಲ್ಲ. 2004 ರಲ್ಲಿ, ಗುಬ್ಬಿ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಆಯ್ಕೆಯಾದ್ರು. ಮುಂದೆ 2008, 2013 ಮತ್ತು 2018 ರಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆದ್ದರು.
ಸತತ ನಾಲ್ಕು ಬಾರಿ ಗೆದ್ದಿರುವ ಶ್ರೀನಿವಾಸ್ ಅವರು, ಬಯಸಿದ್ದರೆ ಐಷಾರಾಮಿ ಜೀವನ ನಡೆಸಬಹುದಿತ್ತು. ಆದರೆ, ಅವರದ್ದು ಸಾದಾ ಸೀದಾ ವ್ಯಕ್ತಿತ್ವ. ಕ್ಷೇತ್ರದ ಜನ ಬಯಸಿದಾಗೆಲ್ಲ ಕೈಗೆ ಸಿಗುತ್ತಾರೆ. ಅವರ ಕಷ್ಟ ಸುಖಗಳನ್ನು ಆಲಿಸುತ್ತಾರೆ. ಕೈಲಾದ ನೆರವು ನೀಡುತ್ತಾರೆ. ಮನೆ ಬಾಗಿಲಿಗೆ ಯಾರೇ ಹೋದರೂ, ಭೇದ ಭಾವವಿಲ್ಲದೇ ಆತ್ಮೀಯವಾಗಿ ಕಾಣುತ್ತಾರೆ. ಸದ್ದಿಲ್ಲದೇ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಾರೆ. ಇಷ್ಟು ಸಾಕಲ್ಲವೇ ಇವರು ಸೋಲಿಲ್ಲದ ಸರದಾರನಾಗಲು.
ಅಭಿವೃದ್ಧಿ ಕೆಲಸಗಳೇ ಗೆಲುವಿನ ರಹಸ್ಯ!
ಗುಬ್ಬಿ ಬಸ್ ನಿಲ್ದಾಣದಲ್ಲಿ 30 ಲಕ್ಷ ರೂ. ಮೊತ್ತದ ಹೈಟೆಕ್ ಶೌಚಾಲಯ & 45 ಲಕ್ಷ ರೂ. ಸಿ.ಸಿ ರಸ್ತೆ ಸೇರಿ 75 ಲಕ್ಷ ಮೊತ್ತದ ಅಭಿವೃದ್ಧಿ ಕಾಮಗಾರಿ ಶಾಸಕರ ಅನುದಾನದಡಿ ತೊರೆಹಳ್ಳಿ ಗ್ರಾಮದ ರಸ್ತೆ ನಿರ್ಮಾಣ.
88 ಲಕ್ಷ ರೂಪಾಯಿ ವೆಚ್ಚದಲ್ಲಿ ಶ್ರೀ ಬೇವಿನ ಗುಡ್ಡಪ್ಪ ಸ್ವಾಮಿ ದೇವಸ್ಥಾನದ ರಸ್ತೆ ಅಭಿವೃದ್ಧಿ.
2018-19ನೇ ಸಾಲಿನ ಅರ್ಹ ಲಾನುಭವಿ ರೈತರಿಗೆ ಮೋಟಾರು ಪಂಪ್ ಪೂರಕ ಸಾಮಗ್ರಿಗಳ ವಿತರಣೆ.
ಕಾಟನಹಳ್ಳಿಯಲ್ಲಿ 36 ಲಕ್ಷ ರೂ. ಅನುದಾನದಲ್ಲಿ ಚೆಕ್ ಡ್ಯಾಮ್ ನಿರ್ಮಾಣ ಕಾಮಗಾರಿಗೆ ಚಾಲನೆ.
ಶಿವಪುರ ಗ್ರಾ.ಪಂ ವ್ಯಾಪ್ತಿಯ ಹಾಗಲವಾಡಿ ರಸ್ತೆಯಿಂದ ಮತ್ತಿಕೆರೆವರೆಗೆ 50 ಲಕ್ಷ ರೂ. ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲೂ #ಗುಬ್ಬಿಯಹೆಮ್ಮೆ #ವಾಸಣ್ಣಮತ್ತೊಮ್ಮೆ #ಗುಬ್ಬಿವಾಸಣ್ಣ #ಗುಬ್ಬಿಶಾಸಕ ಹೀಗೆ ಹಲವು ಟ್ಯಾಗ್ಲೈನ್ಗಳನ್ನು ಹಾಕಿ, ಅವರ ಅಭಿಮಾನಿಗಳು ಪ್ರಚಾರ ಮುಂದುವರಿಸಿರೋದು, ಕ್ಷೇತ್ರದ ಜನತೆಗೆ ಶ್ರೀನಿವಾಸ್ ಅವರ ಮೇಲಿನ ಅಭಿಮಾನಕ್ಕೆ ಹಿಡಿದ ಕನ್ನಡಿ.ಮಂಗಳೂರು, ಮಾ,30: ದೈವದ ನರ್ತಕನ್ನು ದೈವ ನರ್ತನೆ ಸೇವೆ ಮಾಡುತ್ತಿದ್ದಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಈ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ಅನೇಕ ವರ್ಷಗಳಿಂದ ನಡೆದುಕೊಂಡು ಬರುತ್ತಿದಂತಹ ಪದ್ದತಿಯಾಗಿದ್ದು ಅಲಾವರು ವರ್ಷದಿಂದ ದೈವ ನರ್ತಕನಾಗಿ ಸೇವೆ ಸಲ್ಲಿಸುತ್ತಿದ್ದ ಎಡಮಂಗಲ ಗ್ರಾಮದ ಮೂಲಂಗೀರಿಯ ಕಾಂತು ಅಜಿಲ 59 ವರ್ಷದ ವ್ಯಕ್ತಿ ಯಾಗಿದ್ದು ನರ್ತಿಸುತ್ತಿರುವಾಗಲೇ ಕುಸಿದು ಬಿದ್ದು ಸಾವನ್ನಪ್ಪಿದ್ದಾನೆ.
ಕಾಂತು ಅಜಿಲ ಅವರು ಅಲಾವರು ವರ್ಷಗಳಿಂದ ಗ್ರಾಮದ ಕೂಡುಗಟ್ಟಿಗೆ ಸಂಬಂಧಿಸಿದಂತೆ ದೈವಾರಾದಕರಾಗಿ ಗ್ರಾಮದೈವಗಳ ಪರಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದರು.
ಶಿರಾಡಿ ಮತ್ತು ಕಲ್ಕುಡ ಎಂಬ ಎರಡು ದೇವರ ನರ್ತನೆ ಸಂದರ್ಭದಲ್ಲಿ ಶಿರಾಡಿ ದೈವದ ನರ್ತಕನಾಗಿ ಸೇವೆ ಸಲ್ಲಿಸುತ್ತಿದ್ದಾಂತಹ ವ್ಯಕ್ತಿಯು ಏಕಾಏಕಿ ಕುಸಿದು ಬಿದಿದ್ದನ್ನು ಕಂಡ ಸ್ಥಳೀಯರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡ ಜೀವ ಉಳಿಯಲಿಲ್ಲ. ಹೃದಯಾಘಾತದಿಂದ ಸಾವನ್ನಪ್ಪಿರುವ ಬಗ್ಗೆ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ .